More

    ಮೇ.22ರವರೆಗೆ ಜಿಲ್ಲೆಯಲ್ಲಿ ಮಳೆ ಸಾಧ್ಯತೆ: ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ

    ಮಂಡ: ಜಿಲ್ಲೆಯಲ್ಲಿ ಶುಕ್ರವಾರ 15.8 ಮಿ.ಮೀ ಮಳೆಯಾಗಿದೆ.
    ಕೆ.ಆರ್.ಪೇಟೆ ತಾಲೂಕಿನಲ್ಲಿ 42.5 ಮಿ.ಮೀ, ಮದ್ದೂರಿನಲ್ಲಿ 8.5 ಮಿ.ಮೀ, ಮಳವಳ್ಳಿಯಲ್ಲಿ 2.9 ಮಿ.ಮೀ, ಮಂಡ್ಯದಲ್ಲಿ 11.8 ಮಿ.ಮೀ, ನಾಗಮಂಗಲದಲ್ಲಿ 14.3 ಮಿ.ಮೀ, ಪಾಂಡವಪುರದಲ್ಲಿ 9.7 ಮಿ.ಮೀ ಹಾಗೂ ಶ್ರೀರಂಗಪಟ್ಟಣ ತಾಲೂಕಿನಲ್ಲಿ 12.9 ಮಿ.ಮೀ ಮಳೆಯಾಗಿದೆ.
    ಇನ್ನು ಮೇ.22ರವರೆಗೆ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ತಿಳಿಸಿದೆ. ಮೇ.19ರಂದು 8 ಮಿ.ಮೀ, 20ರಂದು 14 ಮಿ.ಮೀ, 21ರಂದು 14 ಮಿ.ಮೀ ಹಾಗೂ 22ರಂದು 8 ಮಿ.ಮೀ ಮಳೆಯಾಗಬಹುದು. ಈ ಅವಧಿಯಲ್ಲಿ ಗರಿಷ್ಟ 32.5 ರಿಂದ 33.4 ಡಿಗ್ರಿ ಹಾಗೂ ಕನಿಷ್ಟ 23ರಿಂದ 23.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಲಿದೆ. ಅಂತೆಯೇ ಗಾಳಿ ಪ್ರತಿ ಗಂಟೆಗೆ 9 ರಿಂದ 11 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ರಾಗಿ, ಮೆಕ್ಕೆಜೊಳ, ಪಾಪ್‌ಕಾರ್ನ್, ಶಕ್ತಿಮಾನ್ ಜೋಳ, ನೆಲಗಡಲೆ, ಸೋಯಾ ಅವರೆ, ತೊಗರಿ, ಹೆಸರು, ಉದ್ದು, ಅಲಸಂಧೆ ಬೆಳೆಯನ್ನು ಬೆಳೆಯಬಹುದು ಎಂದು ವರದಿಯಲ್ಲಿ ತಿಳಿಸಿದೆ.

    ಮೇ.22ರವರೆಗೆ ಜಿಲ್ಲೆಯಲ್ಲಿ ಮಳೆ ಸಾಧ್ಯತೆ: ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts