More

    ‘ಪಾತಾಳ ಲೋಕ’ ವೆಬ್‌ಸಿರೀಸ್ ನಿಷೇಧಿಸಲು ಹೆಚ್ಚಿದ ಒತ್ತಡ

    ಉಡುಪಿ: ಅನುಷ್ಕಾ ಶರ್ಮಾ ಪ್ರೊಡಕ್ಷನ್ ಮೂಲಕ ನಿರ್ಮಾಣವಾಗಿ ಪ್ರದರ್ಶನಗೊಳ್ಳುತ್ತಿರುವ ‘ಪಾತಾಳ ಲೋಕ’ ವೆಬ್‌ಸಿರೀಸ್ ನಿಷೇಧಕ್ಕೆ ದಿನವೂ ವಿವಿಧ ಸಂಘಟನೆಗಳಿಂದ ಒತ್ತಡ ಹೆಚ್ಚುತ್ತಿದೆ.

    ಇದರಲ್ಲಿ ಸಂಪೂರ್ಣವಾಗಿ ಹಿಂದು ವಿರೋಧಿ ನಿಲುವಿನ ಅತ್ಯಂತ ಆಕ್ಷೇಪಾರ್ಹ ದೃಶ್ಯಗಳನ್ನು ತೋರಿಸಲಾಗಿದೆ. ಕೂಡಲೇ ಈ ವೆಬ್‌ಸಿರೀಸ್ ನಿಷೇಧಿಸಬೇಕು ಎಂದು ಹಿಂದು ಜನಜಾಗೃತಿ ಸಮಿತಿ ಆಗ್ರಹಿಸಿದೆ.

    ಇದನ್ನೂ ಓದಿ  ಜೀವನಾಂಶಕ್ಕಾಗಿ ನವಾಜುದ್ದೀನ್​ಗೆ ಪತ್ನಿ ಆಲಿಯಾ ಬೇಡಿಕೆ ಇಟ್ಟಿದ್ದು ಇಷ್ಟೊಂದು ಮೊತ್ತವಾ!?

    ಹೆಣ್ಣು ನಾಯಿಗೆ ‘ಸಾವಿತ್ರಿ’ ಎಂದು ಹೆಸರಿಡಲಾಗಿದೆ. ದೇವಸ್ಥಾನದಲ್ಲಿ ಅರ್ಚಕರು ಮಾಂಸ ಬೇಯಿಸಿ ತಿನ್ನುವಂತೆ ತೋರಿಸಲಾಗಿದೆ. ಕೇಸರಿ ಬಟ್ಟೆಗಳನ್ನು ತೊಟ್ಟ ಜನರು ‘ಜೈ ಶ್ರೀರಾಮ್’ ಹೇಳಿ ಗೂಂಡಾಗಿರಿ ಮಾಡುವಂತೆ ಇದರಲ್ಲಿ ತೋರಿಸಲಾಗಿದೆ ಎಂದು ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.

    ಸಾಧು-ಸಂತರನ್ನು ಅವಾಚ್ಯವಾಗಿ ನಿಂದಿಸುವ ದೃಶ್ಯವಿದೆ. ವ್ಯಕ್ತಿಯೊಬ್ಬ ಜನಿವಾರ ಹಾಕಿ ಬಲಾತ್ಕಾರ ಮಾಡುವಂತೆ ತೋರಿಸಲಾಗಿದೆ. ಮುಸಲ್ಮಾನ ಮಹಿಳೆ ಹಿಂದು ಮಹಿಳೆಗೆ ನೀರು ನೀಡುತ್ತಾಳೆ. ಹಿಂದು ಮಹಿಳೆ ನೀರು ಕುಡಿಯಲು ಒಲ್ಲೆ ಎನ್ನುತ್ತಾಳೆ. ಹೀಗೆ ಅನೇಕ ರೀತಿಯಲ್ಲಿ ಸಮಾಜದಲ್ಲಿ ಕೋಮುದ್ವೇಷ ಹಬ್ಬಿಸುವ ದೃಶ್ಯಗಳಿವೆ. ಕೇಂದ್ರ ಸರ್ಕಾರ ಇಂಥ ವೆಬ್‌ಸಿರೀಸ್‌ಗಳ ಮೇಲೆ ನಿಯಂತ್ರಣ ಹೇರಲು ಕಠಿಣ ಕಾನೂನು ರೂಪಿಸಬೇಕು ಎಂದು ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ್ ಶಿಂಧೆ ಆಗ್ರಹಿಸಿದ್ದಾರೆ.

    ದೇಶ-ಭಾಷೆ ಗೊತ್ತಿಲ್ಲ, ಕೈಲಿ ಹಣವಿಲ್ಲ… ಕರುಳು ಹಿಂಡುವಂತಿದೆ ಈ ವಿದೇಶಿ ಯುವತಿಯ ಸಂಕಷ್ಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts