More

    ಹ್ಯಾಕ್​ ಮಾಡಿದ್ದಕ್ಕೂ ಈಕೆಗೆ ಲಕ್ಷಗಟ್ಟಲೆ ರೂಪಾಯಿ ಇನಾಮು ಸಿಕ್ತು; ಮೈಕ್ರೋಸಾಫ್ಟ್​, ಫೇಸ್​ಬುಕ್​ನಿಂದ್ಲೇ ಬಹುಮಾನ

    ನವದೆಹಲಿ:​ ಹ್ಯಾಕ್​ ಮಾಡಿ ಸಿಕ್ಕಿಹಾಕಿಕೊಂಡರೆ ಜೈಲುವಾಸ ಗ್ಯಾರಂಟಿ. ಆದರೆ ಇಲ್ಲೊಬ್ಬಳಿಗೆ ಹ್ಯಾಕ್​ ಮಾಡಿದ್ದಕ್ಕೇ ಲಕ್ಷಗಟ್ಟಲೆ ರೂಪಾಯಿ ಇನಾಮು ಸಿಕ್ಕಿದೆ. ಅದರಲ್ಲೂ ಆಕೆ ಹ್ಯಾಕ್ ಮಾಡಿದ್ದು ಭಾರಿ ದೊಡ್ಡ ಕಂಪನಿಗಳ ವ್ಯವಸ್ಥೆಯನ್ನೇ. ಹೌದು.. ಮೈಕ್ರೋಸಾಫ್ಟ್​ ಹಾಗೂ ಫೇಸ್​ಬುಕ್​ ಕಂಪನಿಗಳ ಐಟಿ ವ್ಯವಸ್ಥೆಯನ್ನು ಹ್ಯಾಕ್ ಮಾಡಿದ್ದಕ್ಕೆ ಈಕೆಗೆ ಲಕ್ಷಾಂತರ ರೂಪಾಯಿ ಆ ಕಂಪನಿಗಳಿಂದಲೇ ಸಿಕ್ಕಿದೆ. ಏಕೆಂದರೆ ಈಕೆ ಎಥಿಕಲ್ ಹ್ಯಾಕರ್.

    ಹೀಗೆ ಹ್ಯಾಕ್​ ಮಾಡಿಯೇ ಲಕ್ಷಗಟ್ಟಲೆ ರೂಪಾಯಿ ಗಿಟ್ಟಿಸಿಕೊಂಡಿರುವ ಯುವತಿಯ ಹೆಸರು ಅದಿತಿ ಸಿಂಗ್. ದೆಹಲಿಯ 20 ವರ್ಷದ ಈಕೆ ಎಥಿಕಲ್ ಹ್ಯಾಕರ್ ಆಗಿದ್ದು, ಮೈಕ್ರೋಸಾಫ್ಟ್ ಕಂಪನಿಯ ಅಜ್ಯೂರ್ ಕ್ಲೌಡ್ ಸಿಸ್ಟಮ್​ನಲ್ಲಿ ರಿಮೋಟ್ ಕೋಡ್ ಎಕ್ಸಿಕ್ಯೂಷನ್​(ಆರ್​ಸಿಇ) ಬಗ್ ಇರುವುದನ್ನು ಕಂಡುಹಿಡಿದಿದ್ದಾಳೆ. ಇದಕ್ಕೋಸ್ಕರ ಮೈಕ್ರೋಸಾಫ್ಟ್ ಕಂಪನಿ ಈಕೆಗೆ 22 ಲಕ್ಷ ರೂ. ಬಹುಮಾನವಾಗಿ ಕೊಟ್ಟಿದೆ.

    ಇದನ್ನೂ ಓದಿ: ಮಹಿಳಾ ಪೊಲೀಸರಿಗೇ ಲೈಂಗಿಕ ಕಿರುಕುಳ ಕೊಟ್ಟ; ಮಾಸ್ಕ್ ಹಾಕಿಲ್ಲ ಎಂದು ತಡೆದಿದ್ದಕ್ಕೆ ಪೀಡಿಸಿದ…

    ಎರಡು ತಿಂಗಳ ಹಿಂದೆ ಫೇಸ್​ಬುಕ್​ ಹ್ಯಾಕ್ ಮಾಡಿರುವ ಈಕೆ ಅಲ್ಲಿಯೂ ಇಂಥದ್ದೇ ಬಗ್​ ಕಂಡುಹಿಡಿದಿದ್ದು, ಫೇಸ್​ಬುಕ್ ಸಂಸ್ಥೆ ಕೂಡ ಸುಮಾರು ಐದೂವರೆ ಲಕ್ಷ ರೂಪಾಯಿ ಬಹುಮಾನ ನೀಡಿದೆ. ಈ ಥರದ ಬಗ್​ ಕಂಡುಹಿಡಿದ ಮೊದಲಿಗಳು ಎಂಬ ಹೆಗ್ಗಳಿಕೆ ಅದಿತಿಯದ್ದಾಗಿದ್ದು, ಈಕೆ ಹ್ಯಾಕ್ ಮಾಡಿ ಈ ಬಗ್​ ಕುರಿತು ಮೈಕ್ರೋಸಾಫ್ಟ್​ನವರಿಗೆ ತಿಳಿಸಿದರೂ ಅವರು ಅದನ್ನು ವಿಶ್ಲೇಷಿಸಿ, ಎಲ್ಲವೂ ಸುರಕ್ಷಿತವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು 2 ತಿಂಗಳು ಬೇಕಾಯಿತಂತೆ.

    ಇದನ್ನೂ ಓದಿ: ಸೀಟ್​​ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ

    ಕಳೆದ ಎರಡು ವರ್ಷಗಳಿಂದ ಈಕೆ ಎಥಿಕಲ್ ಹ್ಯಾಕಿಂಗ್​ನಲ್ಲಿ ತೊಡಗಿಸಿಕೊಂಡಿದ್ದು, ನಾನು ಮೊದಲಿಗೆ ನಮ್ಮ ಪಕ್ಕದ ಮನೆಯವರ ವೈಫೈ ಪಾಸ್​ವರ್ಡ್ ಹ್ಯಾಕ್ ಮಾಡಿದ್ದೆ. ಅಲ್ಲಿಂದ ಹಿಂದೆ ತಿರುಗಿ ನೋಡದೆ ಹ್ಯಾಕಿಂಗ್​ನಲ್ಲಿ ಮುಂದುವರಿದೆ. ನಾನು ನೀಟ್​ಗೆ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ನನಗೆ ಹ್ಯಾಕಿಂಗ್​ನಲ್ಲಿ ಆಸಕ್ತಿ ಮೂಡಿತ್ತು ಎಂದು ಅದಿತಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)

    ಅರ್ಧಕ್ಕರ್ಧ ಕಡಿತ; ಕಪ್ಪು ಶಿಲೀಂಧ್ರ ರೋಗ ಪತ್ತೆ ಪರೀಕ್ಷೆಗೆ ದರ ನಿಗದಿಪಡಿಸಿದ ಸರ್ಕಾರ

    ಆ ಭಾಗ ಸ್ವಲ್ಪ ಕಾಣಿಸ್ತಿದೆ ಅಂತ ಜಿಮ್​ನಿಂದ್ಲೇ ಹೊರಗೆ ಕಳಿಸಿದ್ರಂತೆ!; ಅವಮಾನ ಆಯಿತೆಂದು ವಿಡಿಯೋ ಮಾಡಿ ಅತ್ತಳು…

    43 ಸಲ ಪಾಸಿಟಿವ್​, 7 ಬಾರಿ ಆಸ್ಪತ್ರೆಗೆ ದಾಖಲು; ಈತ ಜಗತ್ತಲ್ಲೇ ಅತಿ ಹೆಚ್ಚು ದಿನ ಕೋವಿಡ್​ನಿಂದ ಬಳಲಿದ ವ್ಯಕ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts