More

    4 ಕೋಟಿ ರೂ. ವೆಚ್ಚದಲ್ಲಿ ಕನ್ನಡ ಭವನ ನಿರ್ಮಾಣ

    ಭದ್ರಾವತಿ: ಹೊಸಸಿದ್ದಾಪುರ ಬಡಾವಣೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ಗೆ ಸೇರಿದ 100/80 ಅಳತೆಯ ನಿವೇಶನದಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಿಸಲು ಸಕಲ ಸಿದ್ಧತೆ ನಡೆದಿದ್ದು ಜಿಲ್ಲಾಧ್ಯಕ್ಷರ ಅನುಮತಿ ಮೇರೆಗೆ ಕನ್ನಡ ಸಾಹಿತ್ಯ ಭವನ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷೆಯನ್ನಾಗಿ ನನ್ನನ್ನು ಆಯ್ಕೆ ಮಾಡಲಾಗಿದೆ. ಅದರಂತೆ ಕಾರ್ಯಕಾರಿಣಿ ಸಮಿತಿಯನ್ನೂ ರಚಿಸಲಾಗಿದೆ ಎಂದು ಸಾಹಿತಿ ಡಾ.ವಿಜಯಾದೇವಿ ಹೇಳಿದರು.

    ಜಿಲ್ಲೆಯ ಪ್ರತಿ ಕನ್ನಡಿಗರು, ಕನ್ನಡಾಭಿಮಾನಿಗಳು, ಚಿಂತಕರು, ಸಾಹಿತಿಗಳು ಹಾಗೂ ಜನಪ್ರತಿನಿಧಿಗಳಿಂದ ದೇಣಿಗೆ ಸಂಗ್ರಹಿಸಿ ಕಟ್ಟಡ ನಿರ್ಮಿಸಲು ತೀರ್ಮಾನಿಸಿದ್ದು ಸುಮಾರು 4 ಕೋಟಿ ರೂ. ಅಂದಾಜು ವೆಚ್ಚ ನಿರೀಕ್ಷಿಸಲಾಗಿದೆ. 3 ಅಂತಸ್ಥಿತ ಕಟ್ಟಡದಲ್ಲಿ ಸಾಹಿತ್ಯ ಚಟುವಟಿಕೆಗಳು, ಸಭೆ ಸಮಾರಂಭಗಳು ನಡೆಯಲಿವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಉದ್ಯಮಿ ಬಿ.ಕೆ.ಜಗನ್ನಾಥ್ ಮಾತನಾಡಿ, ಸಾಹಿತ್ಯ ಭವನ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ. ಕ್ಷೇತ್ರದ ಶಾಸಕರಿಂದಲೂ ಹೆಚ್ಚಿನ ಸಹಕಾರ ಸಿಗಲಿದೆ ಎಂದರು. ಕಸಾಪ ತಾಲೂಕು ಅಧ್ಯಕ್ಷ ಕೋಡ್ಲುಯಜ್ಞಯ್ಯ, ಸಮಿತಿ ಉಪಾಧ್ಯಕ್ಷ ಪ್ರಭಾಕರ ಬೀರಯ್ಯ, ಎಂ.ಇ.ಜಗದೀಶ್, ಸಿ.ಜಯಪ್ಪ ಹೆಬ್ಬಳಗೆರೆ, ಎಂ.ಎಸ್.ಸುಧಾಮಣಿ, ಪ್ರಕಾಶ್, ಬಿ.ಎಲ್.ಮೋಹನ್‌ಕುಮಾರ್ ಇದ್ದರು.

    ಸಮಿತಿಯ ಸದಸ್ಯರು: ಡಾ. ವಿಜಯಾದೇವಿ(ಅಧ್ಯಕ್ಷೆ), ಶಾಸಕ ಬಿ.ಕೆ.ಸಂಗಮೇಶ್ವರ್(ಗೌರವಾಧ್ಯಕ್ಷ), ಉದ್ಯಮಿ ಬಿ.ಕೆ.ಜಗನ್ನಾಥ್, ಪ್ರಭಾಕರ ಬೀರಯ್ಯ(ಉಪಾಧ್ಯಕ್ಷರು), ಎಂ.ಇ.ಜಗದೀಶ್, ಸಿ.ಜಯಪ್ಪ ಹೆಬ್ಬಳಗೆರೆ, ಎಂ.ಎಸ್.ಸುಧಾಮಣಿ(ಪ್ರಧಾನ ಕಾರ್ಯದರ್ಶಿಗಳು), ಡಿ.ನಾಗೋಜಿರಾವ್, ಡಿ.ಎಸ್.ಪ್ರಕಾಶ್, ಬಿ.ಎಲ್.ಮೋಹನ್‌ಕುಮಾರ್(ಕಾರ್ಯದರ್ಶಿಗಳು).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts