More

    ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿತ; ಜು. 12ರವರೆಗೂ ವಾಹನ ಸಂಚಾರ ಸ್ಥಗಿತ..

    ಶಿವಮೊಗ್ಗ: ದೇಶದಲ್ಲಿ ಹಲವೆಡೆ ಮಾತ್ರವಲ್ಲದೆ ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಬಹಳಷ್ಟು ಕಡೆ ಗುಡ್ಡಕುಸಿತ, ಪ್ರವಾಹ, ಸೇತುವೆ ಮುಳುಗಡೆ, ರಸ್ತೆ ಸಂಪರ್ಕ ಕಡಿತದಂಥ ಸನ್ನಿವೇಶಗಳು ಉಂಟಾಗಿವೆ. ಅದೇ ರೀತಿ ಆಗುಂಬೆ ಘಾಟಿಯಲ್ಲೂ ಗುಡ್ಡ ಕುಸಿತ ಉಂಟಾಗಿದ್ದು, ಸಂಚಾರ ಸ್ಥಗಿತಗೊಳಿಸಲಾಗಿದೆ.

    ಕಳೆದ ಕೆಲವು ದಿನಗಳ ಭಾರಿ ಮಳೆಯಿಂದಾಗಿ ಆಗುಂಬೆ ಘಾಟಿಯ ಹನ್ನೊಂದನೇ ತಿರುವಿನಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಮೊದಲೇ ಕಿರಿದಾಗಿರುವ ರಸ್ತೆಯಲ್ಲಿ ಗುಡ್ಡ ಕುಸಿದಿರುವುದರಿಂದ ಈ ಮಾರ್ಗದ ಮೂಲಕ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

    ಇದನ್ನೂ ಓದಿ: ಮಾಟಕ್ಕಾಗಿ ಮಹಿಳೆಯ ಬಲಿ ಕೊಟ್ಟವನನ್ನು ಮರಕ್ಕೆ ಕಟ್ಟಿ ಜೀವಂತ ಸುಟ್ಟು ಕೊಂದು ಹೂತು ಹಾಕಿದ ಗ್ರಾಮಸ್ಥರು!

    ಆಗುಂಬೆ ಘಾಟಿಯಲ್ಲಿ ಜುಲೈ 12ರ ಬೆಳಗ್ಗೆ 8 ಗಂಟೆ ಎಲ್ಲ ಥರದ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಹಾಗೆಯೇ ಜುಲೈ 12ರಿಂದ 30ರವರೆಗೆ ಆಗುಂಬೆ ಘಾಟಿಯಲ್ಲಿ ಲಘು ವಾಹನಗಳ ಸಂಚಾರಕ್ಕಷ್ಟೇ ಅವಕಾಶ ಇರಲಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.

    ಅಲ್ಲದೆ ಭಾರಿ ವಾಹನಗಳಿಗೆ ಈ ಕೆಳಗಿನ ಬದಲಿ ಮಾರ್ಗಗಳನ್ನು ಬಳಸುವಂತೆ ಸೂಚಿಸಲಾಗಿದೆ.

    • ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ, ಕಾರ್ಕಳ, ಮಂಗಳೂರು.
    • ತೀರ್ಥಹಳ್ಳಿ, ಆಗುಂಬೆ, ಶೃಂಗೇರಿ, ಕಾರ್ಕಳ, ಮಂಗಳೂರು
    • ತೀರ್ಥಹಳ್ಳಿ, ಮಾಸ್ತಿಕಟ್ಟೆ, ಕುಂದಾಪುರ

    ಫುಡ್​ ಡೆಲಿವರಿ ಬಾಯ್ ಆಗಿ ಮನೆ ಮನೆಗೂ ತೆರಳಿದ ನಾಯಕ ನಟ!

    ಕನ್ಹಯ್ಯ ಲಾಲ್​ ಕೊಲೆ ಪ್ರಕರಣ; ಇನ್ನೊಬ್ಬ ಆರೋಪಿಯ ಬಂಧನ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts