More

    ಪಾಕಿಸ್ತಾನದ ಜನರಿಗೂ ತಲುಪಲಿದೆ ಭಾರತದ ಕರೊನಾ ಲಸಿಕೆ

    ನವದೆಹಲಿ: ಕರೊನಾ ನಿವಾರಣೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹಕಾರ ಕೊಡುವ ಪ್ರಯತ್ನದಲ್ಲಿ ಭಾರತ ಈಗಾಗಲೇ ಹಲವು ದೇಶಗಳಿಗೆ ಕರೊನಾ ಲಸಿಕೆಗಳನ್ನು ರವಾನೆ ಮಾಡುತ್ತಿದೆ. ಇದೀಗ ಪಕ್ಕದಲ್ಲೇ ಇದ್ದುಕೊಂಡು ಸದಾ ತೊಂದರೆ ನೀಡುವ ಪಾಕಿಸ್ತಾನಕ್ಕೂ ಮೇಡ್-ಇನ್-ಇಂಡಿಯಾ ಲಸಿಕೆಗಳು ತಲುಪಲಿವೆ ಎಂಬುದು ತಿಳಿದುಬಂದಿದೆ.

    ಈಗಾಗಲೇ ಕರೊನಾ ಲಸಿಕೆಯ ಲಕ್ಷಾಂತರ ಡೋಸ್​ಗಳನ್ನು ಹಲವು ದೇಶಗಳಿಗೆ ಭಾರತ ಸಹಾಯಾರ್ಥವಾಗಿ ನೀಡಿದೆ. ಇವುಗಳಲ್ಲಿ ನೆರೆಯ ರಾಜ್ಯಗಳಾದ ನೇಪಾಳಕ್ಕೆ 10 ಲಕ್ಷ, ಬಾಂಗ್ಲಾದೇಶಕ್ಕೆ 20 ಲಕ್ಷ, ಮ್ಯಾನ್ಮಾರ್​ಗೆ 15 ಲಕ್ಷ, ಗಲ್ಫ್​ ದೇಶ ಒಮಾನ್​ಗೆ 1 ಲಕ್ಷ ಡೋಸ್​ಗಳನ್ನು ರವಾನಿಸಿದೆ. ನಿಕರಾಗುವಾ, ಬಾರ್ಬಡೋಸ್, ಡಾಮಿನಿಕ ಮುಂತಾದ ಸಣ್ಣ ದೇಶಗಳು ಕೂಡ ಭಾರತದಿಂದ ಲಸಿಕೆಯ ಅಪೇಕ್ಷೆಯನ್ನು ಹೊಂದಿವೆ. ಇದರೊಂದಿಗೆ ಈಜಿಪ್ಟ್, ಅಲ್ಜೀರಿಯಾ, ಯುಎಈ ಮತ್ತು ಕುವೈತ್​ಗಳು ಭಾರತದ ಲಸಿಕೆಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿವೆ.

    ಇದನ್ನೂ ಓದಿ: ಮುಂಗಡ ನೆರವಿನ ನಿರೀಕ್ಷೆ: ಅರ್ಥವ್ಯವಸ್ಥೆ ಮೇಲೆ ಕರೊನಾ ಪ್ರಹಾರ; ಸಿಕ್ಕೀತೇ ಹೊಸ ಬದುಕಿನ ಪರಿಹಾರ?

    ಅಂತಾರಾಷ್ಟ್ರೀಯ ಸಂಬಂಧಗಳ ವೃದ್ಥಿಗೆ ಮತ್ತು ವಿಶ್ವ ಸಮುದಾಯದಲ್ಲಿ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಭಾರತಕ್ಕೆ ಇದು ಸಹಕಾರಿಯಾಗಿದೆ. ಅಲ್ಲದೆ, ಲಕ್ಷಾಂತರ ಸಂಖ್ಯೆಯಲ್ಲಿ ತಯಾರಾಗುತ್ತಿರುವ ಲಸಿಕೆಗಳು ಸಮಯಕ್ಕೆ ಸರಿಯಾಗಿ ಸದುಪಯೋಗವಾಗಬೇಕು. ಆದ್ದರಿಂದ ದೇಶದಲ್ಲಿ ಮೊದಲನೇ ಹಂತದ ಲಸಿಕಾ ಅಭಿಯಾನ ನಡೆಸುತ್ತಿರುವ ಭಾರತ ಸರ್ಕಾರ, ಬೇರೆ ದೇಶಗಳಿಗೂ ಲಸಿಕೆ ಕಳುಹಿಸುತ್ತಿದೆ.

    ಇದೀಗ ಪಾಕಿಸ್ತಾನಕ್ಕೂ ಭಾರತದ ಸೀರಮ್ ಇನ್ಸ್​ಟಿಟ್ಯೂಟ್​ ಆಸ್ಟ್ರೊಜೆನಿಕಾ ಕಂಪೆನಿಯೊಂದಿಗೆ ತಯಾರಿಸುತ್ತಿರುವ ಕೋವಿಶೀಲ್ಡ್​​ನ 7 ಮಿಲಿಯನ್ ಡೋಸ್​ಗಳು ಲಭ್ಯವಾಗಲಿವೆ. ಈ ವಿಷಯವನ್ನು ಪಾಕಿಸ್ತಾನ ಪ್ರಧಾನಿ ಇಮ್ರನಾ ಖಾನ್​ರ ಆರೋಗ್ಯ ವಿಶೇಷ ಸಹಾಯಕರಾಗಿರುವ ಫೈಸಲ್ ಸುಲ್ತಾನ್ ತಿಳಿಸಿದ್ದಾರೆ. ಪಾಕಿಸ್ತಾನ ಲಸಿಕಾ ಕಾರ್ಯಕ್ರಮವನ್ನು ಮುಂದಿನ ವಾರದಿಂದ ಆರಂಭಿಸುತ್ತಿದ್ದು, ಚೀನಾದಿಂದ ಮೊದಲ ಕಂತಿನ ಲಸಿಕೆ ಪಡೆಯಲು ವಿಶೇಷ ವಿಮಾನವನ್ನು ರವಾನಿಸಿದೆ. ಭಾರತದ ಲಸಿಕೆಗಳನ್ನು ಮಾರ್ಚ್ ವೇಳೆಗೆ ಪಡೆಯಲಿದೆ.

    VIDEO | “ವೆಲ್​ಕಮ್​ ಟು ದ ಕ್ಲಬ್, ಅಮೆರಿಕ…!”

    “ಅಂತಾರಾಷ್ಟ್ರೀಯ ಒಪ್ಪಂದವಾದ ಕೋವಾಕ್ಸ್ ಅಲೆಯನ್ಸ್​ನಡಿ ವಿಶ್ವ ಸಂಸ್ಥೆಯು ಪಾಕಿಸ್ತಾನದ ಶೇ.20ರಷ್ಟು ಜನಸಂಖ್ಯೆಗೆ ಉಚಿತವಾಗಿ ಕರೊನಾ ಲಸಿಕೆ ಒದಗಿಸುತ್ತಿದೆ. ಅದರಲ್ಲಿ ಚೀನಾದ ಸೀನೊಫಾರ್ಮ್​ನಿಂದ 10 ಮಿಲಿಯನ್ ಡೋಸ್​ಗಳನ್ನು ತರಿಸಿಕೊಳ್ಳುತ್ತಿದ್ದರೆ, ಭಾರತದ ಆಸ್ಟ್ರೊಜಿನೆಕಾದಿಂದ 7 ಮಿಲಿಯನ್ ಡೋಸ್​ಗಳನ್ನು ಪಡೆಯಲಿದ್ದೇವೆ” ಎಂದಿದ್ದಾರೆ ಸುಲ್ತಾನ್.

    ವಿಶ್ವ ಸಂಸ್ಥೆಯ ಕೋವಾಕ್ಸ್ ಕಾರ್ಯಕ್ರಮದಡಿ ಭಾರತವು ಕರೊನಾ ಲಸಿಕೆಯ 100 ಲಕ್ಷ ಡೋಸ್​ಗಳನ್ನು ಬೇರೆ ಬೇರೆ ದೇಶಗಳಿಗೆ ಮಾರಾಟ ಮಾಡಲಿದೆ. ಅಲ್ಲದೆ, ಜಗತ್ತಿನ ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿರುವ ವಿಶ್ವ ಸಂಸ್ಥೆಯ ಉದ್ಯೋಗಿಗಳಿಗಾಗಿ 4 ಲಕ್ಷ ಡೋಸ್​ಗಳನ್ನು ಒದಗಿಸಲಿದೆ.(ಏಜೆನ್ಸೀಸ್)

    ಸರ್ಕಾರಿ ಆಸ್ಪತ್ರೆಯಲ್ಲಿ ಸತ್ತ ಕರೊನಾ ರೋಗಿ ವಾರಸುದಾರರಿಗೆ ₹ 5 ಲಕ್ಷ ಪರಿಹಾರ

    ಅಮೆರಿಕದಲ್ಲಿ ನೆಲಕ್ಕುರುಳಿತು ಗಾಂಧಿ ಪ್ರತಿಮೆ: ಮುಖ, ಪಾದ ತುಂಡರಿಸಿದ ದುಷ್ಕರ್ಮಿಗಳು

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts