More

    ಭಾರತ-ಪಾಕ್​​ ವಿಶ್ವಕಪ್ ಕ್ರಿಕೆಟ್​: ಹ್ಯಾಟ್ರಿಕ್ ವಿಜಯ ಯಾರಿಗೆ?!

    ನವದೆಹಲಿ: ಏಕದಿನ ವಿಶ್ವಕಪ್​ ಕ್ರಿಕೆಟ್​ ಪಂದ್ಯಾವಳಿಯ ರೋಚಕ ಪಂದ್ಯ ನಾಳೆ ಭಾರತ ಪಾಕಿಸ್ತಾನ ಮಧ್ಯೆ ನಡೆಯಲಿದ್ದು, ಹ್ಯಾಟ್ರಿಕ್ ವಿಜಯ ಯಾರ ಪಾಲಿಗೆ ಎಂಬ ಕುತೂಹಲ ಕೆರಳಿದೆ. ಏಕೆಂದರೆ ನಾಳಿನ ಪಂದ್ಯದಲ್ಲಿ ಯಾರು ಗೆದ್ದರೂ ಅದು ಅವರ ಪಾಲಿಗೆ ಹ್ಯಾಟ್ರಿಕ್ ವಿಜಯವಾಗಿರಲಿದೆ.

    ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಾಳಿನ ಭಾರತ-ಪಾಕ್ ಏಕದಿನ ವಿಶ್ವಕಪ್ ಕ್ರಿಕೆಟ್ ನಡೆಯಲಿರುವುದು ಇನ್ನೊಂದು ವಿಶೇಷವಾಗಿದ್ದು, ಈಗಾಗಲೇ ಕ್ರಿಕೆಟ್​ ಪ್ರಿಯರ ಕುತೂಹಲ ತೀವ್ರಗೊಂಡಿದೆ.

    ಈ ವಿಶ್ವಕಪ್ ಕ್ರಿಕೆಟ್​ ಪಂದ್ಯಾವಳಿಯಲ್ಲಿ ಭಾರತ ಈಗಾಗಲೇ ಎರಡು ಪಂದ್ಯಗಳನ್ನು ಆಡಿದ್ದು ಎರಡರಲ್ಲೂ ಗೆದ್ದಿದೆ, ಪಾಕಿಸ್ತಾನ ಕೂಡ ಎರಡು ಪಂದ್ಯಗಳನ್ನಾಡಿದ್ದು, ಎರಡೂ ಮ್ಯಾಚ್​​ಗಳಲ್ಲಿ ಗೆದ್ದಿದೆ. ಹೀಗಾಗಿ ಎರಡೂ ತಂಡಗಳೂ ಈಗಾಗಲೇ ಎರಡು ವಿಜಯದ ಉತ್ಸಾಹದಿಂದ ನಾಳಿನ ಪಂದ್ಯವನ್ನು ಎದುರಿಸುತ್ತಿದ್ದು, ನಾಳೆ ಯಾರು ಗೆದ್ದರೂ ಅದು ಅವರ ಹ್ಯಾಟ್ರಿಕ್ ಗೆಲುವಾಗಿರಲಿದೆ.

    ಇದನ್ನೂ ಓದಿ: ಹಮಾಸ್ ದಾಳಿ: ಇದು ಬರ್ಬರ ಕ್ರೌರ್ಯದ ಅಬ್ಬರ; ದುರ್ಬಲ ಹೃದಯದವರು ಈ ಲಿಂಕ್ ತೆರೆಯಬೇಡಿ!

    ಏಕದಿನ ಪಂದ್ಯಗಳಲ್ಲಿ ಭಾರತ-ಪಾಕ್ ಇದುವರೆಗೆ 134 ಪಂದ್ಯಗಳನ್ನು ಆಡಿದ್ದು, ಆ ಪೈಕಿ 56ರಲ್ಲಿ ಭಾರತ, 73ರಲ್ಲಿ ಪಾಕ್ ಗೆದ್ದಿದೆ. ಐದು ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಇರಲಿಲ್ಲ.ಆದರೆ ಕಳೆದ 20 ವರ್ಷಗಳ ಅಂಕಿ-ಅಂಶಗಳ ಪ್ರಕಾರ ಭಾರತ-ಪಾಕ್ ನಡುವಿನ ಏಕದಿನ ಪಂದ್ಯಗಳಲ್ಲಿ ಭಾರತ 27 ಪಂದ್ಯಗಳಲ್ಲಿ ಗೆದ್ದಿದ್ದರೆ, ಪಾಕ್ 21ರಲ್ಲಷ್ಟೇ ಗೆಲುವು ಕಂಡಿದೆ.

    ಇನ್ನು ಇದುವರೆಗೆ ಭಾರತ ಪಾಕ್​ ಏಳು ವಿಶ್ವಕಪ್ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಏಳರಲ್ಲೂ ಪಾಕ್​ ವಿರುದ್ಧ ಭಾರತವೇ ಜಯ ಗಳಿಸಿದೆ. ಹೀಗಾಗಿ ನಾಳಿನ ಭಾರತ-ಪಾಕ್ ಹಣಾಹಣಿಯಲ್ಲೇ ಹ್ಯಾಟ್ರಿಕ್ ಗೆಲುವು ಭಾರತದ್ದೇ ಎನ್ನಲಾಗುತ್ತಿದ್ದು, ಅಭಿಮಾನಿಗಳು ಆಟಕ್ಕೂ ಮೊದಲೇ ಭಾರತ ಗೆದ್ದಂತೆ ಸ್ಕೋರ್​​ ಪಟ್ಟಿ ತಯಾರಿಸಿ ಆತ್ಮವಿಶ್ವಾಸ ತೋರಲಾರಂಭಿಸಿದ್ದಾರೆ.

    ಯಾವುದಕ್ಕೂ ನಾಳೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದಾ?; ವ್ಯಕ್ತಿಯೊಬ್ಬರಿಂದ ಆತಂಕಕಾರಿ ಪೋಸ್ಟ್​!

    ವಿಶ್ವಕಪ್​ನಲ್ಲಿ ಪಾಕಿಸ್ತಾನ ಎದುರು ಭಾರತ ಅಜೇಯ; ಹೀಗಿದ್ದವು ಹಿಂದಿನ 7 ಮುಖಾಮುಖಿಗಳು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts