More

    ರೂಪಾಂತರಿಯಿಂದ ಸಾವಿಲ್ಲ ಎಂಬುದರ ನಡುವೆಯೇ ಆತಂಕಕಾರಿ ಸುದ್ದಿ; ಇದು ದೇಶದಲ್ಲಿ ಒಮಿಕ್ರಾನ್ ಸಂಬಂಧಿತ ಮೊದಲ ಮರಣ!

    ನವದೆಹಲಿ: ಒಮಿಕ್ರಾನ್​ ಅಪಾಯಕಾರಿಯಲ್ಲ, ಅದು ವೇಗವಾಗಿ ಹರಡಿದರೂ ಮಾರಣಾಂತಿಕವಲ್ಲ. ಅಷ್ಟಕ್ಕೂ ಒಮಿಕ್ರಾನ್​ನಿಂದಲೇ ಡೆಲ್ಟಾಗೆ ಹೊಡೆತ ಬೀಳಲಿದೆ. ಒಮಿಕ್ರಾನ್​ನಿಂದಲೇ ಈ ಸಾಂಕ್ರಾಮಿಕ ಪಿಡುಗು ಕೊನೆಯಾಗಲಿದೆ ಎಂಬ ಸಮಾಧಾನಕಾರಿ ಸಂಗತಿಗಳ ನಡುವೆಯೇ ಒಂದು ಆತಂಕಕಾರಿ ಸುದ್ದಿ ಹೊರಬಿದ್ದಿದೆ.

    ಅದೇನೆಂದರೆ, ಭಾರತದಲ್ಲಿ ಪ್ರಪ್ರಥಮ ಒಮಿಕ್ರಾನ್ ಪ್ರಕರಣ ವರದಿಯಾದ ಒಂದು ತಿಂಗಳ ಬಳಿಕ ಭಾರತದಲ್ಲಿ ಒಮಿಕ್ರಾನ್ ಸಂಬಂಧಿತ ಪ್ರಪ್ರಥಮ ಸಾವು ಕೂಡ ವರದಿಯಾಗಿದೆ. ಕಳೆದ ಡಿ. 2ರಂದು ಭಾರತದ ಪ್ರಪ್ರಥಮ ಒಮಿಕ್ರಾನ್ ಪ್ರಕರಣ ಬೆಂಗಳೂರಿನಲ್ಲಿ ವರದಿಯಾಗಿತ್ತು. ಇದೀಗ ಭಾರತದಲ್ಲಿ ಒಮಿಕ್ರಾನ್ ಸಂಬಂಧಿತ ಪ್ರಪ್ರಥಮ ಸಾವು ರಾಜಸ್ಥಾನದಲ್ಲಿ ಸಂಭವಿಸಿದೆ.

    ಇದನ್ನೂ ಓದಿ: ಎಚ್ಚರ.. ಎಚ್ಚರ.. ಹೊರಗೆಲ್ಲೂ ಹೋಗದವರಿಗೂ, ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡವರಿಗೂ ಬಂದಿದೆ ಒಮಿಕ್ರಾನ್​!

    ಒಂದು ತಿಂಗಳ ಬಳಿಕ ಭಾರತ ಮತ್ತೊಂದು ಪ್ರಥಮಕ್ಕೆ ಸಾಕ್ಷಿಯಾಗಿದೆ. ಆದರೆ ಒಮಿಕ್ರಾನ್​ನಿಂದ ಮೃತಪಟ್ಟಿದ್ದಾನೆ ಅಥವಾ ಮೃತಪಟ್ಟಿದ್ದಾಳೆ ಎನ್ನಲಾದ ವ್ಯಕ್ತಿಯ ವಿವರ ಇನ್ನೂ ಬಹಿರಂಗಗೊಂಡಿಲ್ಲ. ಸಾವು ಸಂಭವಿಸಿದ್ದು ಎಲ್ಲಿ, ಸತ್ತಿದ್ದು ಯಾರು ಎಂಬ ಬಗ್ಗೆ ಖಚಿತವಾಗಿ ಹೇಳದಿದ್ದರೂ ಒಮಿಕ್ರಾನ್​ನಿಂದಾಗಿ ಸಾವಿಗೀಡಾಗಿದ್ದಾರೆ ಎಂಬುದನ್ನು ಕೇಂದ್ರ ಸರ್ಕಾರದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಭಾರತಕ್ಕೆ ಮೊದಲ ಒಮಿಕ್ರಾನ್​ ತಂದಿಟ್ಟವ ಈಗ ದೇಶದಲ್ಲೇ ಇಲ್ಲ, ಅಸಲಿಗೆ ಆತ ಭಾರತೀಯನೇ ಅಲ್ಲ?: ಬೆಂಗ್ಳೂರಿಗೆ ಸುಮ್ನೆ ಕಳಂಕ!

    ಸದ್ಯ ಭಾರತದಲ್ಲಿ 2,135 ಮಂದಿಯಲ್ಲಿ ಒಮಿಕ್ರಾನ್ ದೃಢಪಟ್ಟಿದ್ದು, ಆ ಪೈಕಿ 828 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಇದುವರೆಗೆ 24 ರಾಜ್ಯಗಳಲ್ಲಿ ಒಮಿಕ್ರಾನ್ ಪ್ರಕರಣ ಕಂಡುಬಂದಿದೆ. ಆ ಪೈಕಿ ಮಹಾರಾಷ್ಟ್ರ ಹಾಗೂ ದೆಹಲಿ ಒಮಿಕ್ರಾನ್​ನಿಂದ ವಿಪರೀತ ಬಾಧಿಸಲ್ಪಟ್ಟಿದೆ.

    ಜ. 31ರವರೆಗೂ ಶಾಲೆಗಳಿಗೆ ರಜೆ; 1ರಿಂದ 9ರ ವರೆಗಿನ ತರಗತಿಗಳಿಗಷ್ಟೇ ಅನ್ವಯ: ಬಿಎಂಸಿ ಘೋಷಣೆ

    ‘ಒಂದು ವರ್ಷದ ಅಂತರ’ದಲ್ಲಿ ಅವಳಿ ಮಕ್ಕಳ ಜನನ!; 20 ಲಕ್ಷ ಹೆರಿಗೆಗಳಿಗೊಮ್ಮೆ ಹೀಗಾಗೋ ಸಾಧ್ಯತೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts