More

    ಕಲಬುರಗಿಯಲ್ಲಿ ಹೈ ಅಲರ್ಟ್​: 31 ಜನರಿಗೆ ಕರೋನಾ ಹೈ ರಿಸ್ಕ್, 15 ಜನರಿಗೆ ಲೋ ರಿಸ್ಕ್​

    ಕಲಬುರಗಿ: ನಗರವನ್ನು ತಲ್ಲಣಗೊಳಿಸಿರುವ ಕರೊನಾ ಸೋಂಕು ತಡೆಗೆ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿವೆ. 76 ವರ್ಷದ ವೃದ್ಧ ಕರೊನಾಕ್ಕೆ ಬಲಿಯಾಗಿರುವುದು ಖಚಿತವಾಗುತ್ತಿದ್ದಂತೆ ಮೃತನ ಜತೆ ಸಂಪರ್ಕದಲ್ಲಿ ಇದ್ದವರನ್ನು ಗುರುತಿಸಿ ಪ್ರತ್ಯೇಕಿಸಿ ಇರಿಸಲಾಗಿದೆ.

    46 ಜನರ ಪೈಕಿ 31 ಹೈರಿಸ್ಕ್ ಎಂದು ಪರಿಗಣಿಸಿದ್ದು, ಇವರಲ್ಲಿ ನಾಲ್ವರ ರಕ್ತದ ಮಾದರಿ ಬೆಂಗಳೂರು ಲ್ಯಾಬ್ಗೆ ಕಳಿಸಿಕೊಡಲಾಗಿದೆ. ಇನ್ನುಳಿದ 15 ಜನ ಲೋ ರಿಸ್ಕ್​​ನಲ್ಲಿದ್ದು, ಇಎಸ್ಐಸಿ ಆಸ್ಪತ್ರೆ ಐಸೋಲೇಟೆಡ್ ವಾರ್ಡ್​ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

    ವಿದೇಶ ಪ್ರಯಾಣ ಮಾಡಿ ಕಲಬುರಗಿಗೆ ಬಂದವರಿದ್ದರೆ ತಕ್ಷಣ ತಪಾಸಣೆಗೆ ಒಳಗಾಗಬೇಕು. ಮೊದಲ ಹಂತವಾಗಿ ಮಹಾನಗರದಲ್ಲಿ ಹೆಚ್ಚು ಕಟ್ಟೆಚ್ಚರ ವಹಿಸಲಾಗಿದೆ. ಸಾರ್ವಜನಿಕರು ಗುಂಪು-ಗುಂಪಾಗಿ ಸೇರಬಾರದು. ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಯಾರೂ ಆತಂಕಕ್ಕೆ ಒಳಗಾಗಬಾರದು. ಸಮಾಜದಲ್ಲಿ ತಪ್ಪು ಸಂದೇಶ ರವಾನೆಯಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.

    ಎಲ್ಲೆಡೆ ಸ್ಕ್ರೀನಿಂಗ್: ನಗರ ಹೊರವಲಯದ ಚೆಕ್ ಪೋಸ್ಟ್, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ ಸೇರಿ ಹೆಚ್ಚು ಜನಸಂದಣಿ ಇರುವ ಪ್ರದೇಶಗಳಲ್ಲಿ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ. ಮಾಲ್ಸ್, ಥಿಯೇಟರ್ಸ್, ಗಾರ್ಡನ್ಸ್, ಸ್ಟೇಡಿಯಂನಂಥ ಪ್ರದೇಶಗಳಲ್ಲಿ ಜನರ ಗುಂಪು ನಿರ್ಬಂಧ ಹೇರಲಾಗಿದೆ. ಸಕರ್ಾರಿ ಕಚೇರಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ನಿಷ್ಕ್ರಿಯಗೊಳಿಸಲಾಗಿದೆ.

    ಬ್ರೇಕಿಂಗ್ ನ್ಯೂಸ್​: ಒಂದು ವಾರ ಕರ್ನಾಟಕ ಬಂದ್​- ಆರೋಗ್ಯ ತುರ್ತುಪರಿಸ್ಥಿತಿ: ಸಿಎಂ ಯಡಿಯೂರಪ್ಪ ಅವರ ಪತ್ರಿಕಾಗೋಷ್ಠಿ ವಿಡಿಯೋ ಇಲ್ಲಿದೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts