ಪಾಕ್​ಗೆ ಮೇಡ್ ಇನ್ ಇಂಡಿಯಾ ಕರೊನಾ ಲಸಿಕೆ!

ನವದೆಹಲಿ: ಗಡಿ ತಂಟೆ, ಭಯೋತ್ಪಾದನೆ ವಿಚಾರದಲ್ಲಿ ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವ ಪಾಕಿಸ್ತಾನ, ಈಗ ಭಾರತದಿಂದಲೇ ಉಚಿತವಾಗಿ ಕರೊನಾ ಲಸಿಕೆ ಪಡೆಯಲು ಸಜ್ಜಾಗಿದೆ! ಸೇರಂ ಇನ್​ಸ್ಟಿಟ್ಯೂಟ್ ಉತ್ಪಾದನೆ ಮಾಡಿರುವ 1.6 ಕೋಟಿ ಡೋಸ್ ಕರೊನಾ ಲಸಿಕೆ ಜೂನ್ ವೇಳೆಗೆ ಪಾಕಿಸ್ತಾನಕ್ಕೆ ಸಿಗಲಿದೆ ಎನ್ನಲಾಗಿದೆ. ಯುನೈಟೆಡ್ ಗ್ಲೋಬಲ್ ಅಲಯನ್ಸ್ ಫಾರ್ ವ್ಯಾಕ್ಸಿನ್ ಎಂಬ ಒಕ್ಕೂಟ ಬಡ ರಾಷ್ಟ್ರಗಳಿಗೆ ಉಚಿತವಾಗಿ ಲಸಿಕೆ ವಿತರಿಸುವ ಕಾರ್ಯದಲ್ಲಿ ನಿರತವಾಗಿದೆ. ಒಟ್ಟು 92 ಬಡ ರಾಷ್ಟ್ರಗಳಿಗೆ ನಿಗದಿತ ಸಂಖ್ಯೆಯ ಲಸಿಕೆಯನ್ನು ಉಚಿತವಾಗಿ ವಿತರಣೆ ಮಾಡಲಿದೆ. … Continue reading ಪಾಕ್​ಗೆ ಮೇಡ್ ಇನ್ ಇಂಡಿಯಾ ಕರೊನಾ ಲಸಿಕೆ!