More

    ಇಂಡಿಯಾ ಹೆಸರಿನ ಬದಲು ಭಾರತ: ಸಂವಿಧಾನ ತಿದ್ದುಪಡಿ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ

    ನವದೆಹಲಿ: ದೇಶದ ಹೆಸರನ್ನು ಇಂಗ್ಲಿಷ್‌ನಲ್ಲಿ ‘ಇಂಡಿಯಾ’ ಬದಲು ‘ಭಾರತ’ ಅಥವಾ ‘ಹಿಂದೂಸ್ತಾನ್’ ಎಂದು ಸಂವಿಧಾನದಲ್ಲಿ ಬದಲಿಸುವಂತೆ ಸೂಚಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.

    ‘ಇಂಡಿಯಾ’ ಎಂಬುದು ಬ್ರಿಟಿಷರು ಇಟ್ಟ ಹೆಸರು. ಇದನ್ನು ನಮ್ಮ ಸಂಸ್ಕೃತಿ ಮತ್ತು ಪರಂಪರೆಗೆ ತಕ್ಕಂತೆ ‘ಭಾರತ’ ಅಥವಾ ‘ಹಿಂದೂಸ್ತಾನ’ವೆಂದು ಅಧಿಕೃತಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

    ಇದನ್ನೂ ಓದಿ  ಮೋದಿ ಗೆದ್ದೇ ಗೆಲ್ಲುತ್ತಾರೆಂದು ಭವಿಷ್ಯ ನುಡಿದಿದ್ದ ಖ್ಯಾತ ಜ್ಯೋತಿಷಿ ಇನ್ನಿಲ್ಲ; ಸಾವಿನಲ್ಲೂ ಗೊಂದಲ…!

    ಈ ನಿಟ್ಟಿನಲ್ಲಿ ಸಂವಿಧಾನದ 1ನೇ ವಿಧಿಗೆ ತಿದ್ದುಪಡಿ ತರುವಂತೆ ಸೂಚಿಸಬೇಕು ಎಂದು ದೆಹಲಿ ಮೂಲದ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದಾರೆ.

    ಈ ಅರ್ಜಿಯು ಶುಕ್ರವಾರದ ವಿಚಾರಣಾ ಪಟ್ಟಿಯಲ್ಲಿ ಇತ್ತು. ಆದರೆ, ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಅಲಭ್ಯವಾದ ಕಾರಣ ಪಟ್ಟಿಯಿಂದ ಕೈಬಿಟ್ಟು, ಜೂನ್ 2ಕ್ಕೆ ಮರುದಿನಾಂಕವನ್ನು ನಿಗದಿಗೊಳಿಸಲಾಯಿತು.

    ಹಿಜ್ಬುಲ್ ಉಗ್ರ ಸಂಘಟನೆ ನಾಯಕನ ಮೇಲೆ ಪಾಕಿಗಳಿಂದಲೇ ಹಲ್ಲೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts