More

    ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಭಾರತೀಯ ಮೂಲದ ವಿದ್ಯಾರ್ಥಿನಿ ಆಯ್ಕೆ

    ಲಂಡನ್​: ಮ್ಯಾಗ್ಡಲೀನ್ ಕಾಲೇಜಿನ ಭಾರತೀಯ ಮೂಲದ ಮಾನವ ವಿಜ್ಞಾನ ವಿದ್ಯಾರ್ಥಿನಿಯನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘ (ಎಸ್‌ಯು)ದ ಉಪಚುನಾವಣೆಯ ವಿಜೇತರೆಂದು ಘೋಷಿಸಲಾಗಿದೆ.

    ಆಕ್ಸ್‌ಫರ್ಡ್ ವಿದ್ಯಾರ್ಥಿ ಸಂಘದಲ್ಲಿ ಜನಾಂಗೀಯ ಜಾಗೃತಿ ಮತ್ತು ಸಮಾನತೆ (ಸಿಆರ್‌ಇಇ) ಅಭಿಯಾನದ ಸಹ-ಅಧ್ಯಕ್ಷರು ಮತ್ತು ಆಕ್ಸ್‌ಫರ್ಡ್ ಇಂಡಿಯಾ ಸೊಸೈಟಿಯ ಅಧ್ಯಕ್ಷರು ಆಗಿದ್ದ ಅನ್ವೀ ಭೂತಾನಿ, 2021-22ರ ಶೈಕ್ಷಣಿಕ ವರ್ಷದ ಉಪಚುನಾವಣೆಗೆ ಸ್ಪರ್ಧೆಯಲ್ಲಿದ್ದರು. ಅವರ ವರ್ಚಸ್ಸಿನಿಂದ ದಾಖಲೆಯ ಮತದಾನವನ್ನು ಆಕರ್ಷಿಸಿದೆ.

    ಉಪಚುನಾವಣೆಯಲ್ಲಿ ಅನ್ವಿ ವಿಜೇತರಾಗಿದ್ದಾರೆಂದು ಅಧಿಕೃತವಾಗಿ ಘೋಷಿಸಲಾಗಿದೆ. ಚೆರ್​ವೆಲ್​ ವಿದ್ಯಾರ್ಥಿ ನ್ಯೂಸ್​ಪೇಪರ್​ ಪ್ರಕಾರ ಅನ್ವಿ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಉತ್ತಮ ಅಂಶಗಳನ್ನು ಅಡಕಗೊಳಿಸಿದ್ದೇ ಗೆಲುವಿಗೆ ಕಾರಣ ಎನ್ನಲಾಗಿದೆ. ಆಕ್ಸ್‌ಫರ್ಡ್ ಜೀವನ ವೇತನ ಅನುಷ್ಠಾನಕ್ಕಾಗಿ ಆದ್ಯತೆ, ಕಲ್ಯಾಣ ಸೇವೆಗಳು ಮತ್ತು ಶಿಸ್ತಿನ ಕ್ರಮಗಳನ್ನು ವಿವರಿಸುವುದು ಹಾಗೂ ಪಠ್ಯಕ್ರಮವನ್ನು ವೈವಿಧ್ಯಗೊಳಿಸುವುದಾಗಿ ಅನ್ವಿ ಪ್ರಣಾಳಿಕೆಯಲ್ಲಿ ಸೇರಿಸಿದ್ದರು.

    ವಿದ್ಯಾರ್ಥಿ ಪತ್ರಿಕೆಯ ಪ್ರಕಾರ, ಉಪಚುನಾವಣೆಯಲ್ಲಿ ಅತಿ ಹೆಚ್ಚು ಮತದಾನವಾಗಿದೆ ಮತ್ತು ಕಳೆದ ಹಲವಾರು ವರ್ಷ ನಾಯಕತ್ವ ಚುನಾವಣೆಗಳಲ್ಲಿ ನಡೆದಿದ್ದ ಮತದಾನದ ಪ್ರಮಾಣವನ್ನು ಮೀರಿಸಿದೆ.

    ವಿದ್ಯಾರ್ಥಿ ನಾಯಕತ್ವ ಸ್ಪರ್ಧೆಯು ಆಕ್ಸ್‌ಫರ್ಡ್ ವಿದ್ಯಾರ್ಥಿ ಸಂಘದ ಅಧ್ಯಕ್ಷರ ಚುನಾವಣೆಯಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳನ್ನು ಹೊಂದಿದ್ದು, 11 ವಿದ್ಯಾರ್ಥಿಗಳು ಈ ಸ್ಥಾನಕ್ಕೆ ಸ್ಪರ್ಧಿಸಿದ್ದರು. (ಏಜೆನ್ಸೀಸ್​)

    ಭಾರತೀಯ ವಾಯುಪಡೆಯ ಮಿಗ್​-21 ವಿಮಾನ ಪಂಜಾಬ್​ ಬಳಿ ಪತನ: ಪೈಲಟ್​ಗಾಗಿ ಹುಡುಕಾಟ

    ಫೇಸ್​ಬುಕ್ ಫೇಕ್ ರಿಕ್ವೆಸ್ಟ್ ಜನಸಾಮಾನ್ಯರೇ ಟಾರ್ಗೆಟ್; ಕೇವಲ ಮೆಸೇಜ್ ನೋಡಿ ಹಣ ಕೊಡಬೇಡಿ..

    ರೌಡಿ ಬೇಬಿ ಗುಂಗಲ್ಲಿ ದಿವ್ಯಾ ಸುರೇಶ್​; ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಗೆ ಸಿನಿಮಾ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts