More

    ಪಶ್ಚಿಮ ಬಂಗಾಳದ ಲಿಟಲ್​ ಮಾಸ್ಟರ್​ ಆಗಿದ್ದರು ಪ್ರಣಬ್​ ದಾ…!

    ನವದೆಹಲಿ: ದೇಶದ ಹಿರಿ-ಕಿರಿಯ ರಾಜಕಾರಣಿಗಳಿಂದ, ಎಲ್ಲ ಪಕ್ಷಗಳ ಮುಖಂಡರಿಂದ ಪ್ರಣಬ್​ ದಾ ಎಂದೇ ಕರೆಯಿಸಿಕೊಳ್ಳುತ್ತಿದ್ದರು ಪ್ರಣಬ್​ ಮುಖರ್ಜಿ. ಆದರೆ, ಅಂದಿನ ಬಾಂಗ್ಲಾ ಕಾಂಗ್ರೆಸ್​ನಲ್ಲಿ ಇವರಿಗಿದ್ದ ಹೆಸರು ಲಿಟಲ್​ ಮಾಸ್ಟರ್​….!

    ಇಂದಿರಾ ಗಾಂಧಿಯವರೊಂದಿಗೆ ಕೆಲಸ ಮಾಡಿದ್ದ ಕಾಂಗ್ರೆಸ್​ನ ಕೊನೆಯ ಕೊಂಡಿ ಪ್ರಣಬ್​ ದಾ ಮೂಲಕ ಕಳಚಿದಂತಾಗಿದೆ. ಇವರನ್ನು ಕಾಂಗ್ರೆಸ್​ನ ತೆಕ್ಕೆಗೆ ಸೆಳೆದಿದ್ದೇ ಸ್ವತಃ ಇಂದಿರಾ ಗಾಂಧಿ ಎಂಬುದು ವಿಶೇಷ.

    ಪಶ್ಚಿಮ ಬಂಗಾಳದ ಮಿಡ್ನಾಫುರ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಜಯ ಗಳಿಸಿದ್ದ ಹಿರಿಯ ನಾಯಕ ಕೃಷ್ಣ ಮೆನನ್​ ಅವರ ಚುನಾವಣಾ ಎಜೆಂಟ್​ ಆಗುವ ಮೂಲಕ ಪ್ರಣಬ್​ ರಾಜಕೀಯ ಕ್ಷೇತ್ರಕ್ಕೆ ಎಂಟ್ರಿಯಾಗಿದ್ದರು.

    ಇದನ್ನೂ ಓದಿ; ದೇಶೀಯ ಕರೊನಾ ಲಸಿಕೆ ಕೊವಾಕ್ಸಿನ್​ ಇನ್ನಷ್ಟು ಹತ್ತಿರ; ಎರಡನೆಯ ಹಂತದ ಪರೀಕ್ಷೆಗೆ ಸಿದ್ಧತೆ 

    1966ರಲ್ಲಿ ಬಂಗಾಳದಲ್ಲಿ ಕಾಂಗ್ರೆಸ್​ ಇಬ್ಭಾಗವಾದಾಗ ಮತ್ತೊಂದು ಬಣದ ನಾಯಕರಾಗಿದ್ದ ಪ್ರಣಬ್​ ಮುಖರ್ಜಿಯವರನ್ನು ಇಂದಿರಾ ಗಾಂಧಿ ರಾಜ್ಯಸಭೆ ಸದಸ್ಯರನ್ನಾಗಿಸಿದರು. ನಂತರ 1970 ರಲ್ಲಿ ಈ ಬಣ ಕಾಂಗ್ರೆಸ್​ನಲ್ಲಿ ವಿಲೀನವಾಯಿತು.

    1973ರಲ್ಲಿ ಪ್ರಣಬ್​ ಮುಖರ್ಜಿ ಮೊದಲ ಬಾರಿಗೆ ಇಂದಿರಾ ಗಾಂಧಿ ಸಂಪುಟದಲ್ಲಿ ಸಚಿವರಾಗಿ ಸೇರ್ಪಡೆಯಾದರು. ಕೈಗಾರಿಕೆ ಖಾತೆಯ ಸಹಾಯಕ ಸಚಿವರಾಗಿ ಇವರಿಗೆ ಹೊಣೆ ನೀಡಲಾಗಿತ್ತು. ಎರಡೇ ವರ್ಷಗಳಲ್ಲಿ ಸ್ವತಂತ್ರ ನಿರ್ವಹಣೆಯ ಕಂದಾಯ ಹಾಗೂ ಬ್ಯಾಕಿಂಗ್​ ವ್ಯವಹಾರಗಳ ಉಪ ಸಚಿವರಾಗಿ ಬಡ್ತಿ ಪಡೆದರು.
    1982ರಲ್ಲಿ ತುರ್ತು ಪರಿಸ್ಥಿತಿ ಬಳಿಕ ಇಂದಿರಾ ಅಧಿಕಾರಕ್ಕೆ ಮರಳಿದಾಗ ಪ್ರಣಬ್​ ಮುಖರ್ಜಿ ಭಾರತದ ಹಣಕಾಸು ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಆರ್​.​ ವೆಂಕಟರಾಮನ್​ ಅವರನ್ನು ಬದಲಿಗೆ ಈ ಹುದ್ದೆ ಸ್ವೀಕರಿಸಿದ ಖ್ಯಾತಿ ಅವರದ್ದಾಗಿತ್ತು. ಭಾರತದ ಆರ್ಥಿಕ ಕ್ಷೇತ್ರದಲ್ಲಿ ಹಲವು ಮಹತ್ತರ ಬದಲಾವಣೆಗಳಿಗೆ ಪ್ರಣಬ್​ ಕಾರಣಕರ್ತರಾದರು.

    ಇದನ್ನೂ ಓದಿ; ವಿಡಿಯೋ: ಮೂರು ವರ್ಷದ ಮಗುವನ್ನು 100 ಅಡಿ ಎತ್ತರಕ್ಕೆ ಕೊಂಡೊಯ್ದ ಗಾಳಿಪಟ…! 

    ಆಡಳಿತಾತ್ಮಕ ಸುಧಾರಣೆ, ಮಾಹಿತಿ ಹಕ್ಕು, ಉದ್ಯೋಗದ ಹಕ್ಕು, ಆಹಾರ ಭದ್ರತೆ, ಇಂಧನ ಭದ್ರತೆ ಮೊದಲಾದ ವಿಚಾರದಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಂಡರು. ಇದಲ್ಲದೇ, ಆಧಾರ್​ ಪ್ರಾಧಿಕಾರ, ಮೆಟ್ರೋ ನಿಗಮಗಳ ಸ್ಥಾಪನೆಯಲ್ಲಿಯೂ ಇವರ ಪಾತ್ರವಿದೆ. ಸತತ 23 ವರ್ಷಗಳವರೆಗೆ ಕಾಂಗ್ರೆಸ್​ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಐದು ಬಾರಿ ರಾಜ್ಯಸಭೆ, ಎರಡು ಬಾರಿ ಲೋಕಸಭೆ ಸದಸ್ಯರಾಗಿದ್ದರು. 2012ರಿಂದ 2017ರವರೆಗೆ ಭಾರತದ ರಾಷ್ಟ್ರಪತಿಯಾಗಿ ಸಮರ್ಥವಾಗಿ ಆಡಳಿತ ನಡೆಸಿದರು.

    9 ತಾಸಿನ ನಿದ್ದೆಯೇ ಉದ್ಯೋಗ; ಲಕ್ಷ ರೂ. ಸಂಬಳ; ಷರತ್ತುಗಳು ಅನ್ವಯ….!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts