More

    ಡಬ್ಲ್ಯುಎಚ್​ಒ ಲೀಡ್​ ರೋಲ್​ ಮುಂದಿನ ತಿಂಗಳು ಭಾರತಕ್ಕೆ: COVID19 ಸೋಂಕಿನ ಅವಧಿಯಲ್ಲಿ ಮಹತ್ವದ ಹೊಣೆಗಾರಿಕೆ

    ನವದೆಹಲಿ: ಜಗತ್ತು ಕರೊನಾ COVID19 ಸೋಂಕಿನ ಕಾರಣಕ್ಕೆ ತಲ್ಲಣಗೊಂಡಿರುವ ಈ ಸಂಕಷ್ಟಮಯ ಸನ್ನಿವೇಶದಲ್ಲಿಯೇ ವಿಶ್ವ ಆರೋಗ್ಯ ಸಂಸ್ಥೆಯ ಎಕ್ಸಿಕ್ಯೂಟಿವ್ ಬೋರ್ಡ್​​ನ ಚೇರ್ಮನ್​ಷಿಪ್ ಮುಂದಿನ ತಿಂಗಳು ಭಾರತಕ್ಕೆ ಸಿಗಲಿದೆ. ಸದ್ಯ ಈ ಪಾತ್ರವನ್ನು ಜಪಾನ್ ನಿವರ್ಹಿಸುತ್ತಿದೆ.

    ಈ ಚೇರ್​ಪರ್ಸನ್ ಸ್ಥಾನಕ್ಕೆ ಭಾರತದ ಹೆಸರನ್ನು ಆಗ್ನೇಯ ಏಷ್ಯಾ ರಾಷ್ಟ್ರಗಳು ಕಳೆದ ವರ್ಷವೇ ಒಮ್ಮತದಿಂದ ನಾಮನಿರ್ದೇಶನ ಮಾಡಿದ್ದವು. ಎಕ್ಸಿಕ್ಯೂಟಿವ್​ ಬೋರ್ಡ್​ಗೂ ಮೂರು ವರ್ಷದ ಅವಧಿಗೂ ಭಾರತದ ಹೆಸರನ್ನು ನಾಮನಿರ್ದೇಶನ ಮಾಡಿದ್ದವು. ಇದರಂತೆ, ಮುಂದಿನ ತಿಂಗಳು ಹದಿನೆಂಟರಂದು ಡಬ್ಲ್ಯುಎಚ್​ಒ ಕೇಂದ್ರ ಕಚೇರಿಯಲ್ಲಿ ಆರಂಭವಾಗಲಿರುವ ವಾರ್ಷಿಕ ಸಾಮಾನ್ಯಸಭೆಯಲ್ಲಿ ಎಕ್ಸಿಕ್ಯೂಟಿವ್ ಬೋರ್ಡ್​ನ ಚೇರ್​ಮನ್​ಷಿಪ್​ಗೆ ಭಾರತದ ಪ್ರತಿನಿಧಿಯ ನಾಮನಿರ್ದೇಶನವಾಗಲಿದೆ. ಈ ಸಾಮಾನ್ಯ ಸಭೆ ಡೈರೆಕ್ಟರ್ ಜನರಲ್ ಟೆಡ್ರೋಸ್ ಅಧನೋಮ್ ಘೆಬ್ರೆಯೆಸಸ್​ ಅವರ ದಿಕ್ಸೂಚಿ ಭಾಷಣದೊಂದಿಗೆ ಆರಂಭವಾಗುತ್ತದೆ. ಈ ಭಾಷಣ ಬಹುತೇಕ ವುಹಾನ್ ಕರೊನಾ ವೈರಸ್​ ಸೋಂಕು ತಡೆ ವಿಚಾರದ ಕುರಿತೇ ಇರಲಿದೆ. ಇದೇ ವೇಳೆ ಔಪಚಾರಿಕವಾಗಿ ಖಾಲಿ ಇರುವ ಎಕ್ಸಿಕ್ಯೂಟಿವ್ ಬೋರ್ಡ್​ ಸದಸ್ಯರ ನೇಮಕವೂ ಆಗಲಿದೆ. ಈ ಹಿಂದಿನ ಕಾರ್ಯಸೂಚಿ ಪ್ರಕಾರ ಸಾಮಾನ್ಯ ಸಭೆಯಲ್ಲಿ 60 ವಿಷಯಗಳು ಚರ್ಚೆ ಆಗಬೇಕಾಗಿತ್ತು. ಆದರೆ, ಈ ಸಲದ ಸಭೆಯಲ್ಲಿ ಕೇವಲ ಮೂರು ಕಾರ್ಯಸೂಚಿಯಷ್ಟೇ ಇದೆ.

    ಎಕ್ಸಿಕ್ಯೂಟಿವ್ ಬೋರ್ಡ್​ನಲ್ಲಿ 34 ಸದಸ್ಯರಿದ್ದು, ಭಾರತದ ಪ್ರತಿನಿಧಿ ಚೇರ್​​ಪರ್ಸನ್ ಆಗಿದ್ದುಕೊಂಡು ಡೈರೆಕ್ಟರ್ ಜನರಲ್ ಟೆಡ್ರೋಸ್​ ಅಧನೋಂ ಜತೆಗೆ ನಿಕಟವಾಗಿ ಕೆಲಸ ಮಾಡಬೇಕಾಗುತ್ತದೆ. ಅಲ್ಲದೆ, ಡೈರೆಕ್ಟರ್ ಜನರಲ್ ಯಾವುದೇ ತೀರ್ಮಾನ ತೆಗೆದುಕೊಳ್ಳಬೇಕಾದರೂ ಎಕ್ಸಿಕ್ಯೂಟಿವ್ ಬೋರ್ಡ್​ ಚೇರ್​ಪರ್ಸನ್​ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಬರುವುದಿಲ್ಲ.

    ಇದೇ ಅವಧಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಪ್ರೋಗ್ರಾಂ ಬಜೆಟ್​ ಮತ್ತು ಅಡ್ಮಿನಿಸ್ಟ್ರೇಷನ್​ ಕಮಿಟಿಯಲ್ಲೂ ಭಾರತದ ಪ್ರತಿನಿಧಿ ಇಂಡೋನೇಷ್ಯಾದ ಪ್ರತಿನಿಧಿಯ ಸ್ಥಾನವನ್ನು ತುಂಬಲಿದ್ದಾರೆ. ಈ ಎಲ್ಲ ಬೆಳವಣಿಗೆ ನಡುವೆ ಡಬ್ಲ್ಯುಎಚ್​ಒ ಅಧಿಕಾರಿಯೊಬ್ಬರು ಭಾರತದ ನಡೆಯನ್ನು ಸಮರ್ಥಿಸಿಕೊಂಡಿದ್ದು, ಡಬ್ಲ್ಯುಎಚ್​ಒ ಸುಧಾರಣೆ ಮತ್ತು ಕರೊನಾ ಸೋಂಕು ಹೋರಾಟದಲ್ಲಿ ಭಾರತ ತೋರಿಸಿರುವ ಪಾರದರ್ಶಕತೆ ಮತ್ತು ಬದ್ಧತೆ ಮಾದರಿಯಾಗಿರುವಂಥದ್ದು ಎಂದು ಹೇಳಿಕೊಂಡಿದ್ದಾರೆ.

    ಇನ್ನು ಎಕ್ಸಿಕ್ಯೂಟಿವ್ ಬೋರ್ಡ್​ನಲ್ಲಿ ಡೈರೆಕ್ಟರ್ ಜನರಲ್​ ಟೆಡ್ರೋಸ್​ ಅಧನೋಂ ಅವರ ಐದು ವರ್ಷದ ಅವಧಿ 2021ರ ಮೇ ತಿಂಗಳಲ್ಲಿ ಕೊನೆಗೊಳ್ಳಲಿದೆ. ಅದರ ನಂತರ ಆ ಸ್ಥಾನವನ್ನೂ ಭಾರತ ತುಂಬಲಿದೆ. 34 ಸದಸ್ಯರ ಎಕ್ಸಿಕ್ಯೂಟಿವ್ ಬೋರ್ಡ್​ ಇದಕ್ಕಾಗಿ ಅಭ್ಯರ್ಥಿಗಳ ಸಂದರ್ಶನ ನಡೆಸಬೇಕು. ನಂತರ ಹೆಲ್ತ್​ ಅಸೆಂಬ್ಲಿಯಲ್ಲಿ ಮತಕ್ಕೆ ಹಾಕಿ ಆಯ್ಕೆ ಮಾಡಲಾಗುತ್ತದೆ. (ಏಜೆನ್ಸೀಸ್)

    COVID19 ಸೋಂಕು ತಡೆ ಹೋರಾಟಕ್ಕೆ ವಿವಿಧ ರಾಜ್ಯಗಳು ಖರ್ಚುಮಾಡುತ್ತಿರುವ ಮೊತ್ತವಾದರೂ ಎಷ್ಟು?

    ಲಾಕ್​ಡೌನ್ ಅವಧಿಯಲ್ಲಿ ನಿಗೂಢತೆ ಸೃಷ್ಟಿಸಿದ ದಂಪತಿ: ಇದು ಅವರ ಬೆಡ್​ ರೂಮ್​ ರಹಸ್ಯ!

    ಆ 22ರ ಯುವತಿ ಕೆಮ್ಮುತ್ತಲೇ ಇದ್ಳು- ಆಸ್ಪತ್ರೆಗೆ ದಾಖಲಾದರೆ ಕೆಮ್ಮಿನ ಇತಿಹಾಸ ಕೇಳಿ, ಕಾರಣ ನೋಡಿ ಅಲ್ಲಿದ್ದವರಿಗೆಲ್ಲ ಶಾಕ್ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts