More

    ನನ್ನ ಕೊಲೆಗೆ ಪಾಕ್​ ಪ್ರಧಾನಿ, ಗೃಹಮಂತ್ರಿ ಮತ್ತು ಆರ್ಮಿ ಆಫೀಸರ್​ ಸ್ಕೆಚ್​ ಹಾಕಿದ್ದು ಎಂದ ಇಮ್ರಾನ್​ ಖಾನ್​!

    ಇಸ್ಲಾಮಾಬಾದ್​: ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಕ್ರಿಕೆಟಿಗ ಇಮ್ರಾನ್​ ಖಾನ್ ಮೇಲೆ​ ಇತ್ತೀಚೆಗೆ ಗುಂಡಿನ ದಾಳಿ ಆಗಿತ್ತು. ಕಾಲಿಗೆ ಗುಂಡೇಟು ಬಿದ್ದ ಮೇಲೆ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಆರೋಗ್ಯ ಚೇತರಿಸಿಕೊಂಡ ಮೇಲೆ ಇಮ್ರಾನ್​ ಖಾನ್​ ಪಾಕ್​ ಪ್ರಧಾನಿ, ಹಿರಿಯ ಸೇನಾ ಅಧಿಕಾರಿ ಮತ್ತು ಗೃಹ ಮಂತ್ರಿಯ ಮೇಲೆ ಕೇಸ್​ ದಾಖಲಿಸಿದ್ದಾರೆ. ಇದು ಪಾಕಿಸ್ತಾನ ರಾಜಕೀಯದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದೆ ಎಂದೇ ಹೇಳಬಹುದು.

    ಎಫ್​.ಐ.ಆರ್​ನಲ್ಲಿ ಕೊಲೆ ಪ್ರಯತ್ನ ಆರೋಪದ ಮೇಲೆ ಆ ದೇಶದ ಮೂವರು ಪ್ರಮುಖರ ಮೇಲೆ ಇಮ್ರಾನ್​ ಖಾನ್​ ಆರೋಪ ಮಾಡಿದಾಗ ಪೊಲೀಸರು ಕೇಸು ದಾಕಲಿಸಲು ಒಪ್ಪಿಲ್ಲ. ಆದರೆ ಇದ್ಯಾವುದಕ್ಕೂ ಜಗ್ಗದ ಇಮ್ರಾನ್​ ಆ ಹೆಸರುಗಳನ್ನು ಹಿಂಪಡೆಯುವುದಿಲ್ಲ ಎಂದು ಹೇಳಿದ್ದಾರೆ.

    ತೆಹ್ರೀಕ್-ಎ-ಇನ್​ಸಾಫ್​ ಪಕ್ಷದ ಮುಖ್ಯಸ್ಥರಾಗಿರುವ ಇಮ್ರಾನ್​, ಪ್ರಧಾನಿ ಶೇಬಾಝ್​ ಶರೀಫ್​, ಗೃಹಮಂತ್ರಿ ರಾಣಾ ಸನಾವುಲ್ಲಾ ಮತ್ತು ಮೇಜರ್​ ಜನರಲ್​ ಫೈಜಲ್​ ನಸೀರ್​ ಸೇರಿಕೊಂಡು ತಮ್ಮ ಹತ್ಯೆಗೆ ಸಂಚು ಹೂಡಿದ್ದರು ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts