More

    ಭಾರತದ ಮೊದಲ 100% ಸೌರಶಕ್ತಿ ಅವಲಂಬಿತ ಹಳ್ಳಿಯ ಬಗ್ಗೆ ಗೊತ್ತಾ?

    ಗಾಂಧಿನಗರ್​: ಚಾಲುಕ್ಯರು ಕಟ್ಟಿದ ಸೂರ್ಯ ದೇವಾಲಯಕ್ಕೆ ಪ್ರಸಿದ್ಧವಾದ ಈ ಹಳ್ಳಿಯನ್ನು ಪ್ರಧಾನಿ ಮೋದಿ ಭಾನುವಾರ 24/7 ಸೌರ ಚಾಲಿತ ಹಳ್ಳಿ ಎಂದು ಘೋಷಿಸಿದರು. ಅಂದಹಾಗೆ ಈ ಹಳ್ಳಿಯ ಹೆಸರು ಮೊಧೆರಾ.

    ಪ್ರಧಾನಿ ಮೋದಿ ರೂ.3,900 ಕೋಟಿಗಿಂತಲೂ ಹೆಚ್ಚಿನ ಮೊತ್ತದ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ‘ನಾವು ನವೀಕರಿಸಬಹುದಾದ ಇಂಧನ ಮೂಲಗಳನ್ನು ಬಳಸುವ ಮೂಲಕ ಇಡಿ ವಿಶ್ವಕ್ಕೆ ವಿದ್ಯುತ್ ಪೂರೈಕೆದಾರ ಆಗಬಹುದು’ ಎಂದರು.

    ಈ ಹಳ್ಳಿ ಗುಜರಾತ್​ನ ರಾಜಧಾನಿ ಗಾಂಧಿನಗರದಿಂದ 100 ಕಿ.ಮೀ ದೂರದಲ್ಲಿದೆ. ಇಲ್ಲಿ 1300ಕ್ಕೂ ಹೆಚ್ಚು ಮೇಲ್ಛಾವಣಿಗೆ ಅಳವಡಿಸುವ ಸೋಲಾರ್ ಪ್ಯಾನಲ್​ಗಳು ಕಾರ್ಯನಿರ್ವಹಿಸುತ್ತಿವೆ. ಪ್ರತೀ ಸೋಲಾರ್​ ಪ್ಯಾನಲ್​ 1 ಕಿಲೊ ವ್ಯಾಟ್ ವಿದ್ಯುತ್ತನ್ನು ಉತ್ಪಾದಿಸುತ್ತದೆ. ಈ ಹಳ್ಳಿಯಲ್ಲಿ ಎಲ್ಲಾ ಪ್ಯಾನಲ್​ಗಳನ್ನು ಬಿಇಎಸ್​ಎಸ್​ (ಬ್ಯಾಟರಿ ಎನರ್ಜಿ ಸ್ಟೋರೇಜ್​ ಸಿಸ್ಟಂ) ನೊಂದಿಗೆ ಜೋಡಿಸಲಾಗಿದೆ. ದಿನದಲ್ಲಿ ಸೋಲಾರ್ ಪ್ಯಾನಲ್​ಗಳು ನೇರವಾಗಿ ಮನೆಗಳಿಗೆ ವಿದ್ಯುತ್​ ಪೂರೈಸಿದರೆ ರಾತ್ರಿ ಬ್ಯಾಟರಿಯಿಂದ ವಿದ್ಯುತ್​ ಸರಬರಾಜಾಗುತ್ತದೆ.

    ‘ಈ ಯೋಜನೆಯು ನವೀಕರಿಸಬಹುದಾದ ಇಂಧನ ಜನರನ್ನು ತಳಮಟ್ಟದಲ್ಲಿ ಯಾವ ರೀತಿ ಸಬಲರನ್ನಾಗಿಸುತ್ತದೆ ಎಂಬುದನ್ನು ತೋರಿಸುತ್ತದೆ. ಈ ಕ್ರಮದಿಂದ ಹಳ್ಳಿಯ ಜನರು ತಮ್ಮ ವಿದ್ಯುತ್​​ ಬಿಲ್​ನಲ್ಲಿ ಶೇಕಡಾ 60ಕ್ಕಿಂತ ಹೆಚ್ಚು ಮೊತ್ತವನ್ನು ಉಳಿಸಬಹುದು’ ಎಂದು ಗುಜರಾತ್​ ಸರ್ಕಾರ ಹೇಳಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts