More

    ಟ್ವೀಟ್​ ವಿವಾದದ ಸುಳಿಯಲ್ಲಿ ಇಂಗ್ಲೆಂಡ್​ನ ಸ್ಟಾರ್​ ಕ್ರಿಕೆಟಿಗರು ; ಐಪಿಎಲ್ ಆಡುವಾಗಲೇ ಭಾರತೀಯರನ್ನು ಅಣಕಿಸಿದ್ದ ಜೋಡಿ

    ನವದೆಹಲಿ: ಹಳೇ ಟ್ವೀಟ್​ ವಿವಾದಕ್ಕೆ ಸಿಲುಕಿ ಬೌಲರ್​ ಒಲೀ ರಾಬಿನ್​ಸನ್​ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಅಮಾನತುಗೊಂಡಿದ್ದಾರೆ. ರಾಬಿನ್​ಸನ್​ ಪ್ರಕರಣ ಹೊರಬೀಳುತ್ತಿದ್ದಂತೆ ಇಂಗ್ಲೆಂಡ್​ ಆಟಗಾರರ ಒಂದೊಂದೇ ಹಳೇ ವಿವಾದಿತ ಟ್ವೀಟ್​ಗಳು ಹೊರಬೀಳುತ್ತಿವೆ. ಐಪಿಎಲ್​ನ ಸ್ಟಾರ್​ ಕ್ರಿಕೆಟಿಗರಾದ ಜೋಸ್​ ಬಟ್ಲರ್​ ಹಾಗೂ ಇವೊಯಿನ್​ ಮಾರ್ಗನ್​ ಹಳೇ ಟ್ವೀಟ್​ಗೆ ಸಂಬಂಧ ಇಕ್ಕಟ್ಟಿಗೆ ಸಿಲುಕಿದ್ದಾರೆ. ಇದೀಗ ಬಟ್ಲರ್​ ಹಾಗೂ ಮಾರ್ಗನ್​ ವಿರುದ್ಧ ತನಿಖೆಗೆ ಇಸಿಬಿ ಮುಂದಾಗಿದೆ. ಅಲ್ಲದೆ, ಸ್ಟುವರ್ಟ್​ ಬ್ರಾಡ್​ ಅವರನ್ನು ಲೆಸ್ಬಿಯನ್​ ಎಂದು ಟ್ವೀಟ್​ ಮಾಡಿದ್ದ ಅನುಭವಿ ಆಟಗಾರ ಜೇಮ್ಸ್​ ಆಂಡರ್​ಸನ್​ ಕೂಡ ವಿವಾದಕ್ಕೆ ಸಿಲುಕಿದ್ದಾರೆ. 

    ಇದನ್ನೂ ಓದಿ: ಚೀನಾ ಕಂಪನಿಗೆ ಕೊಕ್ ಕೊಟ್ಟ ಐಒಎ, ಭಾರತ ತಂಡಕ್ಕೆ ಹೊಸ ಪ್ರಾಯೋಜಕರು

    2018ರ ಮೇ 13 ರಂದು ಐಪಿಎಲ್​ನ ಪಂದ್ಯವೊಂದರಲ್ಲಿ ಬಟ್ಲರ್​ 53 ಎಸೆತಗಳಲ್ಲಿ 94 ರನ್​ ಸಿಡಿಸಿದ್ದರು. ಇದಕ್ಕೆ ಮಾರ್ಗನ್​ ಅಭಿನಂದನೆಗಳು ಸರ್​ ಎಂದು ಬಟ್ಲರ್​ ಉದ್ದೇಶಿಸಿ ಟ್ವೀಟ್​ ಮಾಡಿದ್ದರು. ಪರಸ್ಪರ ಸರ್​ ಎಂದು ಸಂಬೋಧಿಸಿಕೊಳ್ಳುವ ಮೂಲಕ ಭಾರತೀಯರನ್ನು ನಿಂದಿಸಿದ್ದರು ಎನ್ನಲಾಗಿದೆ. ಐಪಿಎಲ್​ನಲ್ಲಿ ಕೆಕೆಆರ್​ ಕೋಚ್​ ಆಗಿರುವ ಬ್ರೆಂಡನ್​ ಮೆಕ್ಕಲಂ ಕೂಡ ಮಾರ್ಗನ್​ ಮೆಸೇಜ್​ಗೆ ಸರ್​ ಎಂದೇ ಪ್ರತಿಕ್ರಿಯೆ ನೀಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾದಂತೆ ಬಟ್ಲರ್​ ತಮ್ಮ ಟ್ವೀಟ್​ಗಳನ್ನು ಡಿಲೀಟ್​ ಮಾಡಿದ್ದರು.

    ಟ್ವೀಟ್​ ವಿವಾದದ ಸುಳಿಯಲ್ಲಿ ಇಂಗ್ಲೆಂಡ್​ನ ಸ್ಟಾರ್​ ಕ್ರಿಕೆಟಿಗರು ; ಐಪಿಎಲ್ ಆಡುವಾಗಲೇ ಭಾರತೀಯರನ್ನು ಅಣಕಿಸಿದ್ದ ಜೋಡಿ

    ಇಂಗ್ಲೆಂಡ್​ ಟೆಸ್ಟ್​ ತಂಡದ ಅನುಭವಿ ವೇಗಿ ಜೇಮ್ಸ್​ ಆಂಡರ್​ಸನ್​ 2010ರಲ್ಲಿ ಮತ್ತೋರ್ವ ವೇಗಿ ಸ್ಟುವರ್ಟ್​ ಬ್ರಾಡ್​ ಉದ್ದೇಶಿ ಮಾಡಿದ್ದ ಟ್ವೀಟ್​ ವಿವಾದ ಸೃಷ್ಟಿಸಿದೆ. ಅಂದು 27 ವರ್ಷದ ಆಂಡರ್​ಸನ್​, ಸ್ಟುವರ್ಟ್​ ಬ್ರಾಡ್​ ಹೇರ್​ಸ್ಟೈಲ್​ ಉದ್ದೇಶಿಸಿ 15 ವರ್ಷದ ಲೆಸ್ಬಿಯನ್​ ಎಂದು ಕರೆದಿದ್ದರು. ಆದರೆ, ವಿವಾದ ಕಾವೇರುತ್ತಿದ್ದಂತೆ ಆಂಡರ್​ಸನ್​ ಹಳೇ ಟ್ವೀಟ್​ಅನ್ನು ಡಿಲೀಟ್​ ಮಾಡಿದ್ದಾರೆ. ಇಂಗ್ಲೆಂಡ್​ ತಂಡದ ವೇಗದ ಬೌಲರ್​ ಒಲಿ ರಾಬಿನ್​ಸನ್​ ಅವರನ್ನು 2012-13ರಲ್ಲಿ ಮಾಡಿದ್ದ ವಿವಾದಾತ್ಮಕ ಟ್ವೀಟ್​ಗೆ ಸಂಬಂಧಪಟ್ಟಂತೆ ಅಮಾನತುಗೊಳಿಸಲಾಗಿದ್ದು, ಇಂಗ್ಲೆಂಡ್​ ಕ್ರಿಕೆಟ್​ ಮಂಡಳಿಯ ತನಿಖೆ ಮುಗಿಯುವವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಹೊರಗುಳಿಯಲಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts