More

  ಹೊಳೆಯುವ, ಆರೋಗ್ಯಕರ ಚರ್ಮಕ್ಕಾಗಿ ನಿಮ್ಮ ಡಯಟ್​ನಲ್ಲಿರಲಿ ಈ ಪ್ರಮುಖ ಆಹಾರಗಳು…

  ಆರೋಗ್ಯ ತಜ್ಞರ ಪ್ರಕಾರ ಕೆಲವು ಹಣ್ಣು ಮತ್ತು ತರಕಾರಿಗಳು ನಮ್ಮ ಚರ್ಮಕ್ಕೆ ನೈಸರ್ಗಿಕ ಹೊಳಪು ಮತ್ತು ಆರೋಗ್ಯವನ್ನು ನೀಡುತ್ತದೆ. ನಿಯಮಿತವಾಗಿ ಸೇವನೆ ಮಾಡುವುದರಿಂದ ನಿಮ್ಮ ತ್ವಚೆಯ ಮೇಲೆ ತುಂಬಾ ಪರಿಣಾಮ ಬೀರಿತ್ತದೆ ಮತ್ತು ನಿಮ್ಮ ಚರ್ಮ ವಯಸ್ಸಾದಂತೆ ಗೋಚರಿಸುವುದನ್ನು ತಡೆಗಟ್ಟುತ್ತದೆ.

  ಚರ್ಮದ ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳಲು ಉತ್ತಮ ದಿನಚರಿಯ ಅಗತ್ಯವಿದೆ. ಅದರಲ್ಲೂ ಆಹಾರ ಪದ್ಧತಿಯಂತೂ ತುಂಬಾನೇ ಮುಖ್ಯ. ನಿಮ್ಮ ಚರ್ಮವನ್ನು ಸುಂದರವಾಗಿ ಮತ್ತು ಆರೋಗ್ಯಕರವಾಗಿ ಇಡಲು ನಿಮ್ಮ ಆಹಾರದಲ್ಲಿ ನಿಯಮಿತವಾಗಿ ಸೇರಿಸಬಹುದಾದ ಕೆಲವು ಪ್ರಮುಖ ಆಹಾರಗಳ ಪಟ್ಟಿ ಇಲ್ಲಿವೆ.

  1. ಮೀನು: ಕೊಬ್ಬಿನಾಂಶ ಇರುವ ಮೀನುಗಳನ್ನು ನಮ್ಮ ಆಹಾರದಲ್ಲಿ ಸೇರಿಸುವುದು ಚರ್ಮದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಸಾಲ್ಮನ್, ಮ್ಯಾಕೆರೆಲ್ ಮತ್ತು ಸಾರ್ಡೀನ್‌ಗಳಂತಹ ಮೀನುಗಳು ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅವುಗಳಲ್ಲಿರುವ ಒಮೆಗಾ -3 ಕೊಬ್ಬಿನಾಮ್ಲವು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ಒಮೆಗಾ -3 ಕೊಬ್ಬಿನಾಮ್ಲಗಳ ಕೊರತೆಯು ಒಣ ಚರ್ಮಕ್ಕೆ ಕಾರಣವಾಗಬಹುದು.

  2. ಸಿಹಿ ಗೆಣಸು: ನಿರ್ದಿಷ್ಟ ಋತುವಿನಲ್ಲಿ ಲಭ್ಯವಿರುವ ಸಿಹಿ ಗೆಣಸು ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸಿಹಿ ಗೆಣಸಿನಲ್ಲಿ ಬೀಟಾ-ಕ್ಯಾರೋಟಿಟ್​ ಅಂಶವು ಸಮೃದ್ಧವಾಗಿದೆ. ಇದು ಸಸ್ಯಾಹಾರಿ ಮೂಲಗಳಿಂದ ಬರುತ್ತದೆ. ಕಿತ್ತಳೆ, ಪಾಲಕ್ ಮತ್ತು ಕ್ಯಾರೆಟ್‌ನಂತಹ ಆಹಾರಗಳಲ್ಲಿಯೂ ಬೀಟಾ ಕ್ಯಾರೋಟಿನ್‌ನಲ್ಲಿ ಸಮೃದ್ಧವಾಗಿದ್ದು, ಉತ್ತಮ ತ್ವಚ್ಛೆಗೆ ಸಹಕಾರಿಯಾಗಿದೆ.

  3. ವಾಲ್​ನಟ್ಸ್​: ತ್ವಚೆಯ ಸೌಂದರ್ಯ ಮತ್ತು ಆರೋಗ್ಯಕ್ಕಾಗಿ ವಾಲ್​ ನಟ್ಸ್ ಅನ್ನು ಆಹಾರದಲ್ಲಿ ಕಡ್ಡಾಯವಾಗಿ ತೆಗೆದುಕೊಳ್ಳಲೇಬೇಕು. ಈ ವಾಲ್​ ನಟ್ಸ್ ಅನೇಕ ಕೊಬ್ಬಿನಾಮ್ಲಗಳ ಮೂಲವಾಗಿದೆ. ಈ ಕೊಬ್ಬಿನಾಮ್ಲಗಳು ಚರ್ಮದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

  4. ಅವಕಾಡೋ: ಅವಕಾಡೊ ಚರ್ಮದ ಮೃದುತ್ವ ಮತ್ತು ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅವಕಾಡೊಗಳು ಆರೋಗ್ಯಕರ ಕೊಬ್ಬನ್ನು ಹೊಂದಿದ್ದು ಅದು ಚರ್ಮಕ್ಕೆ ತುಂಬಾ ಒಳ್ಳೆಯದು.

  5. ಟೊಮ್ಯಾಟೋ: ಟೊಮ್ಯಾಟೋ ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾದ ತರಕಾರಿ. ಟೊಮ್ಯಾಟೋದಲ್ಲಿ ಲೈಕೋಪೀನ್ ಮತ್ತು ವಿಟಮಿನ್-ಸಿ ಇರುವುದರಿಂದ ಚರ್ಮಕ್ಕೆ ಒಳ್ಳೆಯದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. (ಏಜೆನ್ಸೀಸ್​)

  ನನ್ನ ಕಣ್ಣೆದುರಲ್ಲೇ ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ! ಕಹಿ ಘಟನೆ ಬಿಚ್ಚಿಟ್ಟ ನಟಿ ವಿದ್ಯಾ ಬಾಲನ್​

  ಪ್ಲೀಸ್​ ನಾನದನ್ನು ನೋಡಲೇಬೇಕು…ಪರಿ ಪರಿಯಾಗಿ ಬೇಡಿಕೊಂಡ ಅಭಿಮಾನಿ, ಆಸೆ ಈಡೇರಿಸಿದ ಪ್ರಿಯಾಂಕಾ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts