More

    ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಶಿಖರ್​ ಧವನ್​ ಸಾರಥ್ಯದ ಭಾರತ ತಂಡ ಎದುರಿಸಲಿದೆ ಕಠಿಣ ಕ್ವಾರಂಟೈನ್​

    ನವದೆಹಲಿ: ಅನುಭವಿ ಬ್ಯಾಟ್ಸ್​ಮನ್​ ಶಿಖರ್​ ಧವನ್​ ಸಾರಥ್ಯದ ನಿಗದಿತ ಓವರ್​ಗಳ ಭಾರತ ತಂಡ, ಶ್ರೀಲಂಕಾ ಪ್ರವಾಸ ತೆರಳುವುದಕ್ಕೂ ಮುನ್ನ ಜೂನ್​ 14 ರಿಂದ 28 ರವರೆಗೆ ಮುಂಬೈನಲ್ಲಿ ಕ್ವಾರಂಟೈನ್​ಗೆ ಒಳಗಾಗಲಿದೆ. ಈ ಅವಧಿಯಲ್ಲಿ ಆಟಗಾರರು 6 ಬಾರಿ ಆರ್​ಟಿ- ಪಿಸಿಆರ್​ ಪರೀಕ್ಷೆಗೆ ಒಳಗಾಗಲಿದ್ದಾರೆ. ಜುಲೈ 13 ರಿಂದ ಭಾರತ ಹಾಗೂ ಶ್ರೀಲಂಕಾ ನಡುವೆ ಕೊಲಂಬೊದಲ್ಲಿ ತಲಾ 3 ಏಕದಿನ ಹಾಗೂ ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಇಂಗ್ಲೆಂಡ್​ ಪ್ರವಾಸಕ್ಕೆ ತೆರಳಿದ ವಿರಾಟ್​ ಕೊಹ್ಲಿ ಸಾರಥ್ಯದ ತಂಡದ ಮಾದರಿಯಂತೆಯೇ ಲಂಕಾ ಪ್ರವಾಸ ಕೈಗೊಳ್ಳಲಿರುವ ಶಿಖರ್​ ಧವನ್​ ಸಾರಥ್ಯದ ತಂಡ ಕೂಡ ಕ್ವಾರಂಟೈನ್​ಗೆ ಒಳಗಾಗಿದೆ.

    ಇದನ್ನೂ ಓದಿ: ಯುರೋ ಕಪ್​-2020 ಫುಟ್​ಬಾಲ್​ ಟೂರ್ನಿ; ಶುಭಾರಂಭ ಕಂಡ ಇಟಲಿ ತಂಡ, 

    ಹೊರ ರಾಜ್ಯದ ಆಟಗಾರರು ಚಾರ್ಟರ್​ ವಿಮಾನ ಹಾಗೂ ಬ್ಯುಸಿನೆಸ್ ಕ್ಲಾಸ್​ ವಿಮಾನಗಳ ಮೂಲಕ ಮುಂಬೈಗೆ ಆಗಮಿಸಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಆರಂಭಿಕ 7 ದಿನಗಳ ಕಾಲ ಕೊಠಡಿಯಲ್ಲೆ ಕ್ವಾರಂಟೈನ್​ನಲ್ಲಿದ್ದರೆ, ಬಳಿಕ ಬಯೋಬಬಲ್​ ವ್ಯಾಪ್ತಿಯಲ್ಲೇ ಆಟಗಾರರಿಗೆ ಜಿಮ್​ ಸೇರಿದಂತೆ ಇನ್ನಿತರ ಕಡೆಗೆ ಓಡಾಡಲು ಅವಕಾಶ ನೀಡಲಾಗುತ್ತಿದೆ.

    ಇದನ್ನೂ ಓದಿ: ಟ್ವೀಟ್​ ವಿವಾದದ ಸುಳಿಯಲ್ಲಿ ಇಂಗ್ಲೆಂಡ್​ನ ಸ್ಟಾರ್​ ಕ್ರಿಕೆಟಿಗರು ; ಐಪಿಎಲ್ ಆಡುವಾಗಲೇ ಭಾರತೀಯರನ್ನು ಅಣಕಿಸಿದ್ದ ಜೋಡಿ,

    ಕೊಲಂಬೋದಲ್ಲಿ ಮೂರು ದಿನಗಳ ಕಾಲ ಕ್ವಾರಂಟೈನ್​ನಲ್ಲಿದ್ದು ಪರಿಸ್ಥಿತಿ ನೋಡಿಕೊಂಡು ಭಾರತ ತಂಡ ಅಭ್ಯಾಸ ಆರಂಭಿಸಲಿದೆ. ಇಂಗ್ಲೆಂಡ್​ಗೆ ತೆರಳುವುದಕ್ಕೂ ಹಾಗೂ ತೆರಳಿದ ಬಳಿಕ ಅನುಸರಿಸಿದ ಮಾದರಿಯಲ್ಲೇ ಲಂಕಾ ಪ್ರವಾಸಕ್ಕೂ ಅದೇ ಮಾದರಿಯನ್ನು ಅಳವಡಿಸಿಕೊಳ್ಳಲಾಗಿದೆ. ಭಾರತ ತಂಡದ ಆಟಗಾರರು ಎಂದಿನಂತೆ ಕೊಲಂಬೊದಲ್ಲಿರುವ ತಾಜ್​ ಸಮುದ್ರಾ ಹೋಟೆಲ್​ನಲ್ಲೆ ಉಳಿದುಕೊಳ್ಳಲಿದ್ದಾರೆ.

    ನಡಾಲ್​-ಜೋಕೋ ನಡುವಿನ ಕಾದಾಟದ ವೇಳೆ ಫ್ರೆಂಚ್​ ಅಧ್ಯಕ್ಷರು ಹೊರಡಿಸಿದ ಆದೇಶ ಏನು ಗೊತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts