More

    ಲಾಕ್​ಡೌನ್ ನಿಯಮ ಉಲ್ಲಂಘಿಸಿದ ವಾಹನಗಳೆಷ್ಟು?- ಪೊಲೀಸರ ವಶದಲ್ಲಿರುವ ವಾಹನಗಳ ಲೆಕ್ಕಾಚಾರ ಇಲ್ಲಿದೆ

    ಬೆಂಗಳೂರು: ಲಾಕ್​ಡೌನ್ ನಿಯಮ ಉಲ್ಲಂಘಿಸಿ ರಸ್ತೆಗಿಳಿದು ಪೊಲೀಸರಿಂದ ಜಪ್ತಿಯಾಗಿರುವ ವಾಹನಗಳ ಸಂಖ್ಯೆ 50 ಸಾವಿರ ಗಡಿ ಸಮೀಪಿಸಿದೆ. ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಬ್ಯಾರಿಕೇಡ್ ಅಳವಡಿಸಿರುವ ಪೊಲೀಸರು ರಸ್ತೆಯಲ್ಲಿ ಅನಗತ್ಯವಾಗಿ ಓಡಾಡುತ್ತಿರುವ ವಾಹನಗಳನ್ನು ಜಪ್ತಿ ಮಾಡಿ ಠಾಣೆ ಬಳಿ ನಿಲ್ಲಿಸುತ್ತಿದ್ದಾರೆ. ಲಾಕ್​ಡೌನ್ ಬಳಿಕ ಇದುವರೆಗೆ 47,258 ವಾಹನ ಜಪ್ತಿ ಮಾಡಲಾಗಿದೆ. ಇದರಲ್ಲಿ 44,081 ದ್ವಿಚಕ್ರ ವಾಹನ, 1,168 ಆಟೋ ಹಾಗೂ 2009 ಕಾರುಗಳಾಗಿವೆ. ಮಂಗಳವಾರ 585 ವಾಹನ ಜಪ್ತಿ ಮಾಡಲಾಗಿದೆ.

    ಅಗತ್ಯ ಸೇವೆ ಹೊರತುಪಡಿಸಿ ಪಾಸ್ ಇಲ್ಲದೆ ಸಂಚರಿಸುವ ಎಲ್ಲ ವಾಹನಗಳನ್ನು ನಿರ್ದಾಕ್ಷಿಣ್ಯವಾಗಿ ವಶಕ್ಕೆ ಪಡೆಯಲಾಗುತ್ತಿದೆ. ಲಾಕ್​ಡೌನ್ ಮುಕ್ತಾಯಗೊಂಡ ಬಳಿಕವೇ ಜಪ್ತಿ ಮಾಡಿದ ವಾಹನ ಹಿಂದಿರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಆದರೂ, ವಾಹನ ಮಾಲೀಕರು ಆಯಾ ಠಾಣೆಗಳಿಗೆ ಹೋಗಿ ತಮ್ಮ ವಾಹನ ಹಿಂದಿರುಗಿಸುವಂತೆ ಪೊಲೀಸರನ್ನು ಒತ್ತಾಯಿಸುವ ಯತ್ನ ನಡೆಸುತ್ತಿದ್ದಾರೆ.

    ಕೋರ್ಟ್ ಮೂಲಕ ಬಿಡಿಸಿಕೊಳ್ಳಿ: ಲಾಕ್​ಡೌನ್ ಮುಗಿದ ಬಳಿಕವೂ ಮಾಲೀಕರಿಗೆ ತಮ್ಮ ವಾಹನ ಬಿಡಿಸಿಕೊಳ್ಳುವುದು ತಲೆನೋವಾಗಿ ಪರಿಣಮಿಸಿದೆ. ನ್ಯಾಯಾಲಯದಲ್ಲಿ ಸೂಕ್ತ ದಂಡ ಪಾವತಿಸಿ ವಾಹನ ಪಡೆಯುವುದು ಅನಿವಾರ್ಯವಾಗಿದೆ. ಜಪ್ತಿ ಮಾಡಿದ ಎಲ್ಲ ವಾಹನಗಳ ವಿವರಗಳನ್ನು ಪೊಲೀಸರು ಈಗಾಗಲೇ ದಾಖಲಿಸಿಕೊಂಡಿದ್ದಾರೆ. ಇದರಲ್ಲಿ ದಾಖಲೆಗಳಿಲ್ಲದ ಸಾವಿರಾರು ವಾಹನಗಳಿವೆ. ನಿಯಮ ಉಲ್ಲಂಘಿಸಿ ರಸ್ತೆಗಿಳಿದ ವಾಹನಗಳು ಕೋರ್ಟ್ ಮೂಲಕವೇ ವಾಹನ ಬಿಡಿಸಿ ಕೊಳ್ಳಬೇಕು

    ಪಾಸ್ ಇದ್ದರೂ ಇಬ್ಬರಿಗಷ್ಟೇ ಅವಕಾಶ: ಪಾಸ್ ಇದ್ದರೂ ದ್ವಿಚಕ್ರ ವಾಹನದಲ್ಲಿ ಒಬ್ಬರು ಹಾಗೂ ಕಾರಿನಲ್ಲಿ ಚಾಲಕ ಸೇರಿ ಇಬ್ಬರಿಗಿಂತ ಹೆಚ್ಚಿನ ಜನ ಸಂಚರಿಸಬಾರದು. ಈ ನಿಯಮ ಉಲ್ಲಂಘಿಸಿದರೂ ವಾಹನ ಜಪ್ತಿ ಮಾಡುವಂತೆ ಸಂಚಾರ ಪೊಲೀಸರಿಗೆ ಅಧಿಕಾರಿಗಳು ಸೂಚಿಸಿದ್ದಾರೆ. ಆದರೆ, ಸಂದರ್ಭ ನೋಡಿಕೊಂಡು ಈ ರೀತಿ ಕ್ರಮ ಕೃಗೊಳ್ಳುವಂತೆ ಸೂಚಿಸಲಾಗಿದೆ. ಚಿಕಿತ್ಸೆಗೆಂದು ತೆರಳುತ್ತಿರುವುದು ಸೇರಿ ಅಗತ್ಯ ಓಡಾಟ ನಡೆಸುವವರಿಗೆ ವಿನಾಯಿತಿ ನೀಡುವಂತೆಯೂ ತಿಳಿಸಲಾಗಿದೆ.

    ಬೆಂಗಳೂರಿನಲ್ಲಿ ಶೇಕಡ 70 ಕುಸಿಯಿತು ತಾಳೆ ಎಣ್ಣೆ ವ್ಯಾಪಾರ!

    VIDEO: ಇಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ್ರೆ ಭೂತಬಂಗ್ಲೆ ವಾಸ ಗ್ಯಾರೆಂಟಿ !: ಸ್ಥಳೀಯ ರಾಜಕಾರಣಿಯೊಬ್ಬರ ಕ್ರಮ ಇದೀಗ ಜಗದ ಮನೆಮಾತು..

    ಲಾಕ್​ಡೌನ್ ಅವಧಿಯಲ್ಲಿ ರಕ್ತದಾನ ಶಿಬಿರ ನಡೆಸುವುದಕ್ಕೆ ಇಲ್ಲ ಅಡ್ಡಿ: ನೀವೂ ರಕ್ತದಾನ ಮಾಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts