More

    ಐಪಿಎಲ್‌ಗೂ ಕರೊನಾ ಹೊಡೆತ, ಬ್ರಾಂಡ್ ಮೌಲ್ಯ ಶೇ. 3.6 ಕುಸಿತ!

    ನವದೆಹಲಿ: ಕರೊನಾ ವೈರಸ್ ಹಾವಳಿಯಿಂದಾಗಿ ಜಗತ್ತಿನ ಬಹುತೇಕ ಎಲ್ಲ ಕ್ಷೇತ್ರಗಳಿಗೆ ಆರ್ಥಿಕ ಹೊಡೆತ ಬಿದ್ದಿದೆ. ವಿಶ್ವದ ಅತ್ಯಂತ ಶ್ರೀಮಂತ ಟಿ20 ಲೀಗ್ ಎನಿಸಿದ ಐಪಿಎಲ್ ಕೂಡ ಅದರ ಹೊಡೆತದಿಂದ ಪಾರಾಗಿಲ್ಲ. 2020ರಲ್ಲಿ ಐಪಿಎಲ್ ಟೂರ್ನಿಯ ಬ್ರಾಂಡ್ ಮೌಲ್ಯ ಶೇ. 3.6 ಕುಸಿತ ಕಂಡಿದೆ. ಅಮೆರಿಕದ ಪ್ರತಿಷ್ಠಿತ ಮಾರುಕಟ್ಟೆ ವಿಶ್ಲೇಷಣ ಕಂಪನಿ ‘ಡಫ್​ ಆ್ಯಂಡ್ ಫೆಲ್ಪ್ಸ್​​’ ಬುಧವಾರ ಬಿಡುಗಡೆ ಮಾಡಿರುವ ಐಪಿಎಲ್‌ನ ಬ್ರಾಂಡ್ ಮೌಲ್ಯನಿರ್ಣಯ ವರದಿಯ ಅನ್ವಯ, ಫ್ರಾಂಚೈಸಿಗಳ ಮೌಲ್ಯವೂ ಹೆಚ್ಚಿನ ಕುಸಿತ ಕಂಡಿದೆ. 2019ರಲ್ಲಿ ಶೇ. 7 ಏರಿಕೆ ಕಂಡು 47,500 ಕೋಟಿ ರೂ.ಗೆ ಏರಿದ್ದ ಐಪಿಎಲ್ ಮೌಲ್ಯ, 2020ರಲ್ಲಿ 45,800 ಕೋಟಿ ರೂ.ಗೆ ಇಳಿಕೆ ಕಂಡಿದೆ.

    ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್, ತಂಡಗಳ ಪೈಕಿ ಗರಿಷ್ಠ ಮೌಲ್ಯವನ್ನು ಉಳಿಸಿಕೊಂಡಿದ್ದರೂ, 2020ರಲ್ಲಿ ಅದರ ಮೌಲ್ಯ ಶೇ. 5.9 ಇಳಿಕೆ ಕಂಡಿದೆ. 2019ರಲ್ಲಿ 809 ಕೋಟಿ ರೂ. ಇದ್ದ ಮುಂಬೈ ಇಂಡಿಯನ್ಸ್ ತಂಡದ ಬ್ರಾಂಡ್ ಮೌಲ್ಯ 2020ರಲ್ಲಿ 761 ಕೋಟಿ ರೂ.ಗೆ ಇಳಿದಿದೆ. ಕೋಲ್ಕತ ನೈಟ್‌ರೈಡರ್ಸ್‌ ಶೇ. 13.7 ಮೌಲ್ಯ ಇಳಿಕೆ ಕಂಡಿದ್ದು, 629ರಿಂದ 543 ಕೋಟಿ ರೂ.ಗೆ ಇಳಿದಿದೆ.

    ಕರೊನಾದಿಂದಾಗಿ 2020ರಲ್ಲಿ ಕ್ರೀಡಾ ಚಟುವಟಿಕೆಗಳೂ ಸಾಕಷ್ಟು ಹೊಡೆತ ತಿಂದಿದ್ದು, ಇತರ ಉದ್ಯಮಗಳಲ್ಲಿನ ಆರ್ಥಿಕ ಕುಸಿತವೂ ಕ್ರೀಡೆಯ ಆದಾಯದ ಮೇಲೆ ಪ್ರಭಾವ ಬೀರಿದೆ. ಕರೊನಾ ಭೀತಿಯಿಂದಾಗಿ ಜನರು ಹೆಚ್ಚಿನ ಸಮಯವನ್ನು ಮನೆಯಲ್ಲೇ ಕಳೆದಿರುವ ಕಾರಣ 2020ರಲ್ಲಿ ಐಪಿಎಲ್ ಟಿವಿ ರೇಟಿಂಗ್ ಮತ್ತು ಜಾಹೀರಾತು ಆದಾಯ ದಾಖಲೆ ಏರಿಕೆ ಕಂಡಿತ್ತು. ಇದರಿಂದಾಗಿ ಐಪಿಎಲ್ ಬ್ರಾಂಡ್ ಮೌಲ್ಯ ದೊಡ್ಡ ಮಟ್ಟದ ಕುಸಿತದಿಂದ ಪಾರಾಗಿದೆ ಎಂದು ‘ಡಫ್​ ಆ್ಯಂಡ್ ಫೆಲ್ಪ್ಸ್​’ ಇಂಡಿಯಾದ ಮುಖ್ಯಸ್ಥ ಸಂತೋಷ್ ಎನ್. ವಿವರಿಸಿದ್ದಾರೆ.

    ಇದನ್ನೂ ಓದಿ: ಐಸಿಸಿ ಸಿಇಒ ಮನು ಸಾವ್ನೆಗೆ ರಜೆಯ ಸಜೆ ನೀಡಿದ್ದೇಕೆ ಗೊತ್ತೇ?

    ಸಿಎಸ್‌ಕೆಗೆ ಹೆಚ್ಚಿನ ನಷ್ಟ
    ತಂಡಗಳ ಬ್ರಾಂಡ್ ಮೌಲ್ಯದಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ 2ನೇ ಸ್ಥಾನದಲ್ಲಿ ಉಳಿದಿದ್ದರೂ, ಅತ್ಯಧಿಕ ಶೇ. 16.5 ಕುಸಿತ ಕಂಡಿದೆ. ಸಿಎಸ್‌ಕೆ ಬ್ರಾಂಡ್ ಮೌಲ್ಯ 732ರಿಂದ 611 ಕೋಟಿ ರೂ.ಗೆ ಇಳಿದಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಎಂಎಸ್ ಧೋನಿ ನಿವೃತ್ತಿ ಮತ್ತು ಮೊದಲ ಬಾರಿ ಪ್ಲೇಆ್ ಹಂತಕ್ಕೇರಲು ವಿಲವಾದ ತಂಡದ ಕಳಪೆ ನಿರ್ವಹಣೆಯೂ ಇದಕ್ಕೆ ಕಾರಣವಾಗಿದೆ.

    ಆರ್‌ಸಿಬಿಗೂ ಹೊಡೆತ
    ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಕೂಡ ಶೇ. 9.9 ಕುಸಿತ ಅನುಭವಿಸಿದ್ದು, 595ರಿಂದ 536 ಕೋಟಿ ರೂ.ಗೆ ಇಳಿದಿದೆ. ಸನ್‌ರೈಸರ್ಸ್‌ ಹೈದರಾಬಾದ್ 483ರಿಂದ 442 ಕೋಟಿ ರೂ.ಗೆ (ಶೇ. 8.5 ಕುಸಿತ) ಇಳಿಕೆ ಕಂಡಿದೆ. 2020ರಲ್ಲಿ ಮೊಟ್ಟಮೊದಲ ಬಾರಿ ಐಪಿಎಲ್ ಫೈನಲ್‌ಗೇರಿದ ಸಾಧನೆ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅತ್ಯಂತ ಕಡಿಮೆ ಅಂದರೆ ಕೇವಲ ಶೇ.1 ಕುಸಿತ ಕಂಡಿದೆ. ಡೆಲ್ಲಿ ಬ್ರಾಂಡ್ ಮೌಲ್ಯ 374ರಿಂದ 370 ಕೋಟಿ ರೂ.ಗೆ ಇಳಿದಿದೆ. ಈ ವರ್ಷ ಪಂಜಾಬ್ ಕಿಂಗ್ಸ್ ಆಗಿ ಬದಲಾಗಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಶೇ. 11.3 ಅಂದರೆ 358ರಿಂದ 318 ಕೊಟಿ ರೂ.ಗೆ ಇಳಿದಿದೆ. ರಾಜಸ್ಥಾನ ರಾಯಲ್ಸ್ ಶೇ. 8.1 ಅಂದರೆ 271ರಿಂದ 249 ಕೋಟಿ ರೂ. ಮೌಲ್ಯಕ್ಕೆ ಇಳಿಕೆ ಕಂಡಿದೆ.

    ಐಪಿಎಲ್‌ಗೂ ಕರೊನಾ ಹೊಡೆತ, ಬ್ರಾಂಡ್ ಮೌಲ್ಯ ಶೇ. 3.6 ಕುಸಿತ!

    ಕಾರಣಗಳೇನು?
    ಕರೊನಾ ಕಾಲದ ಆರ್ಥಿಕ ಸಂಕಷ್ಟದಿಂದಾಗಿ ದೊಡ್ಡ ಮೊತ್ತದ ಪ್ರಾಯೋಜಕತ್ವ ಮತ್ತು ಪ್ರೇಕ್ಷಕರಿಲ್ಲದ ಕಾರಣ ಟಿಕೆಟ್ ಮಾರಾಟದ ಗಳಿಕೆ ಇಲ್ಲದ ಕಾರಣದಿಂದಾಗಿ ಫ್ರಾಂಚೈಸಿಗಳ ಆದಾಯ ಇಳಿಕೆ ಕಂಡಿರುವುದು ಬ್ರಾಂಡ್ ಮೌಲ್ಯದ ಕುಸಿತಕ್ಕೂ ಕಾರಣವಾಗಿದೆ. 2020ರಲ್ಲಿ ಪ್ರತಿ ಫ್ರಾಂಚೈಸಿಯ ಪ್ರಾಯೋಜಕತ್ವ ಆದಾಯ ಶೇ. 15-20 ಕುಸಿತ ಕಂಡಿದ್ದು, ಅದೇ ಬ್ರಾಂಡ್ ಮೌಲ್ಯದಲ್ಲೂ ಪ್ರತಿಲಿಸಿದೆ. 2020ರ ಶೀರ್ಷಿಕೆ ಪ್ರಾಯೋಜಕತ್ವದಿಂದ ವಿವೋ ಹಿಂದೆ ಸರಿದಿತ್ತು. ಇದರಿಂದಾಗಿ ಬಿಸಿಸಿಐಗೆ 440 ಕೋಟಿ ರೂ. ಆದಾಯ ತಪ್ಪಿಹೋಗಿತ್ತು. ಇದರ ಬದಲಿಗೆ ಡ್ರೀಮ್ ಇಲೆವೆನ್ 222 ಕೋಟಿ ರೂ.ಗೆ ಶೀರ್ಷಿಕೆ ಪ್ರಾಯೋಜಕತ್ವ ಪಡೆದುಕೊಂಡಿತ್ತು. ಪ್ರಾಯೋಜಕತ್ವದಲ್ಲಾದ ಈ ನಷ್ಟ, ಐಪಿಎಲ್‌ನ ಒಟ್ಟಾರೆ ಮೌಲ್ಯಕ್ಕೂ ಹೊಡೆತ ನೀಡಿದೆ.

    2021ರಲ್ಲಿ ಮತ್ತೆ ಏರಿಕೆ ನಿರೀಕ್ಷೆ
    ಕರೊನಾ ಹಾವಳಿ ಸದ್ಯ ನಿಯಂತ್ರಣದಲ್ಲಿದ್ದು, ಐಪಿಎಲ್ ಬ್ರಾಂಡ್ ಮೌಲ್ಯ 2021ರಲ್ಲಿ ಮತ್ತೆ ಏರಿಕೆ ಕಾಣುವ ನಿರೀಕ್ಷೆ ಇಡಬಹುದು. 2022ರಲ್ಲಿ ಐಪಿಎಲ್ ತಂಡಗಳ ಸಂಖ್ಯೆಯೂ ಏರಿಕೆ ಕಾಣಲಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಐಪಿಎಲ್ ಮೌಲ್ಯ ಮತ್ತೆ ಪ್ರಗತಿ ಕಾಣಬಹುದು ಎಂದು “ಡಫ್​ ಆ್ಯಂಡ್ ಫೆಲ್ಪ್ಸ್’ ತಿಳಿಸಿದೆ.

    ಮೊದಲ ಬಾರಿ ಕುಸಿತ
    ‘ಡಫ್​ ಆ್ಯಂಡ್ ಫೆಲ್ಪ್ಸ್’ ಕಂಪನಿ 2014ರಿಂದ ಐಪಿಎಲ್ ಬ್ರಾಂಡ್ ಮೌಲ್ಯನಿರ್ಣಯ ಮಾಡುತ್ತ ಬಂದಿದ್ದು, 6 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮೌಲ್ಯ ಕುಸಿತ ಕಂಡಿದೆ. ಮುಂಬೈ ಇಂಡಿಯನ್ಸ್ ಸತತ 5ನೇ ವರ್ಷ ಗರಿಷ್ಠ ಬ್ರಾಂಡ್ ಮೌಲ್ಯದ ತಂಡವೆನಿಸಿದೆ.

    ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿಗೆ ಬೆಂಬಿಡದ ನಂಬರ್ 36..!

    ಇಂಗ್ಲೆಂಡ್ ವಿರುದ್ಧ ಟಿ20 ಸರಣಿಗೆ 11ರ ಬಳಗದ ಆಯ್ಕೆ ಗೊಂದಲದಲ್ಲಿ ಭಾರತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts