More

    ಹಿಂದೂ ಮಹಾಸಾಗರದಲ್ಲಿ ಚೀನಾ ಬಾಲ ಬಿಚ್ಚುವ ಸಾಧ್ಯತೆ; ಯುದ್ಧನೌಕೆಗಳನ್ನು ನಿಯೋಜಿಸಿದ ನೌಕಾಪಡೆ

    ನವದೆಹಲಿ: ಲಡಾಖ್​ ಪೂರ್ವಭಾಗದಲ್ಲಿ ಕಾಲು ಕೆರೆದು ಗಡಿ ಗಲಾಟೆ ಆರಂಭಿಸಿರುವ ಚೀನಾ ಹಿಂದೂ ಮಹಾಸಾಗರದಲ್ಲಿ ಬಾಲ ಬಿಚ್ಚುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಚೀನಾದ ಜಲಗಡಿಗೆ ಹೊಂದಿಕೊಂಡಿರುವ ಹಿಂದೂ ಮಹಾಸಾಗರದಲ್ಲಿ ಭಾರತೀಯ ನೌಕಾಪಡೆ ಯುದ್ಧನೌಕೆಗಳ ನಿಯೋಜನೆಯನ್ನು ಹೆಚ್ಚಿಸಿದೆ.

    ನಿಮ್ಮ ತಂತ್ರಕ್ಕೆ ನಾವು ಮಣಿಯುವುದಿಲ್ಲ ಎಂಬ ಸ್ಪಷ್ಟಸಂದೇಶವನ್ನು ಚೀನಾಕ್ಕೆ ರವಾನಿಸುವ ಉದ್ದೇಶದಿಂದ ಮುಂಚೂಣಿ ಯುದ್ಧನೌಕೆಗಳು ಮತ್ತು ಜಲಂತರ್ಗಾಮಿಗಳನ್ನು ಹಿಂದೂ ಮಹಾಸಾಗರದಲ್ಲಿ ನಿಯೋಜಿಸಲಾಗಿದೆ ಎಂದು ಭಾರತೀಯ ವಾಯುಪಡೆ ಮೂಲಗಳು ಖಚಿತಪಡಿಸಿವೆ.

    ಇದನ್ನೂ ಓದಿ: ಕಾರಿನಲ್ಲಿತ್ತು 30 ಲಕ್ಷ ರೂ. ನಿಷೇಧಿತ ನೋಟು, ಇನ್ನು 70 ಲಕ್ಷಕ್ಕಾಗಿ ಹುಡುಕಾಟ

    ಲಡಾಖ್​ನ ಪೂರ್ವಭಾಗದಲ್ಲಿ ಏನಾದರೂ ಮತ್ತೊಂದು ದುಸ್ಸಾಹಸಕ್ಕೆ ಕೈ ಹಾಕಿದರೆ, ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನು ಚೀನಾಕ್ಕೆ ರವಾನಿಸುವ ಸಲುವಾಗಿ ಸೇನಾಪಡೆ, ವಾಯುಪಡೆ ಮತ್ತು ನೌಕಾಪಡೆಗಳು ಒಟ್ಟಾಗಿ ಮುಗಿಬೀಳುವ ತಂತ್ರ ರೂಪಿಸಿಕೊಂಡಿವೆ. ತನ್ಮೂಲಕ ರಾಜತಾಂತ್ರಿಕ ಮತ್ತು ಆರ್ಥಿಕ ಕ್ರಮಗಳನ್ನು ಕೈಗೊಳ್ಳುವ ಕುರಿತು ಚೀನಾಕ್ಕೆ ಎಚ್ಚರಿಕೆಯ ಸಂದೇಶವನ್ನು ತನ್ಮೂಲಕ ರವಾನಿಸಲಾಗಿದೆ ಎಂದು ಹೇಳಿವೆ.

    ಚೀನಾ ವಿರುದ್ಧ ಸಮನ್ವಯಕರವಾದ ದಾಳಿ ನಡೆಸುವ ನಿಟ್ಟಿನಲ್ಲಿ ಮೂರು ಪಡೆಗಳ ಮುಖ್ಯಸ್ಥರು ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿವೆ.

    ಸುಶಾಂತ್​ ಆತ್ಮಹತ್ಯೆ ಪ್ರಕರಣ; ಕ್ರಿಮಿನಲ್​ ಲಾಯರ್ ನಿಯೋಜಿಸಿ ರಿಯಾ ಚಕ್ರವರ್ತಿ ಕಣ್ಮರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts