More

    ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಭರ್ಜರಿ ತಾಲೀಮು..

    ಡರ್‌ಹ್ಯಾಂ: ಭಾರತ ಹಾಗೂ ಕೌಂಟಿ ಸೆಲೆಕ್ಟ್ ಇಲೆವೆನ್ ನಡುವಿನ ತ್ರಿದಿನ ಅಭ್ಯಾಸ ಪಂದ್ಯ ನಿರೀಕ್ಷೆಯಂತೆಯೇ ಡ್ರಾಗೊಂಡಿತು. ಬ್ಯಾಟ್ಸ್‌ಮನ್‌ಗಳು ಹಾಗೂ ವೇಗಿಗಳ ಭರ್ಜರಿ ನಿರ್ವಹಣೆಯಿಂದ ಮೇಲುಗೈ ಸಾಧಿಸುವ ಮೂಲಕ ಆಗಸ್ಟ್ 4ರಿಂದ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡ ಭರ್ಜರಿ ಸಿದ್ಧತೆ ಕೈಗೊಂಡಿತು.

    ಇದನ್ನೂ ಓದಿ: ನಾಯಕನಾಗಿ ಆಡಿದ ಮೊದಲ ಪಂದ್ಯದಲ್ಲೇ ಹಲವು ದಾಖಲೆ ಬರೆದ ಶಿಖರ್ ಧವನ್, 

    ಗುರುವಾರ 2ನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ, ರವೀಂದ್ರ ಜಡೇಜಾ (51) ಹಾಗೂ ಕನ್ನಡಿಗ ಮಯಾಂಕ್ ಅಗರ್ವಾಲ್ (47) ಉತ್ತಮ ನಿರ್ವಹಣೆ ತೋರಿದ ಲವಾಗಿ 3 ವಿಕೆಟ್‌ಗೆ 192 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ೋಷಿಸಿತು. ಇದರಿಂದ 284 ರನ್ ಗುರಿ ಪಡೆದ ಕೌಂಟಿ ಇಲೆವೆನ್ ತಂಡ ವಿಕೆಟ್ ನಷ್ಟವಿಲ್ಲದೆ 31 ರನ್ ಗಳಿಸಿದ್ದ ವೇಳೆ ಪಂದ್ಯವನ್ನು ಡ್ರಾ ಎಂದು ೋಷಿಸಲಾಯಿತು. ಭಾರತ ಮೊದಲ ಇನಿಂಗ್ಸ್ 311 ರನ್ ಗಳಿಸಿದ್ದರೆ, ಕೌಂಟಿ ತಂಡವನ್ನು 220 ರನ್‌ಗಳಿಗೆ ಕಡಿವಾಣ ಹೇರಿ 91 ರನ್ ಮುನ್ನಡೆ ಸಾಧಿಸಿತ್ತು.

    ಇದನ್ನೂ ಓದಿ: ಒಲಿಂಪಿಕ್ಸ್ ಸಿದ್ಧತೆ ನಡುವೆಯೂ ಸಾನಿಯಾ ಮಿರ್ಜಾ ಭರ್ಜರಿ ಸ್ಟೆಪ್ಸ್

    ವಾಷಿಂಗ್ಟನ್ ಸುಂದರ್ ಔಟ್
    ಆಲ್ರೌಂಡರ್ ವಾಷಿಂಗ್ಟನ್ ಸುಂದರ್, ಗಾಯದ ಸಮಸ್ಯೆಯಿಂದಾಗಿ ಇಂಗ್ಲೆಂಡ್ ಪ್ರವಾಸದಿಂದ ಹೊರಬಿದ್ದಿದ್ದಾರೆ. ಇದರಿಂದ ಇಂಗ್ಲೆಂಡ್ ಪ್ರವಾಸದಿಂದ ಹೊರಬಿದ್ದ 3ನೇ ಆಟಗಾರ ಎನಿಸಿದ್ದಾರೆ. ಇದಕ್ಕೂ ಮುನ್ನ ಶುಭಮಾನ್ ಗಿಲ್ ಹಾಗೂ ಆವೇಶ್ ಖಾನ್ ಸರಣಿಯಿಂದ ಹೊರಬಿದ್ದಿದ್ದರು. ರೂಪಾಂತರಿ ಡೆಲ್ಟಾ ವೈರಸ್‌ನಿಂದ ಚೇತರಿಸಿಕೊಂಡಿರುವ ಭಾರತದ ವಿಕೆಟ್ ಕೀಪರ್- ಬ್ಯಾಟ್ಸ್‌ಮನ್ ರಿಷಭ್ ಪಂತ್ ಗುರುವಾರ ತಂಡವನ್ನು ಕೂಡಿಕೊಂಡರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts