More

    ಭಾರತದಲ್ಲಿದ್ದಾರೆ ಎಬಿಡಿ ರೀತಿಯ ಮಿಸ್ಟರ್​ 360; ಯಾರು ಎನ್ನುವುದಕ್ಕೆ ಹರ್ಭಜನ್​ ಬಳಿ ಇದೆ ಉತ್ತರ

    ನವದೆಹಲಿ: ಐಪಿಎಲ್​-2020ಯಲ್ಲಿ ಆರ್​ಸಿಬಿ ಸೋತಿದ್ದರೂ, ತಂಡದ ಸ್ಟಾರ್​ ಪ್ಲೇಯರ್​ ಎಬಿಡಿ ವಿಲಿಯರ್ಸ್​ನ ಆಟವನ್ನೂ ಯಾರೊಬ್ಬರೂ ಮರೆತಿಲ್ಲ. ಎಬಿಡಿ ಇದ್ದ ಮೇಲೆ ಭಯವಿಲ್ಲ ಎನ್ನುತ್ತಾರೆ ಆರ್​ಸಿಬಿ ಅಭಿಮಾನಿಗಳು. ನಮ್ಮ ಭಾರತದಲ್ಲೂ ಇದೇ ರೀತಿಯ ಆಟಗಾರರೊಬ್ಬರಿದ್ದಾರೆ ಎಂದು ಭಾರತದ ಕ್ರಿಕೆಟ್​ ಟೀಂನ ಪ್ರಸಿದ್ಧ ಆಟಗಾರರೊಬ್ಬರು ಹೇಳಿದ್ದಾರೆ.

    ಇದನ್ನೂ ಓದಿ: ಕರೊನಾ ಲಸಿಕೆ ಅಭಿವೃದ್ಧಿಗೆ ₹900 ಕೋಟಿ: ನಿರ್ಮಲಾ ಸೀತಾರಾಮನ್​ ಘೋಷಣೆ

    ಮುಂಬೈ ಇಂಡಿಯನ್ಸ್​ನ ಮಾಜಿ ಆಟಗಾರ, ಪ್ರಸ್ತುತ ಚೆನ್ನೈ ಸೂಪರ್​ ಕಿಂಗ್ಸ್​ ತಂಡದಲ್ಲಿರುವ ಹರ್ಭಜನ್​ ಸಿಂಗ್​ ಭಾರತದ ಆಟಗಾರರರೊಬ್ಬರಲ್ಲಿ ಎಬಿಡಿಯನ್ನು ಕಂಡಿದ್ದಾರಂತೆ. ಮುಂಬೈ ಇಂಡಿಯನ್ಸ್​ನ ಸೂರ್ಯ ಕುಮಾರ್​ ಯಾದವ್​ ಎಬಿಡಿಯಂತೆಯೇ ಆಡುತ್ತಾರೆ ಎಂದಿದ್ದಾರೆ ಅವರು.

    ‘ಸೂರ್ಯ ಕುಮಾರ್​ ಯಾದವ್​ ಮೊದಲ ಎಸೆತದಿಂದಲೇ ರನ್​ ಹೊಡೆಯಲು ಆರಂಭಿಸುತ್ತಾರೆ. ಎಲ್ಲ ರೀತಿಯ ಹೊಡೆತಗಳನ್ನು ಹೊಡೆಯುವುದು ಗೊತ್ತಿರುವ ಅವರಿಗೆ ಬೌಲಿಂಗ್​ ಮಾಡುವುದು ಕಷ್ಟ. ವೇಗದ ಬೌಲಿಂಗ್​ ಮಾಡಿದರೂ ತುಂಬಾ ಸಲೀಸಾಗಿ ರನ್​ ಹೊಡೆಯುವುದು ಅವರಿಗೆ ಗೊತ್ತಿದೆ. ಅವರು ಭಾರತದ ಎಬಿಡಿ ಇದ್ದಂತೆ’ ಎಂದು ಹರ್ಭಜನ್​ ಸಿಂಗ್​ ಹೇಳಿದ್ದಾರೆ.

    ಇದನ್ನೂ ಓದಿ: ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ-ರಿಕಿ ಪಾಂಟಿಂಗ್ ನಡುವೆ ಜಗಳ!

    ಆಸ್ಟ್ರೇಲಿಯಾ ಟೆಸ್ಟ್ ಸರಣಿಯಿಂದ ಸೂರ್ಯಕುಮಾರ್​ ಅವರ ಹೆಸರನ್ನು ಕೈ ಬಿಟ್ಟಿದ್ದಕ್ಕೂ ಹರ್ಭಜನ್​ ವಿರೋಧ ವ್ಯಕ್ತಪಡಿಸಿದ್ದರು.

    2020ರ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡಕ್ಕೆ ಸೂರ್ಯಕುಮಾರ್​​ 480 ರನ್​ ಹೊಡೆದುಕೊಟ್ಟಿದ್ದಾರೆ. ತಂಡದಲ್ಲಿ ಅತಿ ಹೆಚ್ಚು ರನ್​ ಕೊಟ್ಟ ಬ್ಯಾಟ್ಸ್​ಮೆನ್​ಗಳಲ್ಲಿ ಮೂರನೇ ಸ್ಥಾನದಲ್ಲಿ ಅವರಿದ್ದಾರೆ. (ಏಜೆನ್ಸೀಸ್​)

    ರೆಡ್​ ಲಿಪ್ಸ್ಟಿಕ್​ ಹಚ್ಚುವುದೇ ತಪ್ಪಾ? ಅಮ್ಮನಿಗೆ ಅವಮಾನಿಸಿದವರಿಗೆ ಸರಿಯಾದ ಪಾಠ ಕಲಿಸಿದ ಮಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts