More

    ಹಿಜ್ಬುಲ್ ಉಗ್ರ ಸಂಘಟನೆ ನಾಯಕನ ಮೇಲೆ ಪಾಕಿಗಳಿಂದಲೇ ಹಲ್ಲೆ!

    ನವದೆಹಲಿ: ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಮೇಲೆ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಮೇ 25ರಂದು ಹಲ್ಲೆ ನಡೆದಿದ್ದು, ಆತ ತೀವ್ರವಾಗಿ ಗಾಯಗೊಂಡಿದ್ದಾನೆ.

    ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‌ಐ ಈ ದಾಳಿಯ ಯೋಜನೆ ರೂಪಿಸಿತ್ತು ಎಂದು ಹೇಳಲಾಗಿದೆ. ಐಎಸ್‌ಐ ಮತ್ತು ಸಲಾಹುದ್ದೀನ್ ನಡುವೆ ಇತ್ತೀಚಿನ ದಿನಗಳಲ್ಲಿ ಭಿನ್ನಮತ ಉಂಟಾಗಿರುವುದೇ ಹಲ್ಲೆ ನಡೆಸಲು ಕಾರಣ ಎಂದು ಹೇಳಲಾಗಿದೆ. ಸಲಾಹುದ್ದೀನ್‌ನನ್ನು ಕೊಲ್ಲುವುದು ದಾಳಿಯ ಉದ್ದೇಶವಲ್ಲ. ಆದರೆ ಆತನಿಗೆ ಸಂದೇಶ ರವಾನಿಸುವುದು ಉದ್ದೇಶವಾಗಿತ್ತು ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಪುಲ್ವಾಮಾ ದಾಳಿ ರೀತಿಯ ಉಗ್ರರ ದಾಳಿ ವಿಫಲಗೊಳಿಸಿದ ಭದ್ರತಾ ಪಡೆ

    ಹಲ್ಲೆ ನಡೆದ ಹಿನ್ನೆಲೆಯಲ್ಲಿ ಹಿಜ್ಬುಲ್ ನಾಯಕನನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ. ಸಲಾಹುದ್ದಿನ್ ಭಯೋತ್ಪಾದಕ ಗುಂಪುಗಳ ವೇದಿಕೆಯಾದ ಸಂಯುಕ್ತ ಜಿಹಾದ್ ಮಂಡಳಿಯ ನಾಯಕನೂ ಆಗಿದ್ದಾನೆ. ಹಿಜ್ಬುಲ್‌ಗೆ ಬೆಂಬಲ ಕಡಿಮೆಯಾಗಿರುವುದಕ್ಕೆ ಆತ ಐಎಸ್‌ಐ ಬಗ್ಗೆ ಮುನಿಸಿಕೊಂಡಿದ್ದ ಎನ್ನಲಾಗಿದೆ.

    ಹಿಜ್ಬುಲ್ ಉನ್ನತ ಕಮಾಂಡರ್ ರಿಯಾಜ್ ನಾಯ್ಕೂನನ್ನು ದಕ್ಷಿಣ ಕಾಶ್ಮೀರದಲ್ಲಿ ಇತ್ತೀಚೆಗೆ ಭಾರತೀಯ ಪಡೆ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ ನಂತರ ಸಲಾಹುದ್ದೀನ್ ಸಭೆಯೊಂದರಲ್ಲಿ ಐಎಸ್‌ಐನ್ನು ತೀವ್ರವಾಗಿ ಟೀಕಿಸಿದ್ದ.

    ಇದನ್ನೂ ಓದಿ: ‘ಪಾತಾಳ ಲೋಕ’ ವೆಬ್‌ಸಿರೀಸ್ ನಿಷೇಧಿಸಲು ಹೆಚ್ಚಿದ ಒತ್ತಡ

    ಜೀವನಾಂಶಕ್ಕಾಗಿ ನವಾಜುದ್ದೀನ್​ಗೆ ಪತ್ನಿ ಆಲಿಯಾ ಬೇಡಿಕೆ ಇಟ್ಟಿದ್ದು ಇಷ್ಟೊಂದು ಮೊತ್ತವಾ!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts