More

    ಹೈ ಅಲರ್ಟ್​ನಲ್ಲಿದೆ ಇಂಡಿಯನ್ ಏರ್​ಫೋರ್ಸ್​

    ನವದೆಹಲಿ: ಲಡಾಕ್ ಭಾಗದಲ್ಲಿ ಚೀನಾ, ಕಾಶ್ಮೀರ ಭಾಗದಲ್ಲಿ ಪಾಕಿಸ್ತಾನ ಸೇನೆಗಳ ಕಿರಿಕಿರಿ ಹೆಚ್ಚಾಗುತ್ತಿದ್ದಂತೆ, ಭಾರತೀಯ ವಾಯುಪಡೆ ಹೈಅಲರ್ಟ್​ ಜಾಗೃತಾವಸ್ಥೆಯಲ್ಲಿ ಸಿದ್ದವಾಗಿದೆ. ಪರಿಸ್ಥಿತಿ ಬೇಡಿದರೆ ಕೇವಲ ಎಂಟೇ ನಿಮಿಷದಲ್ಲಿ ಲಡಾಕ್​ ಭಾಗದಲ್ಲಿ ಶತ್ರಪಡೆ ಮೇಲೆರಗಲು ವಾಯುಪಡೆ ಸಜ್ಜಾಗಿದೆ.

    ಚೀನಾ ಸೇನೆ ಲಡಾಕ್​ನ ಗಾಲ್ವಾನ್ ಕಣಿವೆ ಮೇಲೆ ದೃಷ್ಟಿ ಇಟ್ಟು ಮುನ್ನುಗ್ಗುತ್ತಿರುವ ಕಾರಣ ವಾಯುಪಡೆ ಹೆಚ್ಚಿನ ಜಾಗೃತಾವಸ್ಥೆಯನ್ನು ಅಳವಡಿಸಿಕೊಂಡಿದೆ. ಭಾರತ-ಚೀನಾ ಗಡಿ ಭಾಗದ ಆಯಕಟ್ಟಿನ ಪ್ರದೇಶಗಳಲ್ಲಷ್ಟೇ ಅಲ್ಲ, ಗಡಿ ಉದ್ದಕ್ಕೂ ಕಣ್ಗಾವಲು ಬಿಗಿಗೊಳಿಸಿದೆ. ಭಾರತದ ಗಡಿ ರಕ್ಷಣೆ ವಿಚಾರದಲ್ಲಿ ಯಾವುದೇ ಸಂಕಷ್ಟ ಎದುರಾದರೂ ಕೇವಲ 8 ನಿಮಿಷದಲ್ಲಿ ಪ್ರತಿದಾಳಿ ಎಸಗುವುದಕ್ಕೆ ಸೇನೆ ಸನ್ನದ್ಧವಾಗಿದೆ.

    ಇದನ್ನೂ ಓದಿ: ಕರೊನಿಲ್​ ತಡೆಗೆ ಆಯುಷ್​ ಇಲಾಖೆ ತಜ್ಞರ ಸಮಿತಿಯಲ್ಲಿರುವ ಮುಸ್ಲಿಮರು ಕಾರಣ? ಇಲ್ಲಿದೆ ನೋಡಿ ವಾಸ್ತವ !

    ಭಾರತೀಯ ವಾಯುಪಡೆಯ ಹೆಲಿಕಾಪ್ಟರ್​ಗಳು ಲಡಾಕ್​ನ ಕಡಿದಾದ ಬೆಟ್ಟ, ಕಣಿವೆ ಪ್ರದೇಶಗಳ ನಡುವೆ ಸಂಚರಿಸಿ ದಾಳಿ ಎಸಗುವ ಸಾಮರ್ಥ್ಯ ಹೊಂದಿವೆ. ಚೀನಾ ಕೂಡ ಗಡಿಯಲ್ಲಿ ತನ್ನ ವಾಯುನೆಲೆಯನ್ನು ಸಕ್ರಿಯವಾಗಿರಿಸಿದೆ. ಚೀನಾದ ಗಡಿಯಲ್ಲಿ ಅಂದರೆ ಲಡಾಕ್​ ಭಾಗದಲ್ಲಿ ಚೀನೀಯರ ಮೂರು ವಾಯುನೆಲೆಗಳಿವೆ. ಇದೇ ವೇಳೆ, ಪಾಕಿಸ್ಥಾನದ ಪಿಒಕೆ ಭಾಗದಲ್ಲಿರುವ ಸ್ಕದ್ರು ವಾಯುನೆಲೆಯನ್ನೂ ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಚೀನಾ ದೃಷ್ಟಿಹರಿಸಿದೆ.

    ಚೀನಾ ಜೆ-8 ಫೈಟರ್​ಗಳನ್ನು ಮತ್ತು ಬಾಂಬರ್​ ವಿಮಾನಗಳನ್ನು ವಾಯುನೆಲೆಯಲ್ಲಿ ಸಜ್ಜುಗೊಳಿಸಿ ಇರಿಸಿದೆ. ಕ್ಸಿಜಿಯಾಂಗ್ ಮಿಲಿಟರಿ ಕಮಾಂಡರ್​ ಅಧೀನದಲ್ಲಿ ಹೋಟನ್​ ಎಂಬಲ್ಲಿ ಸ್ಟ್ರಾಟಜಿಕ್​ ನೆಲೆಯನ್ನು ಚೀನಾ ಸಜ್ಜುಗೊಳಿಸಿದೆ. ಅಲ್ಲಿ 35-40 ಫೈಟರ್ ಜೆಟ್​ಗಳಿವೆ. ಇದರಲ್ಲಿ ಜೆ-11, ಜೆ-8 ಬಾಂಬರ್ ವಿಮಾನಗಳು ಮತ್ತು ಎಇಡಬ್ಲ್ಯುಎಸಿಎಸ್​ ವಿಮಾನಗಳು ಸೇರಿವೆ. ಕಶ್ಗರ್ ಪ್ರಾಂತ್ಯದ ವಾಯುನೆಲೆಯ ಬಲದ ಮೇಲೂ ಚೀನಾ ಅವಲಂಬಿಸಿದೆ.

    ಇದನ್ನೂ ಓದಿ:  ‘ಕರೊನಾ ಕವಚ್’​ ಇದ್ದರೆ ಸಾಕು ಚಿಂತೆ ದೂರ

    ಇಷ್ಟೆಲ್ಲಾ ಆದಾಗ್ಯೂ ಸನ್ನಿವೇಶಗಳು ಭಾರತದ ಪರವಾಗಬಲ್ಲ ಪ್ರಮುಖ ಅಂಶಗಳು ಇವೆ. ಭಾರತದ ಫೈಟರ್ ಜೆಟ್​ಗಳು ಗರಿಷ್ಟ ಎತ್ತರದಲ್ಲಿ ಹಾರಬಲ್ಲ ಸಾಮರ್ಥ್ಯದ ಸಮರ ವಿಮಾನಗಳು. ಭಾರತೀಯ ವಾಯುಪಡೆಯಲ್ಲಿ ಸುಖೋಯ್​, ಮಿರಾಜ್​, ಜಾಗ್ವಾರ್​, ಮಿಗ್ ಮುಂತಾದ ವಿಮಾನಗಳಿವೆ. ಇವುಗಳ ಶಕ್ತಿ ಸಾಮರ್ಥ್ಯ ಗಣನೀಯವಾದುದು. (ಏಜೆನ್ಸೀಸ್)

    ಅನಂತನಾಗ್​ನಲ್ಲಿ ಎನ್​ಕೌಂಟರ್​: ಮೂವರು ಉಗ್ರರ ಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts