More

    ಶ್ರೀ ದುರ್ಗಾದೇವಿ ಮೇಲಿನ ನಂಬಿಕೆಯಿಂದ ಆತ್ಮವಿಶ್ವಾಸ ವೃದ್ಧಿ

    ಕಡೂರು: ಶ್ರೀ ದುರ್ಗಾದೇವಿ ಮೇಲಿನ ನಂಬಿಕೆ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಶೃಂಗೇರಿ ಜೋತಿಷಿ ವಸಂತ್ ಭಟ್ ಹೇಳಿದರು.
    ಪಟ್ಟಣದ ಛತ್ರ ಬೀದಿಯಲ್ಲಿ ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಸಾಮೂಹಿಕ ಲಲಿತಾ ಸಹಸ್ರನಾಮ, ಲಕ್ಷ ಕುಂಕುಮಾರ್ಚನೆ ಪೂಜಾ ಕೈಂಕರ್ಯ ನೆರವೇರಿಸಿ ಮಾತನಾಡಿ, ಶರನ್ನವರಾತ್ರಿ ಸಂದರ್ಭದಲ್ಲಿ ಲೋಕ ಕಲ್ಯಾಣಾರ್ಥವಾಗಿ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಗಿದೆ ಎಂದರು.
    ಮಕ್ಕಳ ಛದ್ಮವೇಷ ಮತ್ತು ಕಂಠಪಾಠ ಸ್ಪರ್ಧೆಗೆ ಉತ್ತಮ ಸ್ಪಂದನೆ ದೊರೆಯಿತು. ನವದುರ್ಗಿಯ ವೇಷ ಭೂಷಣದೊಂದಿಗೆ ಮಕ್ಕಳು ಅಲಂಕಾರಗೊಂಡಿದ್ದು, ಕಂಠಪಾಠ ಸ್ಪರ್ಧೆಯಲ್ಲಿ ಮಕ್ಕಳು ದೇವಿಸ್ತುತಿ ಪಠಿಸುವ ಮೂಲಕ ಗಮನಸೆಳೆದರು. ಸಮಿತಿಯಿಂದ ಮಕ್ಕಳಿಗೆ ಸ್ಮರಣಿಕೆ ಮತ್ತು ಲಾಡು ಪ್ರಸಾದ ವಿತರಿಸಲಾಯಿತು.
    ಸಮಿತಿ ಅಧ್ಯಕ್ಷ ಕೆ.ಪಿ.ವೆಂಕಟೇಶ್, ಭದ್ರಿಸ್ವಾಮಿ, ಕೆ.ಪಿ.ಶ್ರೀನಿವಾಸ್, ಪುರಸಭೆ ಸದಸ್ಯ ಯತಿರಾಜ್, ಸೋಮೇಶ್ ಶಿವಮೊಗ್ಗೆ, ವಿಕಾಸ್ ಚಂದ್ರು, ರಂಗನಾಥ್, ಕೆ.ಪಿ.ಪ್ರದೀಪ್, ನಾಗೇಂದ್ರ, ಗೌತಮ್, ರಾಜು ಕರಿಬಡ್ಡೆ, ಹುಲಿಕೆರೆ ಮಹೇಶ್, ಉಮೇಶ್, ಎಚ್.ಆರ್. ದೇವರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts