More

    ಚೀನಾ ಸಂಪೂರ್ಣ ಹಿಂದೆಗೆಯುವವರೆಗೂ ಭಾರತ ಸೇನೆ ಹಿಂದೆಗೆಯಲ್ಲ

    ನವದೆಹಲಿ: ಲಡಾಖ್​ನ ಪೂರ್ವಭಾಗದ ವಾಸ್ತವ ಗಡಿರೇಖೆಯ ಬಳಿ ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿ (ಪಿಎಲ್​ಎ) ಯೋಧರು ಹಿಂದೆಗೆಯುತ್ತಿದ್ದಾರೆ. ಇವರ ಸಂಪೂರ್ಣವಾಗಿ ಹಿಂದೆಗೆತವರೆಗೂ ವಿರಮಿಸದಿರಲು ಭಾರತೀಯ ಸೇನಾಪಡೆ ನಿರ್ಧರಿಸಿದೆ.

    ಕ್ಸಿನ್​ಜಿಯಾಂಗ್​ ಮತ್ತು ಟಿಬೆಟ್​ನಲ್ಲಿ ನಿಯೋಜಿಸಿರುವ ಪಿಎಲ್​ಎನ ಪಶ್ಚಿಮ ಕಮಾಂಡ್​ನ 25 ಸಾವಿರ ಯೋಧರು ಟ್ಯಾಂಕ್​ಗಳು ಸೇರಿ ಅಲ್ಲಿ ನಿಯೋಜಿಸಿರುವ ಎಲ್ಲ ಯುದ್ಧೋಪಕರಣಗಳೊಂದಿಗೆ ತೆರಳುವವರೆಗೂ ಚೀನಾದೊಂದಿಗೆ ರಾಜಕೀಯ ಮತ್ತು ರಾಜತಾಂತ್ರಿಕ ಮಟ್ಟದ ಮಾತುಕತೆಗಳನ್ನು ಭಾರತ ಮುಂದುವರಿಸಲಿರುವುದಾಗಿ ಮೂಲಗಳು ತಿಳಿಸಿವೆ.

    ಸೇನೆ ಹಿಂದೆಗೆತದ ಮೊದಲ ಹಂತದ ಭಾಗವಾಗಿ ಇತ್ತೀಚೆಗೆ ಘರ್ಷಣೆ ನಡೆದಿದ್ದ ಸ್ಥಳಗಲ್ಲಿ ಮೀಸಲು ವಲಯಗಳನ್ನು (Buffer Zones) ನಿರ್ಮಿಸಲಾಗುತ್ತಿದೆ. 14 ಕೋರ್​ ಕಮಾಂಡರ್​ ಲೆಫ್ಟಿನೆಂಟ್​ ಜನರಲ್​ ಹರೀಂದರ್​ ಸಿಂಗ್​ ಮತ್ತು ದಕ್ಷಿಣ ಕ್ಸಿನ್​ಜಿಯಾಂಗ್​ ಮಿಲಿಟರಿ ಜಿಲ್ಲೆಯ ಮುಖ್ಯಸ್ಥ ಮೇಜರ್​ ಜನರಲ್​ ಲಿಯೂ ಲಿನ್​ ನಡುವೆ ಜೂ.30ರಂದು ನಡೆದಿದ್ದ ಮಾತುಕತೆಯಲ್ಲಿ ನಿರ್ಧರಿಸಲಾಗಿದ್ದಂತೆ ಸೇನೆ ಹಿಂದೆಗೆತದ ಯೋಜನೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ.

    ಚೀನಾದ 1,597 ಕಿ.ಮೀ. ಗಡಿಭಾಗದಲ್ಲಿ ಪಿಎಲ್​ಎ ಯೋಧರ ಹಿಂದೆಗೆತ ಬೇರೆಯ ವಿಷಯವಾಗಿದೆ. ದಕ್ಷಿಣ ಕ್ಸಿನ್​ಕಿಯಾಂಗ್​ ಕಮಾಂಡರ್​ ಅವರ ಒಪ್ಪಂದದಲ್ಲಿ ಈ ವಿಷಯ ಪ್ರಸ್ತಾಪವಾಗಿಲ್ಲ. ಆದರೆ ಮೇನಲ್ಲಿ ಭಾರತೀಯ ಭಾಗದೊಳಗಿನ ಅತಿಕ್ರಮಣವನ್ನು ಚೀನಾ ಮುಖಂಡರು ತೆರವುಗೊಳಿಸಿದ್ದಾರೆ ಎಂದು ಭಾರತೀಯ ಸೇನಾಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇದನ್ನೂ ಓದಿ: ಒಡೆಯುತ್ತಾ ಪಕ್ಷ, ನೇಪಾಳದಲ್ಲಿ ಉಳಿಯುತ್ತಾ ಕೆ.ಪಿ. ಶರ್ಮ ಓಲಿ ಸರ್ಕಾರ?

    ಭವಿಷ್ಯದಲ್ಲಿ ಮತ್ತಾವುದೇ ತಿಕ್ಕಾಟ ಉಂಟಾಗದಿದ್ದರೆ, ಸೇನೆಯ ಹಿಂದೆಗೆತ ಪ್ರಕ್ರಿಯೆ ಸೆಪ್ಟೆಂಬರ್​ನಿಂದ ಅಕ್ಟೋಬರ್​ವರೆಗೂ ವಿಸ್ತರಿಸುವ ಸಾಧ್ಯತೆ ಇದೆ. ಆದರೂ ಸೇನೆ ಹಿಂದೆಗೆತದ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ ಮತ್ತು ಚೀನಾದ ವಿದೇಶಾಂಗ ಸಚಿವ ವ್ಯಾಂಗ್​ ಯೀ ನಡುವೆ ಭಾನುವಾರ ನಡೆದಿರುವ ಮಾತುಕತೆಯ ಅಂಶಗಳನ್ನು ಆಧರಿಸಿ, ಮಾತುಕತೆಗಳು ಮುಂದುವರಿಯಬೇಕಿದೆ. ಇಲ್ಲವೇ ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವಾಲಯದ ನಡುವಿನ ಮತುಕತೆ ಮತ್ತು ಸಹಕಾರದ ಕಾರ್ಯಸೂಚಿಯನ್ನು ರೂಪಿಸಬೇಕಾಗುತ್ತದೆ ಎನ್ನಲಾಗಿದೆ.

    ಮುಂಚೂಣಿ ನೆಲೆಗಳಿಂದ ಸೇನೆಯನ್ನು ಹಿಂದೆಗೆದಿರುವುದರಿಂದ ಒಟ್ಟಾರೆ ಉದ್ವಿಗ್ನ ಪರಿಸ್ಥಿತಿ ತಣಿದಿದೆ. ಆದರೂ ಆತಂಕ ಸಂಪೂರ್ಣ ದೂರಾಗಿಲ್ಲ. ಎಲ್​ಎಸಿಯ ಉದ್ದಕ್ಕೂ ನಿಯೋಜಿಸಿರುವ ಸೇನೆಯನ್ನು ಹಿಂದೆಗೆಯುವ ಲಕ್ಷಣಗಳು ಕಾಣುತ್ತಿಲ್ಲ. ಕ್ಸಿನ್​ಜಿಯಾಂಗ್​ನ ಹೋಟನ್​ ಮತ್ತು ಕಶ್ಗರ್​ ವಾಯುನೆಲೆಯಲ್ಲಿ ನಿಯೋಜಿಸಲಾಗಿದ್ದ ಹೆಚ್ಚುವರಿ ಯುದ್ಧವಿಮಾನಗಳು ಮತ್ತು ಬಾಂಬರ್​ಗಳ ಸಂಖ್ಯೆಯನ್ನು ಶೇ.30ರಿಂದ 40 ಕಡಿಮೆ ಮಾಡುವ ಭರವಸೆಯನ್ನು ಚೀನಾ ಇನ್ನೂ ಈಡೇರಿಸಿಲ್ಲ ಎಂದು ಹಿರಿಯ ಮಿಲಿಟರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಭಾರತ ಕೂಡ ಪಿಎಲ್​ಗೆ ಸಮನಾಗಿ ಭಾರಿ ಯುದ್ಧೋಪಕರಣಗಳ ಸಹಿತ 30 ಸಾವಿರ ಯೋಧರನ್ನು ಎಲ್​ಎಸಿ ಬಳಿ ನಿಯೋಜಿಸಿದೆ. ಸುಖೋಯಿ-30ಎಂಕೆಐ ಮತ್ತು ಮಿಗ್​-29 ಫೈಟರ್​ಗಳು, ಅಪಾಚೆ ಅಟ್ಯಾಕ್​ ಮತ್ತು ಚಿನೋಕ್​ ಹೆವಿ ಲಿಫ್ಟ್​ ಹೆಲಿಕಾಪ್ಟರ್​ಗಳನ್ನು ನಿಯೋಜಿಸಿತ್ತು. ಮುಂಚೂಣಿ ನೆಲೆಗಳಲ್ಲಿ ಇವುಗಳು 24 ಗಂಟೆಗಳ ಕಾಲ ಕಾರ್ಯಾಚರಣೆ ಮುಂದುವರಿಸಿವೆ.

    ಪಡ್ಡೆ ಹುಡುಗ್ರು ಬ್ಲೂಫಿಲ್ಮ್​ಗೆ ಕಾದು ಕೊನೆಗೆ ಏನಿಲ್ಲ ಎಂಬತಾಯಿತು: ಉಪ್ಪಿ ಫ್ಯಾನ್ಸ್​ ಕಾಲೆಳೆದ ಅನುಪಮಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts