More

    ಬೆಂಗಳೂರಿನಲ್ಲಿ ಶೇಕಡ 70 ಕುಸಿಯಿತು ತಾಳೆ ಎಣ್ಣೆ ವ್ಯಾಪಾರ!

    ಬೆಂಗಳೂರು: ಲಾಕ್​ಡೌನ್ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ವರ್ತಕರಿಗೆ ಆರ್ಥಿಕವಾಗಿ ಭಾರಿ ಪೆಟ್ಟು ಬಿದ್ದಿದೆ. ಅದರಲ್ಲೂ ತಾಳೆಎಣ್ಣೆ ಮಾರಾಟ ಭಾರೀ ಕುಸಿತ ಕಂಡಿದೆ.

    ಮಾ. 23ರಿಂದ ಹೋಟೆಲ್, ರೆಸ್ಟೋರೆಂಟ್​ಗಳು ಹಾಗೂ ಬೀದಿಬದಿಗಳಲ್ಲಿ ತಿಂಡಿ, ತಿನಿಸುಗಳ ಮಾರಾಟ ನಿಷೇಧಿಸಿರುವುದರಿಂದ ಪಾಮ್ ಆಯಿಲ್ ಸಗಟು ಮಾರಾಟ ಕುಸಿದಿದೆ. ಪ್ರತಿ ತಿಂಗಳು 1 ಲಕ್ಷ ಬಾಕ್ಸ್ ಪಾಮ್ ಆಯಿಲ್ ಮಾರಾಟವಾಗುತ್ತಿತ್ತು. ಈಗ ಯಶವಂತಪುರ ಎಪಿಎಂಸಿ ಹಾಗೂ ನ್ಯೂ ತರಗುಪೇಟೆಯಲ್ಲಿ ಶೇ.70 ಆಯಿಲ್ ಮಾರಾಟ ಕುಸಿತವಾಗಿದೆ. ಹೋಟೆಲ್, ರೆಸ್ಟೋರೆಂಟ್​ಬಂದ್ ಆಗಿರುವುದರಿಂದ ತಾಳೆಎಣ್ಣೆ ಮಾರಾಟ ಕುಸಿಯಲು ಕಾರಣ ಎಂದು ವ್ಯಾಪಾರಸ್ಥರು ಹೇಳುತ್ತಾರೆ.

    ಖರೀದಿಗೆ ಜನರೇ ಇಲ್ಲ: ನಗರದಲ್ಲಿದ್ದ ಶೇ.50 ಜನತೆ ತಮ್ಮ ಊರುಗಳಿಗೆ ತೆರಳಿದ್ದಾರೆ. ಇದರಿಂದ ಎಪಿಎಂಸಿ ಮತ್ತು ಸಗಟು ಮಾರುಕಟ್ಟೆಯಲ್ಲಿ ಖರೀದಿಗೆ ಜನರೇ ಬರುತ್ತಿಲ್ಲ. ಎಣ್ಣೆಯ ದರ ನೆಲ ಕಚ್ಚಿದ್ದರೂ ಕೊಳ್ಳುವವರೇ ಇಲ್ಲದಂತಾಗಿದೆ ಎಂದು ಖಾದ್ಯ ತೈಲ ಮಾರಾಟ ಪ್ರತಿನಿಧಿ ಅಶೋಕ್ ಮಾಹಿತಿ ನೀಡಿದ್ದಾರೆ.

    ಸ್ವದೇಶಿ ಪದಾರ್ಥಗಳಿಗೆ ಒತ್ತು ನೀಡಿ: ಮಲೇಷ್ಯಾ, ಇಂಡೋನೇಷ್ಯಾದಿಂದ ಪಾಮ್​ಯಿುಲ್ ಆಮದು ಮಾಡಿಕೊಳ್ಳುತ್ತಿದ್ದೇವೆ. ಸೂರ್ಯಕಾಂತಿ ಎಣ್ಣೆ ಬಳಸುವುದಿಂದ ಆರೋಗ್ಯಕ್ಕೂ ಒಳ್ಳೆಯದು ಹಾಗೂ ಇಲ್ಲಿನ ಬೆಳೆಗಾರರಿಗೂ ಸಹಾಯವಾಗುತ್ತದೆ. ಸ್ವದೇಶಿ ಪದಾರ್ಥ ಬಳಕೆ ಬಗ್ಗೆ ಈಗಲಾದರೂ ಜನ ಯೋಚಿಸಬೇಕಿದೆ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.

    ಸೂರ್ಯಕಾಂತಿ ಎಣ್ಣೆ ಬಳಕೆ ಹೆಚ್ಚಳ:ಬಡವರಿಗೆ ಉಚಿತ ಆಹಾರ ಕಿಟ್ ವಿತರಿಸಿದ ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು ಸೂರ್ಯ ಕಾಂತಿ ಪ್ಯಾಕೇಟ್​ಗಳನ್ನೇ ನೀಡಿದ್ದಾರೆ. ಹೀಗಾಗಿ ಸೂರ್ಯಕಾಂತಿ ಎಣ್ಣೆ ಮಾರಾಟ 3 ಪಟ್ಟು ಹೆಚ್ಚಳವಾಗಿದೆ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.

    ಲಾಕ್​ಡೌನ್ ಹಿನ್ನೆಲೆ ಖಾದ್ಯ ತೈಲಗಳ ಸಂಗ್ರಹಣೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ರಾಜ್ಯದಲ್ಲಿ ಒಂದು ತಿಂಗಳಿಗೆ ಆಗುವಷ್ಟು ದಾಸ್ತಾನು ಇದೆ.
    | ರಾಜು ಸಗಟು ಪೂರೈಕೆದಾರ

    ಲಾಕ್​ಡೌನ್ ಅವಧಿಯಲ್ಲಿ ರಕ್ತದಾನ ಶಿಬಿರ ನಡೆಸುವುದಕ್ಕೆ ಇಲ್ಲ ಅಡ್ಡಿ: ನೀವೂ ರಕ್ತದಾನ ಮಾಡಿ

    VIDEO: ಇಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ರೆ ಭೂತಬಂಗ್ಲೆ ವಾಸ ಗ್ಯಾರೆಂಟಿ !: ಸ್ಥಳೀಯ ರಾಜಕಾರಣಿಯೊಬ್ಬರ ಕ್ರಮ ಇದೀಗ ಜಗದ ಮನೆಮಾತು..

    ಬೆಳ್ಳಂಬೆಳಗ್ಗೆಯೇ ಗುಡುಗು ಮಿಂಚಿನ ಸಹಿತ ಬೆಂಗಳೂರಿನಲ್ಲಿ ವರ್ಷಧಾರೆ: ರಾಜ್ಯದ ಹಲವೆಡೆ ಮಳೆಯಾದ ಬಗ್ಗೆ ವರದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts