More

    ದೇಶದಲ್ಲಿ ಕೊವಿಡ್​-19 ಸಮುದಾಯ ಪ್ರಸರಣ ಹಂತಕ್ಕೆ ತಲುಪಿತಾ? ಬರೀ ಇಷ್ಟೇ ಅಲ್ಲ ಎಂದಿದ್ದೇಕೆ ಕೇಂದ್ರ?

    ನವದೆಹಲಿ: ಭಾರತದಲ್ಲಿ ಇತ್ತೀಚೆಗೆ ಕರೊನಾ ಸೋಂಕಿತರ ಸಂಖ್ಯೆ ಮಿತಿಮೀರುತ್ತಿದೆ. ಕೆಲವು ರಾಜ್ಯಗಳಲ್ಲಂತೂ ಪ್ರತಿದಿನ ಸಾವಿರದ ಮೇಲೆ ಸೋಂಕಿತರು ಪತ್ತೆಯಾಗುತ್ತಿದ್ದಾರೆ.

    ಈ ಮಧ್ಯೆ ಭಾರತದಲ್ಲಿ ಕರೊನಾ ಸೋಂಕು ಸಮುದಾಯ ಪ್ರಸರಣದ ಹಂತ ತಲುಪಿದೆಯಾ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ. ಅದರಲ್ಲೂ ದೆಹಲಿ, ಮುಂಬೈಗಳಲ್ಲಿ ಕರೊನಾ ಕಳೆದ ಕೆಲವು ದಿನಗಳಿಂದ ಸೋಂಕು ಏರುತ್ತಿರುವುದು ನೋಡಿದರೆ ಸಮುದಾಯ ಪ್ರಸರಣ ಶುರುವಾಗಿದೆ ಎಂಬ ಶಂಕೆ ಕಾಡದೆ ಇರದು.

    ಆದರೆ ಭಾರತದಲ್ಲಿ ಹಾಗೇನೂ ಆಗಿಲ್ಲ. ಇಡೀ ದೇಶದಲ್ಲಿ ಯಾವ ಭಾಗದಲ್ಲಿಯೂ ಕೊವಿಡ್​-19 ಸಮುದಾಯ ಪ್ರಸರಣದ ಹಂತಕ್ಕೆ ತಲುಪಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಆರೋಗ್ಯ ಇಲಾಖೆಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್​​​ನ ಡಿಜಿ, ಪ್ರೊ. ಬಲರಾಮ್ ಭಾರ್ಗವ್​ ಅವರು, ಭಾರತದಲ್ಲಿ ಕೊವಿಡ್​-19 ಸಮುದಾಯ ಪ್ರಸರಣ ಆಗುತ್ತಿಲ್ಲ. ನಮ್ಮದು ದೊಡ್ಡ ದೇಶ. ಆದರೆ ಇಲ್ಲಿ ಕೊವಿಡ್​ ಹರಡುವಿಕೆಯ ಪ್ರಮಾಣ ತೀರ ಕಡಿಮೆ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೆರೆ ತುಂಬಿಸುವ ಯೋಜನೆ ಶೀಘ್ರ ಅನುಷ್ಠಾನ: ಅಧಿಕಾರಿಗಳಿಗೆ ಎಚ್‌ಡಿಕೆ ಸೂಚನೆ

    ಕೊವಿಡ್​-19 ಪ್ರಸರಣದ ಪ್ರಾರಂಭ ಹಂತದಲ್ಲಿ ದೇಶದಲ್ಲಿ ಜಾರಿ ಮಾಡಲಾಗಿದ್ದ ಲಾಕ್​ಡೌನ್​ನಿಂದಾಗಿ ತುಂಬ ಅನುಕೂಲವಾಗಿದೆ. ಕಟ್ಟುನಿಟ್ಟಾಗಿ ತೆಗೆದುಕೊಂಡ ಕ್ರಮಗಳಿಂದಾಗಿ ಕರೊನಾ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ.
    ದೇಶದಲ್ಲಿ ಇದಿಷ್ಟೇ ಅಲ್ಲ, ಇನ್ನೂ ಹೆಚ್ಚಿನ ಜನರು ಕೊವಿಡ್​-19 ಸೋಂಕಿಗೆ ಒಳಗಾಗಬಹುದು. ನಾವು ಕೊವಿಡ್​-19 ನಿಯಂತ್ರಣಾ ಕ್ರಮಗಳನ್ನು ಮುಂದುವರಿಸುತ್ತೇವೆ. ತಪಾಸಣೆ, ಟ್ರೇಸಿಂಗ್​​ಗಳಲ್ಲಿ ವಿಳಂಬ ಮಾಡಬಾರದು. ಸುರಕ್ಷತಾ ಕ್ರಮಗಳನ್ನು ಯಾವ ಕಾರಣಕ್ಕೂ ಕಡಿಮೆ ಮಾಡಬಾರದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಸ್ಸಲ್ಲಿ ಪ್ರಯಾಣಿಸುವವರೇ ಎಚ್ಚರ! ಲಕ್ಷಣಗಳಿಲ್ಲದಿದ್ದರೂ ಚಾಲಕನಿಗೆ ಕರೊನಾ: ಆತಂಕ!

    ಭಾರತದಲ್ಲಿ ಕಳೆದ 24ಗಂಟೆಯಲ್ಲಿ 9,996 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 2,86,579ಕ್ಕೆ ಏರಿದ್ದು, ಸಾವಿನ ಸಂಖ್ಯೆ 8,102ರಷ್ಟಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts