More

    ಭದ್ರಾವತಿಯ ಇಂದಿರಾ ಕ್ಯಾಂಟೀನ್‌ಗೆ ಬಯೋ ಗ್ಯಾಸ್ ಬಲ!

    ಭದ್ರಾವತಿ: ಆಹಾರದ ತ್ಯಾಜ್ಯಗಳಿಂದ ಉತ್ಪಾದನೆಗೊಳ್ಳಲಿರುವ ಬಯೋಗ್ಯಾಸ್ ಮೂಲಕ ಇಂದಿರಾ ಕ್ಯಾಂಟೀನ್‌ನಲ್ಲಿ ಅಡುಗೆ ತಯಾರಿಸಲು ಇಲ್ಲಿನ ನಗರಸಭೆ ಮುಂದಾಗಿದ್ದು ಇನ್ನೊಂದು ವಾರದಲ್ಲಿ ಯೋಜನೆಗೆ ಚಾಲನೆ ದೊರೆಯಲಿದೆ.

    ಹಳೇನಗರದ ಸಂತೆ ಮೈದಾನದ ಬಳಿ ಇರುವ ಇಂದಿರಾ ಕ್ಯಾಂಟೀನ್‌ಗೆ ಹೊಂದಿಕೊಂಡಂತೆ ಹಿಂಭಾಗದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ 2 ಟನ್ ಸಾಮರ್ಥ್ಯದ ಬಯೋಗ್ಯಾಸ್ ಘಟಕ ಸ್ಥಾಪಿಸಲಾಗಿದೆ. ಕಲ್ಯಾಣ ಮಂಟಪ, ಸಮುದಾಯ ಭವನ, ಹೋಟೆಲ್‌ಗಳಿಂದ ನಿತ್ಯ ದೊರೆಯುವ ಆಹಾರ ತ್ಯಾಜ್ಯಗಳನ್ನು ಬಳಸಿ ಪರಿಸರ ಸ್ನೇಹಿ ಇಂಧನ ಉತ್ಪಾದಿಸುವ ಯೋಜನೆ ಕೈಗೊಂಡಿರುವುದರಿಂದ ಆಹಾರ ಉತ್ಪಾದನೆಯ ವೆಚ್ಚ ಕೂಡ ಕಡಿಮೆಯಾಗಲಿದೆ. ಬಯೋಗ್ಯಾಸ್ ನಿರ್ಮಾಣದ ಜವಾಬ್ದಾರಿಯನ್ನು ಗ್ರಿನೇರಿಯಾ ರಿನ್ಯೂವಬಲ್ ಟೆಕ್ನೋಲಜಿಸ್ ಎಂಬ ಕಂಪನಿಗೆ ನೀಡಲಾಗಿದೆ.
    ನಗರದಲ್ಲಿ 2 ಇಂದಿರಾ ಕ್ಯಾಂಟೀನ್‌ಗಳಿದ್ದು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಇರುವ ಕ್ಯಾಂಟೀನ್‌ನಲ್ಲಿ ಸ್ಥಳಾವಕಾಶ ಇಲ್ಲದ ಕಾರಣ ಸಂತೇ ಮೈದಾನದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಪ್ಲಾಂಟ್ ಅಳವಡಿಸಲಾಗಿದೆ. ಘಟಕ ಉದ್ಘಾಟನೆ ನಂತರ ಸಂತೆ ಮೈದಾನದ ಕ್ಯಾಂಟೀನ್‌ನಿಂದಲೇ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಕ್ಯಾಂಟೀನ್‌ಗೂ ಆಹಾರ ಪೂರೈಕೆಯಾಗಲಿದೆ. ಇದರಿಂದ ನಗರಸಭೆಗೆ ಅಡುಗೆ ಅನಿಲದ ಖರ್ಚು ಕಡಿಮೆಯಾಗಲಿದೆ. ಈಗಾಗಲೇ ಒಣಕಸ ಸಂಗ್ರಹಿಸಿ ಗೊಬ್ಬರ ತಯಾರಿಸುವ ಮೂಲಕ ರೈತರಿಗೆ ಕಡಿಮೆ ದರದಲ್ಲಿ ನಗರಸಭೆ ಮಾರಾಟ ಮಾಡುತ್ತಿದೆ.

    ಪರಿಸರ ಸ್ನೇಹಿ ಅನಿಲ ಉತ್ಪಾದನೆಗೆ ನಗರಸಭೆಯಿಂದ ಗುತ್ತಿಗೆ ನೀಡಲಾಗಿದ್ದು, ಕಾಮಗಾರಿ ಮುಗಿದಿದೆ. ಮುಂದಿನ ವಾರ ಉದ್ಘಾಟನೆ ಮಾಡಲಾಗುವುದು. ಈ ಘಟಕದಿಂದ ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರ ಉತ್ಪಾದನೆಯ ಖರ್ಚು ಕಡಿಮೆಯಾಗಲಿದೆ.
    ಮನುಕುಮಾರ್
    ಪೌರಾಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts