More

    ಹಳೇ ಯೋಜನೆಗೆ ಮೋದಿ ಹೊಸ ಹೆಸರಷ್ಟೇ

    ಕಲಬುರಗಿ: ಮೋದಿ ಸರ್ಕಾರವೂ ೧೦ ವರ್ಷದಲ್ಲಿ ಒಂದೇ ಒಂದು ಹೊಸ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಕೇವಲ ಥ್ರಿ ಆರ್ ಕೆಲಸ ಮಾಡಿದೆ. ಕಾಂಗ್ರೆಸ್ ಸರ್ಕಾರಗಳು ಜಾರಿಗೆ ತಂದಿರುವ ಹಳೇ ಯೋಜನೆಗಳಿಗೆ ರೀ ನೇಮ್ (ಮರುನಾಮಕರಣ) , ರೀ ಪ್ಯಾಕೇಜಿಂಗ್ (ಹೊಸ ರೂಪ), ರೀ ಲಾಂಚ್ (ಮರು ಉದ್ಘಾಟನೆ) ಮಾಡಿದೆ. ಪ್ರಸ್ತುತ ಮೋದಿ ಗ್ಯಾರಂಟಿ ಎನ್ನುತ್ತಿದ್ದು, ಗ್ಯಾರಂಟಿ ಪದವೂ ಕರ್ನಾಟಕದ ಕಾಂಗ್ರೆಸ್ ಸರ್ಕಾರದ್ದು, ಬಿಜೆಪಿಯವರೂ ಏನೂ ನೀಡಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

    ಲೋಕಸಭೆ ಚುನಾವಣೆ ಪ್ರಿಯಾಂಕ್ ಖರ್ಗೆ ವರ್ಸಸ್ ಜಾಧವ್, ಅಲ್ಲಮಪ್ರಭು ವರ್ಸಸ್ ಬಿ.ಜಿ.ಪಾಟೀಲ್ ಅಲ್ಲ. ಇದು ಅಭಿವೃದ್ಧಿಯಾಧಾರಿತ ಚರ್ಚೆ. ಸಂಸದ ಜಾಧವ್ ಲೋಕಸಭೆ ಕ್ಷೇತ್ರಕ್ಕೆ ನೀಡಿರುವ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು. ೩೭೧ (ಜೆ)ಗೆ ಬಿಜೆಪಿ ವಿರೋಧಿಸಿತ್ತು. ಜಾರಿ ಮಾಡಿದ್ವಿ. ಕೇಂದ್ರೀಯ ವಿವಿ, ಜಯದೇವ, ನೀರಾವರಿ, ರಾಷ್ಟಿಯ ಹೆದ್ದಾರಿ, ೨೭ ಹೊಸ ರೈಲು, ರೈಲ್ವೆ ಸೇತುವೆಗಳು, ಪೊಲೀಸ್ ತರಬೇತಿ ಕೇಂದ್ರ, ಪೌರಾದೇವಿ, ವಾರಣಾಸಿ, ಅಜ್ಮೇರ್‌ಗೆ ರೈಲು ಹೀಗೆ ಸಾಲು ಸಾಲು ಯೋಜನೆಗಳನ್ನು ತಂದಿz್ದೆÃವೆ. ರೈಲ್ವೆ ಡಿವಿಸ್‌ನ ಬಂದಿದ್ರೆ ೧೦ ವಂದೇ ಭಾರತ್ ಬರ್ತಾ ಇತ್ತು. ಆದರೆ ಮೋದಿ ಸರ್ಕಾರದಿಂದ ಒಂದೇ ಒಂದು ಯೋಜನೆ ಬಂದಿಲ್ಲ. ಕೇಳಿದ್ರೆ ಮೋದಿ ಹೆಸರು ಹೇಳ್ತಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು

    ಬಿಜೆಪಿಗರಿಗೆ ಪ್ರಿಯಾಂಕ್ ಖರ್ಗೆ ಮನೆದೇವರಾಗಿದ್ದು, ಒಳ್ಳೆ ಫೋಟೋ ಬೇಕಾದರೆ ಕಳುಹಿಸುತ್ತೇನೆ. ೨೪ ಗಂಟೆ ಮೊದಲು ತಿಳಿಸಿದರೆ ಕಾಂಗ್ರೆಸ್ ಅಭಿವೃದ್ಧಿ ಯೋಜನೆಗಳ ಬಗ್ಗೆ ತಿಳಿಸಲು ಎಸಿ ಬಸ್, ಗೈಡ್ ವ್ಯವಸ್ಥೆ ಮಾಡಲಾಗುವುದು. ಬಿಜೆಪಿಗರು ಧೈರ್ಯವಿದ್ದರೆ ತಮ್ಮ ಅಭಿವೃದ್ಧಿಯ ಸಣ್ಣ ಪಟ್ಟಿ ನೀಡಲಿ. ಚರ್ಚೆಗೆ ಸದಾ ಸಿದ್ಧನಿದ್ದು, ವೇದಿಕೆಯನ್ನು ನಿರ್ಮಿಸುತ್ತೇನೆ ಎಂದು ಹೇಳಿದರು.

    ಭೀಮೆ ನಿಯೋಗಕ್ಕೆ ಮನವಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಭೀಮಾ ನದಿಗೆ ಉಜನಿ ಜಲಾಶಯದಿಂದ ನೀರು ಬಿಡುಗಡೆಗೆ ಆಗ್ರಹಿಸಿ ಮಹಾರಾಷ್ಟçಕ್ಕೆ ನಿಯೋಗ ತೆಗೆದುಕೊಂಡು ಹೋಗುವ ಕುರಿತು ಚುನಾವಣೆ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ. ಬಿಜೆಪಿಗರು ಮಹಾ ಸರ್ಕಾರದ ಮೇಲೆ ಒತ್ತಡ ಹೇರಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts