More

    ಮನೆ ಕೆಲಸದಾಕೆ ಮೇಲೆ ಹಲ್ಲೆ ನಡೆಸಿದ್ದಕ್ಕೆ ಭಾರತೀಯ ದಂಪತಿಗೆ ಜೈಲು; 12.57 ಲಕ್ಷ ರೂ. ದಂಡ…!

    ಮನೆ ಕೆಲಸದಾಕೆ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಭಾರತೀಯ ದಂಪತಿಗೆ 21 ತಿಂಗಳು ಜೈಲು ಹಾಗೂ 12.57 ಲಕ್ಷ ರೂ ದಂಡ ವಿಧಿಸಿ ಸಿಂಗಾಪೂರ್​ ಕೋರ್ಟ್​ ಆದೇಶ ನೀಡಿದೆ.

    ಸಿಂಗಾಪೂರ್​ನಲ್ಲಿ ನೆಲೆಸಿರುವ ಮೊಹಮ್ಮದ್​ ತಸ್ಲೀನ್​ ಹಾಗೂ ಫರ್ಹಾ ತೇಹ್ಸಿನ್​ ದಂಪತಿ ಶಿಕ್ಷೆಗೊಳಗಾದವರು. 2016ರಲ್ಲಿ ಭಾರತದಿಂದ ಅಮನ್​ದೀಪ್​ ಕೌರ್​ ಎಂ ಮಹಿಳೆಯನ್ನು ಕೆಲಸಕ್ಕೆಂದು ಕರೆಯಿಸಿಕೊಂಡಿದ್ದರು. ಆಗಿನಿಂದಲೂ ಆಕೆ ಮೇಲೆ ನಿರಂತರವಾಗಿ ಹಲ್ಲೆ ನಡೆಸುತ್ತಿದ್ದರು ಎಂದು ಹೇಳಲಾಗಿದೆ.

    ಇದನ್ನೂ ಓದಿ; ಕರೊನಾ ಕೇಸ್​ಗಳಿಲ್ಲ; ಮಾಸ್ಕ್​ ಧರಿಸೋದು ಕಡ್ಡಾಯವೇನಲ್ಲ; ಅದ್ಯಾವ ದೇಶದಲ್ಲಿದೆ ಈ ನಿರಾಳತೆ? 

    ಫರ್ಹಾಗೆ 21 ತಿಂಗಳ ಜೈಲು ಹಾಗೂ 4.37 ಲಕ್ಷ ರೂ. ದಂಡ, ಪತಿ ಮೊಹಮ್ಮದ್​ಗೆ 4 ತಿಂಗಳ ಜೈಲು ಮತ್ತು 8.20 ಲಕ್ಷ ರೂ. ದಂಡ ವಿಧಿಸಿದೆ. ಹಲ್ಲೆ ನಡೆಸಿದ್ದಲ್ಲದೆ, ತಮ್ಮ ಕುಕೃಯ್ತಗಳನ್ನು ಮುಚ್ಚಿಡಲು ಆಕೆಗೆ ಹಣದ ಆಮಿಷವೊಡ್ಡಿ ಸುಳ್ಳು ಹೇಳುವಂತೆ ತಿಳಿಸಿದ್ದನ್ನು ಕೋರ್ಟ್​ ಗಂಭೀರವಾಗಿ ಪರಿಗಣಿಸಿದೆ.

    ದಂಪತಿ ನೀಡುತ್ತಿದ್ದ ಹಲ್ಲೆಯಿಂದ ತಪ್ಪಿಸಿಕೊಳ್ಳಲು ಮನೆಯ ಕಿಟಕಿಯಾಚೆ ನೇತಾಡುತ್ತಿದ್ದುದನ್ನು ಗಮನಿಸಿದ ಇನ್ನೊಬ್ಬ ಭಾರತೀಯ ಆಕೆಯನ್ನು ರಕ್ಷಿಸಿದ್ದ. ಬಳಿಕ ಆಕೆಯನ್ನು ಮಹಿಳಾ ಪುನರ್ವಸತಿ ಶಿಬಿರದಲ್ಲಿ ಇಡಲಾಗಿತ್ತು.

    ಇದನ್ನೂ ಓದಿ; ಮೇಲ್ವರ್ಗದವನ ಹಿತ್ತಿಲಲ್ಲಿದ್ದ ಹೂ ಕಿತ್ತಿದ್ದಕ್ಕೆ ನಾಯ್ಕ್​ ಸಮುದಾಯದ 40 ಕುಟುಂಬಗಳಿಗೆ ಬಹಿಷ್ಕಾರ…! 

    ಕೌರ್​ಗೆ ಹೊಡಿದಿದ್ದಲ್ಲದೇ, ಬಡಿಗೆಯಿಂದಲೂ ಥಳಿಸಿದ್ದರು. ಆಕೆಯ ಮೇಲೆ ಹಲ್ಲೆ ನಡೆಸಿದ್ದು, ವೈದ್ಯಕೀಯ ಪರೀಕ್ಷೆ ವೇಳೆ ಬಯಲಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ದಂಪತಿ ಆಕೆಗೆ 3 ಲಕ್ಷ ರೂ. ( 5,500 ಸಿಂಗಾಪೂರ್​ ಡಾಲರ್​) ಪರಿಹಾರ ನೀಡುವಂತೆ ಆದೇಶಿಸಿದೆ.

    ಕೆಲಸ ಕಳೆದುಕೊಂಡಿದ್ದೀರಾ…? ಸರ್ಕಾರವೇ ಕೊಡುತ್ತೆ ಮೂರು ತಿಂಗಳ ಸಂಬಳ; ಅರ್ಹತೆಗಳೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts