More

    ಪಾಕಿಸ್ತಾನದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿದ ಭಾರತದ ವಿಮಾನ

    ಲಖನೌ: ಭಾರತೀಯ ವಿಮಾನವೊಂದು ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದ ಪ್ರಸಂಗ ಇಂದು ನಡೆದಿದೆ. ದಿಢೀರ್​ ಆಗಿ ಪ್ರಯಾಣಿಕರೊಬ್ಬರಿಗೆ ಹೃದಯಾಘಾತದ ಚಿಹ್ನೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾರ್ಗ ಬದಲಿಸಿ ಲ್ಯಾಂಡ್ ಮಾಡಲಾಗಿದೆ.

    ಶಾರ್ಜಾದಿಂದ ಲಖನೌಗೆ ಹೊರಟಿದ್ದ ಇಂಡಿಗೋ ವಿಮಾನ 6ಇ 1412 ತನ್ನ ಪ್ರಯಾಣ ಮಾಡುತ್ತಿದ್ದ 67 ವರ್ಷದ ಹಬೀಬ್-ಉರ್-ರೆಹಮಾನ್ ಎಂಬುವರಿಗೆ ಎದೆ ನೋವು ಕಾಣಿಸಿಕೊಂಡಿತು. ಈ ಕಾರಣದಿಂದ ತುರ್ತು ಚಿಕಿತ್ಸೆ ಒದಗಿಸಲು ಹತ್ತಿರದ ಕರಾಚಿಯ ಜಿನ್ನಾ ವಿಮಾನ ನಿಲ್ದಾಣದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಯಿತು. ಆದರೆ ಕರಾಚಿ ವಿಮಾನ ನಿಲ್ದಾಣದ ವೈದ್ಯಕೀಯ ತಂಡ ಪರೀಕ್ಷಿಸಿದಾಗ ಪ್ರಯಾಣಿಕನ ಹೃದಯಬಡಿತವು ಅದಾಗಲೇ ನಿಂತಿತ್ತು. ಅವರನ್ನು ರಿವೈವ್​ ಮಾಡಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.

    ಇದನ್ನೂ ಓದಿ: ಪಾಕಿಸ್ತಾನದ ಜನರಿಗೂ ತಲುಪಲಿದೆ ಭಾರತದ ಕರೊನಾ ಲಸಿಕೆ

    ನಂತರ ಭಾರತಕ್ಕೆ ಹಾರಿದ ವಿಮಾನವು ಅಹಮದಾಬಾದ್ ತಲುಪಿದ್ದು, ಅಲ್ಲಿ ವೈದ್ಯಾಧಿಕಾರಿಗಳು, ರೆಹ್​ಮಾನ್​ ಅವರನ್ನು ಮೃತರೆಂದು ಘೋಷಿಸಿದ್ದಾರೆ. ಪ್ರಯಾಣಿಕರನ್ನು ಹೊರಗಿಳಿಸಿ ವಿಮಾನವನ್ನು ಸಾನಿಟೈಸ್ ಮಾಡಿದ ನಂತರ ಲಖನೌಗೆ ಪುನಃ ಪ್ರಯಾಣ ನಡೆಸಲಾಯಿತು ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಇಂಡಿಗೋ ಏರ್​ಲೈನ್ಸ್ ಕಂಪೆನಿ, ಮೃತ ಪ್ರಯಾಣಿಕನ ಕುಟುಂಬಕ್ಕೆ ಸಂತಾಪ ಸೂಚಿಸಿದೆ.

    ಕೆಲವು ದಿನಗಳ ಹಿಂದೆ, ಭಾರತೀಯ ಏರ್ ಆಂಬುಲೆನ್ಸ್ ಒಂದು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ವಿಮಾನ ನಿಲ್ದಾಣದಲ್ಲಿ ಇಂಧನ ತುಂಬಿಸಿಕೊಳ್ಳುವುದಕ್ಕಾಗಿ ತುರ್ತು ಲ್ಯಾಂಡಿಂಗ್ ಮಾಡಿತ್ತು.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಪೊಲೀಸರ ಮೇಲೆ ಕಣ್ಗಾವಲು! ಠಾಣೆ​ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಸುಪ್ರೀಂ ಡೆಡ್​ಲೈನ್

    ಕಂಗನಾ ವಿರುದ್ಧ ಬೇಲಬಲ್ ವಾರಂಟ್… ಮಾತೇ ಮುಳುವಾಯಿತೇ ?!

    “ರಾಹುಲ್ ಭೈಯಾ… ನೀವಾಗ ರಜೆಯ ಮೇಲಿದ್ದಿರಿ… ಅದಕ್ಕೆ ನಿಮಗೆ ಗೊತ್ತಿಲ್ಲ”

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts