More

    ಯುರೋ ಕಪ್​-2020 ಫುಟ್​ಬಾಲ್​ ಟೂರ್ನಿ; ಶುಭಾರಂಭ ಕಂಡ ಇಟಲಿ ತಂಡ

    ರೋಮ್​: ಕರೊನಾ ವೈರಸ್​ ಹಾವಳಿಯಿಂದ ಕಂಗೆಟ್ಟಿದ್ದ ವಿಶ್ವ ಫುಟ್​ಬಾಲ್​ ಪ್ರೇಮಿಗಳಿಗೆ ಪ್ರತಿಷ್ಠಿತ ಯುರೋ ಕಪ್ ಟೂರ್ನಿಯ ಮೊದಲ ಪಂದ್ಯವೇ ರೋಚಕತೆಗೆ ಸಾಕ್ಷಿಯಾಯಿತು. ಕಡೇ ಐದು ವರ್ಷಗಳಲ್ಲಿ ಮೊದಲ ಬಾರಿಗೆ ಪ್ರತಿಷ್ಠಿತ ಟೂರ್ನಿಯಲ್ಲಿ ಆಡುತ್ತಿರುವ ಇಟಲಿ ತಂಡ 3-0 ಯಿಂದ ಟರ್ಕಿ ತಂಡವನ್ನು ಮಣಿಸಿ ಟೂರ್ನಿಯಲ್ಲಿ ಶುಭಾರಂಭ ಕಂಡಿತು. 58 ವರ್ಷಗಳ ಬಳಿಕ 2018ರ ಫಿಫಾ ವಿಶ್ವಕಪ್​ಗೆ ಅರ್ಹತೆಗಿಟ್ಟಿಸಿಕೊಳ್ಳಲು ವಿಫಲವಾಗಿದ್ದ ಇಟಲಿ ತಂಡ ಭರ್ಜರಿ ಗೆಲುವಿನೊಂದಿಗೆ ಸಂಭ್ರಮಿಸಿತು. ವಿಶ್ವಕಪ್​ ಅರ್ಹತೆಗೆ ಇದುವರೆಗೂ ಆಡಿರುವ 10 ಪಂದ್ಯಗಳಲ್ಲೂ ಗೆಲುವು ಕಂಡಿರುವ ಇಟಲಿ ತಂಡ ಯುರೋ ಕಪ್ ಟೂರ್ನಿಯಲ್ಲಿ ಭರ್ಜರಿ ಆರಂಭ ಕಂಡಿತು. ಜತೆಗೆ ಇಟಲಿ ತಂಡ ಸತತ 28ನೇ ಪಂದ್ಯದಲ್ಲಿ ಅಜೇಯ ಸಾಧನೆ ಮಾಡಿತು.

    ಇದನ್ನೂ ಓದಿ: ಟ್ವೀಟ್​ ವಿವಾದದ ಸುಳಿಯಲ್ಲಿ ಇಂಗ್ಲೆಂಡ್​ನ ಸ್ಟಾರ್​ ಕ್ರಿಕೆಟಿಗರು ; ಐಪಿಎಲ್ ಆಡುವಾಗಲೇ ಭಾರತೀಯರನ್ನು ಅಣಕಿಸಿದ್ದ ಜೋಡಿ

    1968ರ ಚಾಂಪಿಯನ್​ ಇಟಲಿ ತಂಡ ಯುರೋ ಕಪ್​ನಲ್ಲಿ ಮೊದಲ ಬಾರಿಗೆ 2ಕ್ಕಿಂತ ಹೆಚ್ಚಿನ ಗೋಲು ಸಿಡಿಸಿದ ಸಾಧನೆ ಮಾಡಿತು. ಕೋವಿಡ್​ನಿಂದಾಗಿ ಮುನ್ನೆಚ್ಚರಿಕೆ ಶೇಕಡ 25 ಪ್ರೇಕ್ಷಕರಿಗಷ್ಟೇ ಅವಕಾಶ ನೀಡಲಾಗಿತ್ತು. ಸ್ಟೇಡಿಯೊ ಒಲಿಂಪಿಕೊ ಸ್ಟೇಡಿಯಂನಲ್ಲಿ ಸುಮಾರು 16 ಸಾವಿರ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಎ ಗುಂಪಿನ ಕಾದಾಟದಲ್ಲಿ ಇಟಲಿ ತಂಡ ಮೇಲುಗೈ ಸಾಧಿಸಿತು. ಮೊದಲಾರ್ಧದಲ್ಲಿ ಇಟಲಿ ತಂಡಕ್ಕೆ ಗೋಲು ದಾಖಲಿಸಲು 13 ಅವಕಾಶಗಳು ದಕ್ಕಿದರೆ, ಟರ್ಕಿಗೆ ಏಕೈಕ ಅವಕಾಶವೂ ಲಭಿಸಲಿಲ್ಲ. ಒಟ್ಟಾರೆ ಇಟಲಿ ತಂಡಕ್ಕೆ 24 ಹಾಗೂ ಟರ್ಕಿಗೆ 3 ಅವಕಾಶಗಳು ದಕ್ಕಿದವು. ಈ ಪೈಕಿ ಇಟಲಿ ತಂಡ 3 ಅವಕಾಶಗಳನ್ನು ಗೋಲಾಗಿ ಪರಿವರ್ತಿಸಿದರೆ, ಟರ್ಕಿ ಏಕೈಕ ಗೋಲು ದಾಖಲಿಸಲು ವಿಫಲವಾಯಿತು. ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳು ಗೋಲು ರಹಿತ ಸಮಬಲ ಸಾಧಿಸಿದ್ದರೆ, ದ್ವೀತಿಯಾರ್ಧದ ಆರಂಭಿಕದಲ್ಲೇ ಟರ್ಕಿ ತಂಡದ ಮೆಹಿಹ ಡೆಮಿರಲ್​ (53ನೇ ನಿಮಿಷ) ಸ್ವಗೋಲಿನ ಮೂಲಕ ಇಟಲಿ ತಂಡಕ್ಕೆ ಗೋಲುಬಿಟ್ಟುಕೊಟ್ಟರು. ಸಿರೊ ಇಮ್ಮೊಬೈಲ್​ (66) ಹಾಗೂ ಲೊರೆನ್​ಜೊ ಇನ್​ಸೈಗ್ನೆ (79) ತಲಾ ಒಂದು ಗೋಲು ದಾಖಲಿಸಿ ತಂಡದ ಗೆಲುವಿನ ಅಂತರವನ್ನು ಹಿಗ್ಗಿಸಿದರು.

    ಇಂದಿನ ಪಂದ್ಯಗಳು:

    ಇಂಗ್ಲೆಂಡ್​ -ಕ್ರೋವೆಷಿಯಾ
    ಆರಂಭ: ಸಂಜೆ: 6.30ಕ್ಕೆ
    ಎಲ್ಲಿ : ಲಂಡನ್​ (ವೆಂಬ್ಲೆ ಸ್ಟೇಡಿಯಂ)
    —–

    ಆಸ್ಟ್ರಿಯಾ-ಉತ್ತರ ಮೆಸಡೋನಿಯಾ
    ಆರಂಭ: ರಾತ್ರಿ 9.30ಕ್ಕೆ
    ಎಲ್ಲಿ: ಅರೆನಾ ನ್ಯಾಷನಲ್​
    ————-
    ನೆದರ್ಲೆಂಡ್ಸ್​-ಉಕ್ರೇನ್​
    ಆರಂಭ: ರಾತ್ರಿ 12.30ಕ್ಕೆ
    ಎಲ್ಲಿ: ಆಮ್​ರ್ಸ್ಟರ್​ಡ್ಯಾಂ ಅರೆನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts