More

    ಕ್ಯಾಲಿಫೋರ್ನಿಯ ಚುನಾವಣಾ ಕಣಕ್ಕೆ ಭಾರತೀಯ ಅಮೆರಿಕನ್​ ಮಹಿಳೆ

    ಕ್ಯಾಲಿಫೋರ್ನಿಯ : ಇಂಡಿಯನ್ ಅಮೇರಿಕನ್​ ಮಹಿಳೆಯೊಬ್ಬರು ಅಮೆರಿಕದ ಹೌಸ್​ ಆಫ್​ ರೆಪ್ರಸೆಂಟೆಟೀವ್ಸ್​ ಸದಸ್ಯತ್ವಕ್ಕಾಗಿ ಕ್ಯಾಲಿಫೋರ್ನಿಯಾದ ಜಿಲ್ಲೆಯೊಂದರ ಚುನಾವಣಾ ಕಣಕ್ಕೆ ಇಳಿಯುತ್ತಿದ್ದಾರೆ. ಕ್ಯಾಲಿಫೋರ್ನಿಯಾದ ರಿವರ್​ಸೈಡ್​ನ ನಿವಾಸಿಯಾಗಿರುವ ಉದ್ಯಮಿ ಶ್ರೀನಾ ಕುರಾನಿ, ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂದು ವರದಿ ತಿಳಿಸಿದೆ.

    ಶ್ರೀನಾ ತಂದೆ-ತಾಯಿ ಭಾರತದಿಂದ ಅಮೆರಿಕಕ್ಕೆ ವಲಸೆ ಹೋಗಿ, ಹಲವು ವರ್ಷಗಳಿಂದ ರಿವರ್​ಸೈಡ್​ನಲ್ಲಿ ಪೂಲ್​ ಸಪ್ಲೈ ಬಿಸಿನೆಸ್​ನಲ್ಲಿ ತೊಡಗಿದ್ದಾರೆ. ಅಮೆರಿಕದ ನಾಗರೀಕಳಾಗಿರುವ ಶ್ರೀನಾ ಒಬ್ಬ ಮೆಕಾನಿಕಲ್ ಇಂಜಿನಿಯರ್​ ಆಗಿದ್ದು, ಹಲವು ಜನರಿಗೆ ಉದ್ಯೋಗ ನೀಡಿರುವ ಉದ್ಯಮಿ ಸಹ ಆಗಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಮಧ್ಯಕಾಲೀನ ಚುನಾವಣೆಯಲ್ಲಿ, ರಿಪಬ್ಲಿಕನ್ ಪಾರ್ಟಿಯ ಹಿರಿಯ ಸದಸ್ಯ ಕೆನ್​ ಕಾಲ್ವರ್ಟ್​ ವಿರುದ್ಧ ಸೆಣೆಸಲಿಚ್ಛಿಸಿದ್ದಾರೆ.

    ಇದನ್ನೂ ಓದಿ: ಪೆಗಾಸಸ್​ ಸಂಭಾವ್ಯ ದಾಳಿ ಪಟ್ಟಿಯಲ್ಲಿದೆ ಅನಿಲ್​ ಅಂಬಾನಿ, ಸಿಬಿಐ ಮಾಜಿ ಮುಖ್ಯಸ್ಥರ ಹೆಸರು!

    “ಕೆನ್ ಕಾಲ್ವರ್ಟ್​ ಅವರು 30 ವರ್ಷಗಳಿಂದ ನಮ್ಮ ಪ್ರತಿನಿಧಿಯಾಗಿದ್ದಾರೆ. ಈಗ ಹೊಸತನಕ್ಕೆ ಸಮಯ ಬಂದಿದೆ. ವಾಷಿಂಗ್ಟನ್​ನಲ್ಲಿ ನಮ್ಮ ಪ್ರದೇಶಕ್ಕೆ ಉತ್ತಮ ಪ್ರಾತಿನಿಧ್ಯ ದೊರಕಿಸಬೇಕು. ಜನರಿಗೆ ಆರೋಗ್ಯಕರ, ಸುರಕ್ಷಿತ ವಾತಾವರಣದಲ್ಲಿ ಉತ್ತಮ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳಲು ಪೂರಕ ಪರಿಸರ ನಿರ್ಮಿಸಬೇಕು ಎಂಬ ಆಶಯ ನನ್ನದು” ಎಂದಿದ್ದಾರೆ, ಶ್ರೀನಾ ಕುರಾನಿ. (ಏಜೆನ್ಸೀಸ್)

    ಕರೊನಾ ಭಯದಿಂದ 15 ತಿಂಗಳು ಮನೆಯಲ್ಲೇ ಬಂಧಿಯಾಗಿದ್ದ ಕುಟುಂಬ!

    ಮಹಿಳೆಯರಿಗೆ ವರದಾನ, ಈ ಸುಲಭ ಯೋಗಾಸನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts