More

    ಒಲಿಂಪಿಕ್ಸ್ ಸಿದ್ಧತೆ ನಡುವೆಯೂ ಸಾನಿಯಾ ಮಿರ್ಜಾ ಭರ್ಜರಿ ಸ್ಟೆಪ್ಸ್

    ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ಗೆ ದಿನಗಣನೆ ಆರಂಭಗೊಂಡಿದೆ. ಈಗಾಗಲೇ ಜಪಾನ್ ರಾಜಧಾನಿಯತ್ತ ಕ್ರೀಡಾಪಟುಗಳು ಆಗಮಿಸುತ್ತಿದ್ದಾರೆ. ಇಡೀ ವಿಶ್ವವೇ ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಈ ಕ್ರೀಡೋತ್ಸವನ್ನು ಎದುರು ನೋಡುತ್ತಿದೆ. 6 ಬಾರಿ ಗ್ರಾಂಡ್ ಸ್ಲಾಂ ಪ್ರಶಸ್ತಿ ವಿಜೇತೆ ಸಾನಿಯಾ ಮಿರ್ಜಾ ಕೂಡ ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಸಜ್ಜಾಗುತ್ತಿದ್ದಾರೆ. ಒಲಿಂಪಿಕ್ ಕಿಟ್‌ನೊಂದಿಗೆ ಸಾನಿಯಾ ಸ್ಟೆಪ್ಸ್ ಹಾಕುವ ಮೂಲಕ ಗಮನಸೆಳೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಅಮೆರಿಕದ ರಾಪ್ಪರ್ ಡೊಜಾ ಕ್ಯಾಟ್ಸ್ ಅವರ ‘ಕಿಸ್ ಮಿ ಮೋರ್’ ಆಲ್ಬಂನ ಹಾಡಿಗೆ ಹೆಜ್ಜೆಹಾಕಿದ್ದು, ತಮ್ಮ ಕೆಲವೊಂದು ಹಳೇ ತುಣುಕುಗಳನ್ನು ಹಾಕಲಾಗಿದೆ. ‘ಎ’ ನನ್ನ ಹೆಸರು. Aggression (ಆಕ್ರಮಣ), Ambition, (ಹೆಬ್ಬಯಕೆ), Achieve(ಸಾಧನೆ) ಹಾಗೂ Affection (ಮನಮುಟ್ಟುವಿಕೆ) ಎಂದು ವಿವರಿಸಲಾಗಿದೆ.

    ಇದನ್ನೂ ಓದಿ: VIDEO: ಮಿಚೆಲ್ ಸ್ಟಾರ್ಕ್ – ರಸೆಲ್ ಹಣಾಹಣಿಯಲ್ಲಿ ಗೆದ್ದ ಆಸೀಸ್

    34 ವರ್ಷದ ಸಾನಿಯಾ ಮಿರ್ಜಾ ವಿಡಿಯೋ ಹಾಕಿದ ಬೆನ್ನಲ್ಲೇ ಲಕ್ಷಾಂತರ ಮಂದಿ ಲೈಕ್ ಮಾಡಿದ್ದು, ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದಾರೆ. ಡ್ಯಾನ್ಸ್ ತುಂಬಾ ಇಷ್ಟವಾಯಿತು. ಅದರಲ್ಲೂ ಕಣ್ಣು ಮಿಟುಕಿಸುವುದು ಚೆನ್ನಾಗಿದೆ ಎಂದು ಕೈಗಾರಿಕೋದ್ಯಮಿ ಕುಮಾರ್ ಮಂಗಲಂ ಬಿರ್ಲಾ ಪುತ್ರಿ ಅನನ್ಯಾ ಬಿರ್ಲಾ ಹೇಳಿದ್ದಾರೆ. ಒಲಿಂಪಿಕ್ಸ್‌ಗೆ ಶುಭವಾಗಲಿ ಮೇಡಂ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: VIDEO: ಕೌಂಟಿ ಕ್ರಿಕೆಟ್‌ನಲ್ಲಿ ಆರ್.ಅಶ್ವಿನ್ ಮಿಂಚಿಂಗ್, ಇಂಗ್ಲೆಂಡ್ ಸರಣಿಗೂ ಮುನ್ನ ಭರ್ಜರಿ ತಾಲೀಮು..!

    ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಭಾರತದ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಸಲುವಾಗಿ ‘ಚಿಯರ್ 4 ಇಂಡಿಯಾ’ ಹೆಸರಿನ ಹಾಡನ್ನು ಬುಧವಾರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಬಿಡುಗಡೆ ಮಾಡಿದರು. ಆಸ್ಕರ್, ಗ್ರಾೃಮಿ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎ. ಆರ್. ರೆಹಮಾನ್ ಸಂಗೀತ ನೀಡಿದ್ದು, ಯುವ ಗಾಯಕಿ ಅನನ್ಯಾ ಬಿರ್ಲಾ ಹಾಡಿದ್ದಾರೆ. ‘ಚಿಯರ್ 4 ಇಂಡಿಯಾ; ಹಿಂದೂಸ್ತಾನಿ ವೇ’ ಎಂದು ಹಾಡಿಗೆ ಶೀರ್ಷಿಕೆ ನೀಡಲಾಗಿದೆ.

     

    View this post on Instagram

     

    A post shared by Sania Mirza (@mirzasaniar)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts