More

    ಹಡಪದ ಸಮಾಜದ ಸೇವೆ ಶ್ಲಾಘನೀಯ

    ಇಂಡಿ: ಹಡಪದ ಸಮಾಜದ ಜನಸಂಖ್ಯೆ ಕಡಿಮೆ ಇದ್ದರೂ ಅವರು ಮಾಡುವ ಕಾರ್ಯವನ್ನು ಸಮಾಜ ಬಹಳಷ್ಟು ಮೆಚ್ಚುವಂತಹದ್ದು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

    ಶನಿವಾರ ಪಟ್ಟಣದ ಹಡಪದ ಅಪ್ಪಣ್ಣ ಶಾಲೆ ವಾರ್ಷಿಕೋತ್ಸವ ಮತ್ತು ಬೀಳ್ಕೊಡುವ ಸಮಾರಂಭದಲ್ಲಿ ಅವರು ಮಾತನಾಡಿದರು.

    ಹಡಪದ ಅಪ್ಪಣ್ಣ ಸಮಾಜ ಬಾಂಧವರು ಸದಾ ಶ್ರಮಿಕ ಜೀವಿಗಳು. ಶ್ರಮಪಟ್ಟು ತಮ್ಮ ಕಾರ್ಯಗಳನ್ನು ಮಾಡುತ್ತಾರೆ. ಅಲ್ಲದೆ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಲು ಸಹಕಾರ ಸಂಘ ಮತ್ತು ಮಕ್ಕಳಿಗೆ ಶಿಕ್ಷಣ ನೀಡಲು ಶೈಕ್ಷಣಿಕ ಕೇಂದ್ರಗಳನ್ನು ಸ್ಥಾಪಿಸಿ ಕೆಲಸ ಮಾಡುತ್ತಿದ್ದಾರೆ. ಸಮಾಜ ಸಣ್ಣದಾದರೂ ಅವರೆಲ್ಲರೂ ಒಗ್ಗಟ್ಟಾಗಿ ತಮ್ಮ ಶಕ್ತಿ ಪ್ರದರ್ಶನ ಮಾಡಿ ಸಮಾಜದ ಅಭಿವೃದ್ಧಿ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

    ಸಿದ್ಧಾರೂಢ ಮಠದ ಡಾ.ಸ್ವರೂಪಾನಂದ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಶಿಕ್ಷಣದಿಂದ ಮಾತ್ರ ಸಮಾಜ ಹಾಗೂ ಈ ದೇಶ ಮುಂದೆ ಬರಲು ಸಾಧ್ಯ. ಈ ನಿಟ್ಟಿನಲಿ ಸಮಾಜಬಾಂಧವರು ಹಡಪದ ಅಪ್ಪಣ್ಣನವರ ಹೆಸರಿನಲ್ಲಿ ಶೈಕ್ಷಣಿಕ ಕೇಂದ್ರ ತೆರೆದು ನೂರಾರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವ ಅಭಿನಂದನೀಯ ಎಂದರು.

    ತಾಪಂ ಉಪಾಧ್ಯಕ್ಷ ಬ್ಯಾಳಿ, ಅವಿನಾಶ ಬಗಲಿ, ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷ ನಟರಾಜ ಗವಳಿ, ಉಪಾಧ್ಯಕ್ಷ ಸಿದ್ದು ನಾವಿ, ಅಶೋಕ ನಾವಿ, ಸಾಯಬಣ್ಣ ನಾವಿ, ಶಿವಾನಂದ ನಾವಿ, ಸಂತೋಷ ಗವಳಿ, ಸಿದರಾಯ ಅಪ್ತಾಗಿರಿ, ರಾಜು ನಾವಿ, ಪಂಡಿತ ಬಿರಾದಾರ, ಸಾಹಿತಿ ಡಿ.ಎನ್.ಅಕ್ಕಿ ಇತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts