More

    ಇಂದಿರಾ ಕ್ಯಾಂಟೀನ್ ಊಟ ಖದೀಮರ ಪಾಲು: ಸುಳ್ಳು ಲೆಕ್ಕ ಕೊಟ್ಟು ಸಿಕ್ಕಿ ಬಿದ್ರು!

    ಸತೀಶ್ ಕೆ. ಬಳ್ಳಾರಿ
    ಬೆಂಗಳೂರು: ಲಾಕ್​ಡೌನ್ ಜಾರಿಯಾದ ಆರಂಭದ ದಿನಗಳಲ್ಲಿ ಕೂಲಿ ಕಾರ್ವಿುಕರು, ಸಾವಿರಾರು ನಿರ್ಗತಿಕರಿಗೆ ಇಂದಿರಾ ಕ್ಯಾಂಟಿನ್ ಮೂಲಕ ನಿತ್ಯ ಲಕ್ಷಾಂತರ ಆಹಾರ ಪೊಟ್ಟಣಗಳನ್ನು ಉಚಿತ ನೀಡುತ್ತಿದ್ದ ಬಿಬಿಎಂಪಿ, ಹಣ ಪಾವತಿ ನಿಗದಿಪಡಿಸಿದ ನಂತರ ಆಹಾರದ ಸಂಖ್ಯೆ ದಿಢೀರ್ 70 ಸಾವಿರಕ್ಕೆ ಕುಸಿದಿದೆ. ಇದರಿಂದಾಗಿ ಕ್ಯಾಂಟೀನ್ ಊಟದಲ್ಲಿ ಸುಳ್ಳು ಲೆಕ್ಕ ನೀಡಿ ಕೋಟ್ಯಂತರ ರೂ. ಪೋಲು ಮಾಡಲಾಗಿದೆ ಎಂಬ ಅನುಮಾನ ದಟ್ಟವಾಗಿದೆ.

    ಲಾಕ್​ಡೌನ್ ವೇಳೆ ರಾಜ್ಯದಲ್ಲಿ ಯಾರೊಬ್ಬರೂ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಮಾ.25ರಿಂದ ಇಂದಿರಾ ಕ್ಯಾಂಟಿನ್​ನಲ್ಲಿ ಉಚಿತ ಆಹಾರ ನೀಡಲು ಆರಂಭಿಸಲಾಯಿತು. ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿನಿತ್ಯ 1.30 ಲಕ್ಷ ಊಟ ಸರಬರಾಜು ಮಾಡುತ್ತಿದ್ದ ಕ್ಯಾಂಟೀನ್​ಗಳು ಉಚಿತ ಊಟ ಹಂಚಿಕೆ ಆರಂಭಿಸಿದ ನಂತರ ಒಮ್ಮೆಲೇ 3 ಲಕ್ಷದವರೆಗೂ ಊಟ ಹಂಚಲು ಮುಂದಾದವು. ವಂಚನೆ ಅನುಮಾನದ ಹಿನ್ನೆಲೆಯಲ್ಲಿ ಎಚ್ಚೆತ್ತ ಸರ್ಕಾರ ಮೊದಲಿನಂತೆ ದರ ಪಾವತಿಸಿ ಪಡೆಯುವಂತೆ ಸೂಚಿಸಿತ್ತು.

    ಲಾಕ್​ಡೌನ್​ನ ಮೊದಲ 12 ದಿನ ರಾಜ್ಯಾದ್ಯಂತ ವಲಸೆ, ಕಟ್ಟಡ ಕೂಲಿ ಕಾರ್ವಿುಕರು ಮತ್ತು ಬಡವರಿಗೆ ಸರ್ಕಾರ ಉಚಿತ ಊಟ ನೀಡಿದೆ. ಆದರೆ, ಈ ವೇಳೆ ರಾಜ್ಯದಲ್ಲಿ ಎಲ್ಲ ಇಂದಿರಾ ಕ್ಯಾಂಟೀನ್​ಗಳಿಂದ ಊಟ, ಅರ್ಹರಿಗೆ ಸೇರದೆ ರಾಜಕೀಯ ನಾಯಕರ ಬೆಂಬಲಿಗರ ಮನೆ ಸೇರುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರ್ಗತಿಕರು, ಕೂಲಿ ಕಾರ್ವಿುಕರಿಗೆ ತಾವೇ ಹಂಚಿಕೆ ಮಾಡಿ ಶಾಸಕರು, ಪಾಲಿಕೆ ಸದಸ್ಯರು ಪ್ರಚಾರ ಪಡೆಯಲು ಮುಂದಾಗಿದ್ದರು. ಅಧಿಕಾರಿಗಳು ಕೊಡಲು ಹಿಂದೇಟು ಹಾಕಿದರೂ, ಜನಪ್ರತಿನಿಧಿಗಳ ಪ್ರಭಾವಕ್ಕೆ ಮಣಿದು ಆಹಾರದ ಪೊಟ್ಟಣಗಳನ್ನು ಇಂದಿರಾ ಕ್ಯಾಂಟಿನ್​ನಿಂದ ಒದಗಿಸುತ್ತಿದ್ದರು.

    ಇಂದಿರಾ ಕ್ಯಾಂಟೀನ್ ಊಟ ಖದೀಮರ ಪಾಲು: ಸುಳ್ಳು ಲೆಕ್ಕ ಕೊಟ್ಟು ಸಿಕ್ಕಿ ಬಿದ್ರು!ಊಟ ಸಂಖ್ಯೆಯಲ್ಲಿ ಭಾರಿ ಇಳಿಕೆ ಇಂದಿರಾ ಕ್ಯಾಂಟೀನ್ ಊಟ ಹಂಚಿಕೆ ಯಲ್ಲಿ ರಾಜಕೀಯ ನಾಯಕರ ಪ್ರಚಾರ ಎಂದು ಏ.2 ಮತ್ತು ಏ.3 ರಂದು ಹಲವು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಯಿತು. ಇದಾದ ನಂತರ ಏ.4 ರಂದು 1.73 ಲಕ್ಷ ಜನರಿಗೆ ಊಟ ಹಂಚಿಕೆ ಮಾಡಲಾಗಿತ್ತು. ಅಂದು ಸಿಎಂ ಬಿ.ಎಸ್. ಯಡಿಯೂರಪ್ಪ ಇಂದಿರಾ ಕ್ಯಾಂಟೀನ್ ಉಚಿತ ಊಟ ವಿತರಣೆ ನಿಲ್ಲಿಸುವಂತೆ ಆದೇಶ ಹೊರಡಿಸಿ ದರು. ಆಗ ಕೆಲವು ರಾಜಕೀಯ ನಾಯಕರು ಹಾಗೂ ಸಂಘ ಸಂಸ್ಥೆಗಳು ಸರ್ಕಾರದ ನಡೆಯನ್ನು ವಿರೋಧಿಸಿ 2 ದಿನ ಹಣ ಪಾವತಿಸಿ ಇಂದಿರಾ ಕ್ಯಾಂಟೀನ್ ಊಟವನ್ನು ಬಡವರಿಗೆ ಹಂಚಿದರು. ಬಳಿಕ ಇದೀಗ ಊಟದ ಸಂಖ್ಯೆ ನಿತ್ಯ 70 ಸಾವಿರಕ್ಕೆ ಇಳಿಕೆಯಾಗಿದೆ.

    ಅಧಿಕಾರಿಗಳ ನಿರ್ಲಕ್ಷ್ಯ: ಇಂದಿರಾ ಕ್ಯಾಂಟೀನ್ ಗುತ್ತಿಗೆ ಸಂಸ್ಥೆಗಳು 1 ಉಪಾಹಾರ ಮತ್ತು 2 ಊಟಕ್ಕೆ ಜನರಿಂದ 25 ರೂ. ಪಡೆದರೆ, ಸರ್ಕಾರದಿಂದ 35 ರೂ. (ಸಬ್ಸಿಡಿ) ಪಡೆಯುತ್ತವೆ. ಅದರೆ ಉಚಿತ ಊಟಕ್ಕೆ ಸರ್ಕಾರ 1 ತಿಂಡಿ 2 ಊಟಕ್ಕೆ 60 ರೂ. ಪಾವತಿಸಬೇಕಾಗುತ್ತದೆ. ಅಂದರೆ 12 ದಿನಗಳಲ್ಲಿ ಅಂದಾಜು 6 ಕೋಟ ರೂ.ಗೂ ಅಧಿಕ ವೆಚ್ಚ ಮಾಡಲಾಗಿದೆ. ಈ ವೇಳೆ ಗುತ್ತಿಗೆ ಸಂಸ್ಥೆಗಳು ತಪು್ಪ ಲೆಕ್ಕ ನೀಡಿರುವ ಅನುಮಾನವಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

    ಏರಿಕೆ ಕಂಡಿದ್ದ ಊಟದ ಸರಬರಾಜು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾ.26 ರಂದು 64 ಸಾವಿರ ಜನರಿಗೆ ಉಚಿತ ಊಟ ಹಂಚಿಕೆ ಮಾಡಲಾಯಿತು. 6 ದಿನಗಳಲ್ಲಿ (ಮಾ.31ರ ವೇಳೆಗೆ) ಈ ಸಂಖ್ಯೆ 2.93 ಲಕ್ಷಕ್ಕೆ ಏರಿಕೆಯಾಯಿತು. ಏ.2ರಂದು 3.01 ಲಕ್ಷ ಆಹಾರ ವಿತರಣೆ ಮಾಡಲಾಗಿದೆ ಎಂದು ಸರ್ಕಾರಕ್ಕೆ ವರದಿ ನೀಡಲಾಯಿತು. ತಪು್ಪ ಲೆಕ್ಕದ ಮಾಹಿತಿ ಬಗ್ಗೆ ಸಂಶಯಗೊಂಡ ಸರ್ಕಾರ ಏ.4ರಿಂದ ಉಚಿತ ಊಟ ಸ್ಥಗಿತಗೊಳಿಸಿ ಮೊದಲಿನಂತೆ 5 ರೂ.ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ತಲಾ 10 ರೂ. ಪಾವತಿ ಪದ್ಧತಿ ಜಾರಿಗೊಳಿಸಿತ್ತು.

    ‘ಫೇಮ್ ಇಂಡಿಯಾ-2’ ಎಲೆಕ್ಟ್ರಿಕ್ ಬಸ್ ಖರೀದಿಗೆ ಮತ್ತೊಮ್ಮೆ ಟೆಂಡರ್!

    VIDEO: ಇಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ರೆ ಭೂತಬಂಗ್ಲೆ ವಾಸ ಗ್ಯಾರೆಂಟಿ !: ಸ್ಥಳೀಯ ರಾಜಕಾರಣಿಯೊಬ್ಬರ ಕ್ರಮ ಇದೀಗ ಜಗದ ಮನೆಮಾತು..

    ಬೆಂಗಳೂರಿನಲ್ಲಿ ಶೇಕಡ 70 ಕುಸಿಯಿತು ತಾಳೆ ಎಣ್ಣೆ ವ್ಯಾಪಾರ!

    ಲಾಕ್​ಡೌನ್ ನಿಯಮ ಉಲ್ಲಂಘಿಸಿದ ವಾಹನಗಳೆಷ್ಟು?- ಪೊಲೀಸರ ವಶದಲ್ಲಿರುವ ವಾಹನಗಳ ಲೆಕ್ಕಾಚಾರ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts