More

    ಗುಜರಾತ್​​ ಬಳಿಕ ಭಾರತದಲ್ಲಿ 2ನೇ ಬಾರಿಗೆ ಪತ್ತೆಯಾಯ್ತು ನಿಗೂಢ ಏಕಶಿಲೆ..!

    ಮುಂಬೈ: ಜಗತ್ತಿನ ಹಲವೆಡೆ ಪತ್ತೆಯಾಗಿ ಬೆರಗು ಮೂಡಿಸಿದ್ದ “ನಿಗೂಢ ಏಕಶಿಲೆ” ಇದೀಗ ಭಾರತದಲ್ಲೂ ಎರಡನೇ ಬಾರಿಗೆ ಕಾಣಿಸಿಕೊಂಡಿದೆ. ಈ ಮೊದಲು ಗುಜರಾತಿನ ಅಹಮದಾಬಾದ್​ ಸಾರ್ವಜನಿಕ ಸ್ಥಳದಲ್ಲಿ ಪತ್ತೆಯಾಗಿದ್ದ ನಿಗೂಢ ಏಕಶಿಲೆ ಇದೀಗ ಮಹಾರಾಷ್ಟ್ರದ ಮುಂಬೈ ನಗರದ ಪಾರ್ಕ್​ವೊಂದರಲ್ಲಿ ಕಾಣಿಸಿಕೊಂಡಿದೆ.

    ಮುಂಬೈನ ಉಪನಗರ ಬಾಂದ್ರಾದ ಜಾಗ್ಗರ್ಸ್​ ಪಾರ್ಕ್​ನಲ್ಲಿ ನಿಗೂಢ ಏಕಶಿಲೆ ಪತ್ತೆಯಾಗಿರುವ ಬಗ್ಗೆ ಸ್ಥಳೀಯ ಕಾರ್ಪೊರೇಟರ್​ ಆಸಿಫ್​ ಝಕೆರಿಯಾ ಇಂದು ಬೆಳಗ್ಗೆ ಟ್ವೀಟ್​ ಮಾಡಿ ತಿಳಿಸಿದ್ದಾರೆ. ಏಕಶಿಲೆಯ ಬದಿಯಲ್ಲಿ ಸಂಖ್ಯೆಗಳಿವೆ. ಅದರ ಅರ್ಥ ಏನೆಂದು ತಿಳಿಯುವ ಪ್ರಯತ್ನ ಮಾಡಿ ಎಂದು ಎಂದು ಕೆಲವು ಚಿತ್ರಗಳನ್ನು ಆಸಿಫ್​ ಪೋಸ್ಟ್​ ಮಡಿದ್ದಾರೆ.

    ಇದನ್ನೂ ಓದಿರಿ: ಹಿಂದು ಬಾಲಕಿಯನ್ನು ಎಳೆದೊಯ್ದು ಮತಾಂತರ ಮಾಡಿ ಮದ್ವೆಯಾದ ಪಾಕ್​ ವ್ಯಕ್ತಿ: ಆದ್ರೆ ಸಂತ್ರಸ್ತೆ ಹೇಳಿದ್ದೇ ಬೇರೆ!

    ಈಗ ಪತ್ತೆಯಾಗಿರುವ ಏಕಶಿಲೆ ಭಾರತದಲ್ಲಿ ಕಂಡುಬಂದ ಎರಡನೇ ಏಕಶಿಲೆಯಾಗಿದೆ. ಈ ಮೊದಲು ಅಹಮದಾಬಾದ್​ನ ಥಲ್ತೇಜ ಏರಿಯಾದಲ್ಲಿರುವ ಸಿಂಫೋನಿ ಪಾರ್ಕ್​ನಲ್ಲಿ ಕಂಡುಬಂದಿತ್ತು.

    ತ್ರಿಕೋನ ಮಾದರಿಯಲ್ಲಿರುವ ಏಕಶಿಲೆಯ ಮೇಲ್ಮೈನಲ್ಲಿ ಕೆಲವು ಸಂಖ್ಯೆಗಳು ಮತ್ತು ಚಿಹ್ನೆಗಳಿವೆ. ಇದೀಗ ನಿಗೂಢವಾಗಿ ಪತ್ತೆಯಾಗಿರುವ ಏಕಶಿಲೆಯ ಮೂಲವನ್ನು ತಿಳಿಯಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಏಕಶಿಲೆ ಇದೀಹ ಬಹುಚರ್ಚಿತ ವಿಷಯವಾಗಿದ್ದು, ಸೆಲ್ಫಿ ಮತ್ತು ಫೋಟೋ ಕೇಂದ್ರವಾಗಿದೆ.

    ಇದನ್ನೂ ಓದಿರಿ: ಭಾರತಕ್ಕೆ ಟಿ20, ಏಕದಿನ ರ‌್ಯಾಂಕಿಂಗ್‌ನಲ್ಲಿ ವಿಶ್ವ ನಂ. 1 ಪಟ್ಟಕ್ಕೇರುವ ಅವಕಾಶ!

    ಇನ್ನು ಇದೇ ರೀತಿಯ ನಿಗೂಢ ಏಕಶಿಲೆ ಜಗತ್ತಿನಾದ್ಯಂತ ಸುಮಾರು 30ಕ್ಕೂ ಹೆಚ್ಚು ನಗರಗಳಲ್ಲಿ ಪತ್ತೆಯಾಗಿವೆ. ಮೊದಲ ಬಾರಿಗೆ ಅಮೆರಿಕದ ಉತಾಹ್ ಮರೂಭೂಮಿಯಲ್ಲಿ ಪತ್ತೆಯಾಗಿತ್ತು. ರೋಮಾನಿಯಾ, ಫ್ರಾನ್ಸ್​, ಪೋಲೆಂಡ್​, ಯುಕೆ ಮತ್ತು ಕೊಲಂಬಿಯಾ ರಾಷ್ಟ್ರಗಳಲ್ಲಿ ಪತ್ತೆಯಾಗಿವೆ. (ಏಜೆನ್ಸೀಸ್​)

    ಭಾರತದಲ್ಲೂ ಪತ್ತೆಯಾಯ್ತು ನಿಗೂಢ ಏಕಶಿಲೆ: ಬೆಳಗಾಗುವಷ್ಟರಲ್ಲಿ ಪಾರ್ಕಿನಲ್ಲಿ ಪ್ರತ್ಯಕ್ಷ!

    ಪಾಕ್​ಗೆ ಮೇಡ್ ಇನ್ ಇಂಡಿಯಾ ಕರೊನಾ ಲಸಿಕೆ!

    ಐಪಿಎಲ್‌ಗೂ ಕರೊನಾ ಹೊಡೆತ, ಬ್ರಾಂಡ್ ಮೌಲ್ಯ ಶೇ. 3.6 ಕುಸಿತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts