More

    ಕನ್ನಡತಿ ಎಂಆರ್​ ಪೂವಮ್ಮ ಜಯಿಸಿದ್ದ ಏಷ್ಯಾಡ್​ ರಜತಕ್ಕೆ ಈಗ ಸ್ವರ್ಣ ಪದಕದ ಗೌರವ

    ನವದೆಹಲಿ: ಕನ್ನಡತಿ ಎಂಆರ್​ ಪೂವಮ್ಮ ಅವರನ್ನು ಒಳಗೊಂಡ ಭಾರತದ 4/400 ಮೀಟರ್​ ಮಿಶ್ರ ರಿಲೇ ತಂಡ 2018ರ ಏಷ್ಯನ್​ ಗೇಮ್ಸ್​ನಲ್ಲಿ ಜಯಿಸಿದ್ದ ರಜತ ಪದಕ ಈಗ ಸ್ವರ್ಣ ಪದಕವಾಗಿ ಮೇಲ್ದರ್ಜೆಗೇರಿದೆ. ಕೂಟದಲ್ಲಿ ಸ್ವರ್ಣ ಪದಕ ಜಯಿಸಿದ್ದ ಬಹರೇನ್​ ತಂಡದ ಓರ್ವ ಓಟಗಾರ್ತಿ ಉದ್ದೀಪನ ಪ್ರಕರಣದಲ್ಲಿ ನಿಷೇಧ ಶಿಕ್ಷೆಗೆ ಒಳಗಾಗಿರುವುದು ಇದಕ್ಕೆ ಕಾರಣವಾಗಿದೆ.

    ಕನ್ನಡತಿ ಎಂಆರ್​ ಪೂವಮ್ಮ ಜಯಿಸಿದ್ದ ಏಷ್ಯಾಡ್​ ರಜತಕ್ಕೆ ಈಗ ಸ್ವರ್ಣ ಪದಕದ ಗೌರವ

    ರಾಜೀವ್​, ಹಿಮಾದಾಸ್​, ಪೂವಮ್ಮ, ಅನಾಸ್​ ಏಷ್ಯಾಡ್​ ಪದಕ ಗೆಲುವಿನ ಸಂಭ್ರಮದ ಕ್ಷಣ.

    ಬಹರೇನ್​ ತಂಡದ ಓಟಗಾರ್ತಿ ಕೆಮಿ ಅಡೆಕೊಯ ಉದ್ದೀಪನ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದು, 4 ವರ್ಷಗಳ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ. ಹೀಗಾಗಿ ಬಹರೇನ್​ ತಂಡವನ್ನು ಅನರ್ಹಗೊಳಿಸಿ ಸ್ವರ್ಣ ಪದಕವನ್ನು ಈಗ ವಾಪಸ್​ ಪಡೆಯಲಾಗಿದ್ದು, ಅದನ್ನು ಕನ್ನಡತಿ ಎಂಆರ್​ ಪೂವಮ್ಮ, ಹಿಮಾ ದಾಸ್​, ಮೊಹಮದ್​ ಅನಾಸ್​ ಮತ್ತು ಅರೋಕಿಯಾ ರಾಜೀವ್​ ಒಳಗೊಂಡ ಭಾರತ ತಂಡಕ್ಕೆ ನೀಡಲಾಗಿದೆ. ಭಾರತ ತಂಡ 3 ನಿಮಿಷ, 15.71 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿದ್ದರೆ, ಬಹರೇನ್​ ತಂಡ ಆಗ 3 ನಿಮಿಷ, 11.89 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿ ಅಗ್ರಸ್ಥಾನ ಪಡೆದಿತ್ತು. ಕರ್ನಾಟಕದ ಅಥ್ಲೀಟ್​ ಎಂಆರ್​ ಪೂವಮ್ಮ 2018ರ ಜಕಾರ್ತ ಏಷ್ಯಾಡ್​ನ ಮಹಿಳೆಯರ 4/400 ಮೀಟರ್​ ಓಟದಲ್ಲೂ ಸ್ವರ್ಣ ಪದಕ ಜಯಿಸಿದ್ದರು.

    ಇದನ್ನೂ ಓದಿ: ಮೋಟಾರ್​ಸ್ಪೋರ್ಟ್ಸ್​ಗೆ ಮರಳಲು ಸಜ್ಜಾದ ಆಸೀಸ್​ ನೀಲಿಚಿತ್ರ ತಾರೆ!

     ಕನ್ನಡತಿ ಎಂಆರ್​ ಪೂವಮ್ಮ ಜಯಿಸಿದ್ದ ಏಷ್ಯಾಡ್​ ರಜತಕ್ಕೆ ಈಗ ಸ್ವರ್ಣ ಪದಕದ ಗೌರವ

    ಅನು ರಾಘವನ್​

    ಇನ್ನು ಮಹಿಳೆಯರ 400 ಮೀಟರ್​ ಹರ್ಡಲ್ಸ್​ನಲ್ಲಿ ಭಾರತದ ಅನು ರಾಘವನ್​ಗೆ ಕಂಚಿನ ಪದಕದ ಗೌರವ ಲಭಿಸಿದೆ. ಕೆಮಿ ಅಡೆಕೊಯ ಆ ಸ್ಪರ್ಧೆಯಲ್ಲೂ ಸ್ವರ್ಣ ಜಯಿಸಿದ್ದರು. ಹೀಗಾಗಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಅನು ರಾಘವನ್​ಗೆ ಈಗ ಪದಕ ಒಲಿದುಬಂದಿದೆ. ಅನು ರಾಘವನ್​ 56.92 ಸೆಕೆಂಡ್​ಗಳಲ್ಲಿ ಓಡಿದ್ದರು. ಭಾರತೀಯ ಅಥ್ಲೆಟಿಕ್ಸ್​ ಒಕ್ಕೂಟದ ಅಧ್ಯಕ್ಷ ಆದಿಲ್​ ಸುಮರಿವಾಲಾ ಈ ಬೆಳವಣಿಗೆಯ ಬಗ್ಗೆ ಮಾಹಿತಿ ನೀಡಿದ್ದು, ವಿಶ್ವ ಅಥ್ಲೆಟಿಕ್ಸ್​ ವೆಬ್​ಸೈಟ್​ನ ರಾಂಕಿಂಗ್​ನಲ್ಲಿ ಈಗ ಭಾರತದ 4/400 ಮೀಟರ್​ ರಿಲೇ ತಂಡವನ್ನು ಏಷ್ಯನ್​ ಗೇಮ್ಸ್ ಚಾಂಪಿಯನ್​ ಆಗಿ ತೋರಿಸಲಾಗುತ್ತಿದೆ ಎಂದು ಸಂಭ್ರಮಿಸಿದ್ದಾರೆ. ಅಲ್ಲದೆ ಅನು ಅವರಿಗೆ ಪದಕ ಒಲಿದಿರುವುದರಿಂದ ಈಗ ಭಾರತ ಏಷ್ಯಾಡ್​ನ ಅಥ್ಲೆಟಿಕ್ಸ್​ ಸ್ಪರ್ಧೆಯಲ್ಲಿ ಜಯಿಸಿದ ಒಟ್ಟು ಪದಕಗಳ ಸಂಖ್ಯೆ 20ಕ್ಕೆ (8 ಚಿನ್ನ, 9 ಬೆಳ್ಳಿ, 3 ಕಂಚು)ಏರಿದೆ ಎಂದಿದ್ದಾರೆ.

    ಪಾಕಿಸ್ತಾನ​ ಪರ ಆಡಲು ಬಯಸಿದ್ದ ಇಮ್ರಾನ್​ ತಾಹಿರ್​ ಪತ್ನಿ ಮಾತು ಕೇಳಿ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸಿದರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts