More

    ಭಾರತದ ಮೇಲೆ ಭಾರಿ ಭರವಸೆ; ಕೋವಿಡ್​ ಸಂಕಷ್ಟದಲ್ಲೂ ಹರಿದು ಬಂತು 1.5 ಲಕ್ಷ ಕೋಟಿ ರೂ. ಹೂಡಿಕೆ

    ನವದೆಹಲಿ: ಇಡೀ ಜಗತ್ತು ಕೋವಿಡ್​ ಸಂಕಷ್ಟದಲ್ಲಿದೆ. ಆದರೆ, ಇಡೀ ಜಗತ್ತಿಗೆ ಭಾರತದ ಮೇಲೆ ಅದೇನೋ ಭರವಸೆ. ಕಳೆದ 2-3 ತಿಂಗಳಿನಿಂದ ಭಾರತದಲ್ಲಿ ವಿದೇಶಿ ಕಂಪನಿಗಳು 1.5 ಲಕ್ಷ ಕೋಟಿ ರೂ. ಗೂ ಹೆಚ್ಚು ಹೂಡಿಕೆ ಮಾಡಿವೆ. ಇದು ಮೋದಿ ಸರ್ಕಾರದ ಮೇಲಿರುವ ವಿಶ್ವಾಸ ಹಾಗೂ ಭಾರತದ ಸಾಮರ್ಥ್ಯ ಎಂದೇ ವಿಶ್ಲೇಷಿಸಲಾಗಿದೆ.

    ಏಪ್ರಿಲ್​ – ಜುಲೈ ವರೆಗಿನ ಅವಧಿಯಲ್ಲಿ ಹತ್ತಾರು ವಿದೇಶಿ ಕಂಪನಿಗಳು ಭಾರತದ ರಿಲಯನ್ಸ್​ ಸೇರಿ ಹಲವು ಕಂಪನಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ತೊಡಗಿಸಿವೆ.

    ಕೆಲ ಪ್ರಮುಖ ಬಂಡವಾಳ ಹೂಡಿಕೆ ವಿವರ ಇಲ್ಲಿದೆ.
    1. ಗೂಗಲ್- 10 ಶತಕೋಟಿ ಡಾಲರ್​.
    2. ವಾಲ್​ ಮಾರ್ಟ್​- 1.2 ಶತಕೋಟಿ ಡಾಲರ್​
    3. ಫಾಕ್ಸ್​ ಕಾನ್​- (ಆ್ಯಪಲ್​ಗೆ ಪ್ರಮುಖ ಪೂರೈಕೆದಾರ )-1 ಶತಕೋಟಿ ಡಾಲರ್​
    4. ಫೆಸ್​ಬುಕ್​- 5.7 ಶತಕೋಟಿ ಡಾಲರ್​
    5. ಕ್ವಾಲ್​ಕಾಮ್​- 9.7 ಕೋಟಿ ಡಾಲರ್​
    6. ಥಾಮ್ಸ್​ನ್​- 14.28 ಕೋಟಿ ಡಾಲರ್​
    7. ವೀ ವರ್ಕ್​ ಗ್ಲೋಬಲ್​- 10 ಕೋಟಿ ಡಾಲರ್​
    8. ಹಿತಾಚಿ- 15.9 ಕೋಟಿ ಡಾಲರ್​
    9. ಕಿಯಾ ಮೋಟರ್ಸ್​- 5.4 ಕೋಟಿ ಡಾಲರ್​
    10. ಸೌದಿ ಅರೇಬಿಯಾದ ಪಿಐಎಫ್​- 1.6 ಶತಕೋಟಿ ಡಾಲರ್​

    ಇದನ್ನೂ ಓದಿ; ಮಹಾಕ್ರಾಂತಿಗೆ ಸಜ್ಜಾಗಿದೆ ರಿಲಯನ್ಸ್​ ರಿಟೇಲ್​; ಅಮೆಜಾನ್​, ವಾಲ್​ಮಾರ್ಟ್​ ದೈತ್ಯರಿಗೆ ಶುರುವಾಯ್ತು ಭೀತಿ

    ಇದಲ್ಲದೇ, ಹುಂಡೈ ಮೋಬಿಸ್​ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸುತ್ತಿದೆ. ಅಮೆಜಾನ್​ ಕಂಪನಿ ಭಾಗಿದಾರ ಎಸ್​ಜಿಎಸ್​ ಕಂಪನಿ ಪ್ರಥಮ ಮಾನ್ಯತಾ ಕೇಂದ್ರವನ್ನು ಆರಂಭಿಸಿದೆ. ಅಂತೆಯೇ, ಸಾಫ್ಟವೇರ್​ ಕಂಪನಿ ಎಕ್ಸ್​ಟ್ರಿಯಾ, ಆ್ಯಪ್​ ಆಧಾರಿತ ಕಂಪನಿಗಳಿಗೆ ನೆರವು ನೀಡುವ ಎಫ್​5, ಜತೆಗೆ ಎಲೆಕ್ಟ್ರಾನಿಕ್​ ಕಂಪನಿ ತ್ಸುಜುಕಿ ಹರಿಯಾಣದಲ್ಲಿ ಕೇಂದ್ರವನ್ನು ತೆರೆದಿದೆ.
    ಇನ್ನು ಜಾಗತಿಕ ದೈತ್ಯ ಕಂಪನಿ ಸ್ಯಾಮ್ಸಂಗ್​ 18 ಸ್ಮಾರ್ಟ್​ವಾಚ್​ಗಳ ಪೂರ್ಣ ಪ್ರಮಾಣದ ಉತ್ಪಾದನೆಯನ್ನು ಭಾರತದಲ್ಲಿಯೇ ಆರಂಭಿಸಿದೆ. ಜತೆಗೆ, 4ಜಿ ಆಧಾರಿತ ಸ್ಮಾರ್ಟ್​ವಾಚ್​ಅನ್ನು ಕೂಡ ಭಾರತದಲ್ಲಿಯೇ ತಯಾರಿಸುತ್ತಿದೆ.

    ವರ್ಷಾನುಗಟ್ಟಲೇ ಸಿಗಲಿದೆ ಕೋವಿಡ್​ನಿಂದ ರಕ್ಷಣೆ; ಆಕ್ಸ್​ಫರ್ಡ್​ ಲಸಿಕೆ ಹುಟ್ಟಿಸಿದೆ ಹೊಸ ಭರವಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts