ಹಿಜ್ಬುಲ್ ಉಗ್ರ ಸಂಘಟನೆ ನಾಯಕನ ಮೇಲೆ ಪಾಕಿಗಳಿಂದಲೇ ಹಲ್ಲೆ!

ನವದೆಹಲಿ: ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಮೇಲೆ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಮೇ 25ರಂದು ಹಲ್ಲೆ ನಡೆದಿದ್ದು, ಆತ ತೀವ್ರವಾಗಿ ಗಾಯಗೊಂಡಿದ್ದಾನೆ. ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‌ಐ ಈ ದಾಳಿಯ ಯೋಜನೆ ರೂಪಿಸಿತ್ತು ಎಂದು ಹೇಳಲಾಗಿದೆ. ಐಎಸ್‌ಐ ಮತ್ತು ಸಲಾಹುದ್ದೀನ್ ನಡುವೆ ಇತ್ತೀಚಿನ ದಿನಗಳಲ್ಲಿ ಭಿನ್ನಮತ ಉಂಟಾಗಿರುವುದೇ ಹಲ್ಲೆ ನಡೆಸಲು ಕಾರಣ ಎಂದು ಹೇಳಲಾಗಿದೆ. ಸಲಾಹುದ್ದೀನ್‌ನನ್ನು ಕೊಲ್ಲುವುದು ದಾಳಿಯ ಉದ್ದೇಶವಲ್ಲ. ಆದರೆ ಆತನಿಗೆ ಸಂದೇಶ ರವಾನಿಸುವುದು ಉದ್ದೇಶವಾಗಿತ್ತು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪುಲ್ವಾಮಾ ದಾಳಿ … Continue reading ಹಿಜ್ಬುಲ್ ಉಗ್ರ ಸಂಘಟನೆ ನಾಯಕನ ಮೇಲೆ ಪಾಕಿಗಳಿಂದಲೇ ಹಲ್ಲೆ!