More

    VIDEO: ಕೌಂಟಿ ಕ್ರಿಕೆಟ್‌ನಲ್ಲಿ ಆರ್.ಅಶ್ವಿನ್ ಮಿಂಚಿಂಗ್, ಇಂಗ್ಲೆಂಡ್ ಸರಣಿಗೂ ಮುನ್ನ ಭರ್ಜರಿ ತಾಲೀಮು..!

    ಲಂಡನ್: ಭಾರತದ ಅನುಭವಿ ಸ್ಪಿನ್ನರ್ ಆರ್.ಅಶ್ವಿನ್, ಓವಲ್ ಮೈದಾನದಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್‌ಷಿಪ್ ಪಂದ್ಯದಲ್ಲಿ ಸರ‌್ರೆ ತಂಡದ ಪರ 6 ವಿಕೆಟ್ ಕಬಳಿಸಿ ಗಮನಸೆಳೆದಿದ್ದಾರೆ. ಈ ಮೂಲಕ, ಮುಂದಿನ ತಿಂಗಳು ನಡೆಯಲಿರುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗೆ ಅಶ್ವಿನ್ ಭರ್ಜರಿ ತಾಲೀಮು ನಡೆಸಿದ್ದಾರೆ. ಸಾಮರ್‌ಸೆಟ್ ಎದುರಿನ ಪಂದ್ಯದ 2ನೇ ಇನಿಂಗ್ಸ್‌ನಲ್ಲಿ 15 ಓವರ್ ಎಸೆದ ಅಶ್ವಿನ್ 27 ರನ್‌ಗಳಿಗೆ 6 ವಿಕೆಟ್ ಕಬಳಿಸಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ 99 ರನ್ ನೀಡಿ ಕೇವಲ 1 ವಿಕೆಟ್ ಪಡೆದಿದ್ದ ಅಶ್ವಿನ್, ಬ್ಯಾಟಿಂಗ್‌ನಲ್ಲಿ ಶೂನ್ಯ ಸುತ್ತಿದ್ದರು. ಅಶ್ವಿನ್ ದಾಳಿಗೆ ಕುಸಿದ ಸಾಮರ್‌ಸೆಟ್ 2ನೇ ಇನಿಂಗ್ಸ್‌ನಲ್ಲಿ ಕೇವಲ 69 ರನ್‌ಗೆ ಆಲೌಟ್ ಆಯಿತು. ಇದರಿಂದ ಸರ‌್ರೆ ಗೆಲುವಿಗೆ 259 ರನ್ ಗುರಿ ಪಡೆದಿದೆ.

    ಇದನ್ನೂ ಓದಿ: ಬಾಲಿವುಡ್ ನಟಿ ಕಿಮ್ ಶರ್ಮ ಜತೆ ಟೆನಿಸ್ ತಾರೆ ಲಿಯಾಂಡರ್ ಪೇಸ್ ಡೇಟಿಂಗ್

    ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ವಿಫಲರಾಗಿದ್ದ ಅಶ್ವಿನ್, ಎರಡನೇ ಇನಿಂಗ್ಸ್‌ನಲ್ಲಿ ಗಮನಾರ್ಹ ನಿರ್ವಹಣೆ ತೋರಿದ್ದಾರೆ. ಅಶ್ವಿನ್ ಕೈ ಚಳಕದ ಫಲವಾಗಿ ಸೋಮರ್‌ಸೆಟ್ ತಂಡದ ಬುಧವಾರದ ಭೋಜನ ವಿರಾಮದ ವೇಳೆಗೆ 7 ವಿಕೆಟ್‌ಗೆ 60 ರನ್ ಪೇರಿಸಿತ್ತು. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದ ಬಳಿಕ ಭಾರತದ ಆಟಗಾರರಿಗೆ 20 ದಿನಗಳ ಕಾಲ ವಿಶ್ರಾಂತಿ ನೀಡಲಾಗಿತ್ತು. ಈ ವೇಳೆ ವಿಶೇಷ ಅನುಮತಿಯೊಂದಿಗೆ ವೀಸಾ ಗಿಟ್ಟಿಸಿಕೊಂಡ ಅಶ್ವಿನ್ ಕೌಂಟಿ ಕ್ರಿಕೆಟ್‌ನಲ್ಲಿ ಆಡುತ್ತಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ವಿಫಲರಾಗಿದ್ದ ಅಶ್ವಿನ್, ಎರಡನೇ ಇನಿಂಗ್ಸ್‌ನಲ್ಲಿ ಗಮನಾರ್ಹ ನಿರ್ವಹಣೆ ತೋರಿದ್ದಾರೆ.

    ಇದನ್ನೂ ಓದಿ: ಆಂಗ್ಲರ ಚೊಚ್ಚಲ ವಿಶ್ವಕಪ್ ಗೆಲುವಿಗೆ 2ನೇ ವರ್ಷದ ಸಂಭ್ರಮ, ಫೈನಲ್ ಸೋತರೂ ಹೃದಯ ಗೆದ್ದಿತ್ತು ನ್ಯೂಜಿಲೆಂಡ್

    * ಕೊಹ್ಲಿ ಬಳಗದ ರಜೆ ಮುಕ್ತಾಯ
    ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಬಳಿಕ ಕಳೆದ 20 ದಿನಗಳಿಂದ ಬಿಡುವಿನಲ್ಲಿದ್ದ ವಿರಾಟ್ ಕೊಹ್ಲಿ ಬಳಗ ಗುರುವಾರ ಡರ್‌ಹ್ಯಾಂನಲ್ಲಿ ಮತ್ತೆ ಒಗ್ಗೂಡಲಿದೆ. ವರ್ಕೌಟ್ ಹೊರತುಪಡಿಸಿ ಕ್ರಿಕೆಟ್ ತರಬೇತಿಯಿಂದ ದೂರ ಉಳಿದಿದ್ದ ಆಟಗಾರರು ಈ ವೇಳೆ ಸ್ಕಾಟ್ಲೆಂಡ್ ಹಾಗೂ ಲಂಡನ್ ಸುತ್ತಾಮುತ್ತಾ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಇದೇ ವೇಳೆ ಲಂಡನ್‌ನಲ್ಲಿ ನಡೆದ ವಿಂಬಲ್ಡನ್ ಗ್ರಾಂಡ್ ಸ್ಲಾಂ ಹಾಗೂ ಯುರೋ ಕಪ್ ಫುಟ್‌ಬಾಲ್ ಟೂರ್ನಿಯ ಕೆಲ ಪಂದ್ಯಗಳನ್ನು ವೀಕ್ಷಿಸಿದ್ದರು. ಮುಖ್ಯಕೋಚ್ ರವಿಶಾಸ್ತ್ರಿ, ನೊವಾಕ್ ಜೋಕೊವಿಕ್-ಮ್ಯಾಟಿಯೊ ಬೆರೆಟಿನಿ ನಡುವಿನ ವಿಂಬಲ್ಡನ್ ಫೈನಲ್ ಪಂದ್ಯ ವೀಕ್ಷಿಸಿದ್ದರು. ಆಟಗಾರರು ಗುರುವಾರ ತಂಡ ಕೂಡಿಕೊಂಡ ಬಳಿಕ ಕರೊನಾ ಪರೀಕ್ಷೆಗೆ ಒಳಗಾಗಲಿದ್ದು, ವರದಿ ಬಂದ ಬಳಿಕ ಅಭ್ಯಾಸ ಆರಂಭಿಸಲಿದ್ದಾರೆ. ಬಳಿಕ ಆಗಸ್ಟ್ 4ರಂದು ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯವಾಡುವ ಸಲುವಾಗಿ ನಾಟಿಂಗ್‌ಹ್ಯಾಂನತ್ತ ಪ್ರಯಾಣ ಬೆಳೆಸಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts