More

    ‘ಇಲ್ಲಿರುವ ತರುಣರು..ಸುಂದರ ಮಹಿಳೆಯರನ್ನು ಚುಂಬಿಸಬೇಕು ಎನ್ನಿಸುತ್ತಿದೆ’ ಎಂದ್ರು ಡೊನಾಲ್ಡ್ ಟ್ರಂಪ್​

    ಫ್ಲೋರಿಡಾ: ಕೊವಿಡ್​-19 ಸೋಂಕಿನಿಂದ ಚೇತರಿಸಿಕೊಂಡಿರುವ ಡೊನಾಲ್ಡ್​ ಟ್ರಂಪ್​ ಮತ್ತೆ ತಮ್ಮ ಚುನಾವಣಾ ಪ್ರಚಾರಕ್ಕೆ ಹಿಂದಿರುಗಿದ್ದಾರೆ.

    ಇಂದು ಫ್ಲೋರಿಡಾದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಡೊನಾಲ್ಡ್​ ಟ್ರಂಪ್​, ನಾನು ಕೊವಿಡ್​-19 ಸೋಂಕಿನಿಂದ ಚೇತರಿಸಿಕೊಂಡ ಬಳಿಕ ಇನ್ನಷ್ಟು ಬಲಿಷ್ಠನಾಗಿದ್ದೇನೆ. ನಿಮಗೆಲ್ಲರಿಗೂ ಚುಂಬಿಸಬೇಕು ಎನ್ನಿಸುತ್ತಿದೆ ಎಂದು ಸಭೆಯಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಹೇಳಿದರು. ಇದನ್ನೂ ಓದಿ: ನಿರಂತರವಾಗಿ ಲೈಂಗಿಕ ಕಿರುಕುಳ; ಸಹಿಸಲಾಗದ 17ರ ಯುವತಿ ಬಾವಿಗೆ ಹಾರಿದಳು

    ಸದಾ ಏನಾದರೂ ಎಡವಿಡಂಗಿ ಹೇಳಿಕೆ ನೀಡಿ ಸುದ್ದಿಯಾಗುವ ಟ್ರಂಪ್​, ಇದೀಗ ಎಲ್ಲರನ್ನೂ ಚುಂಬಿಸಬೇಕು ಎಂದಿರುವುದು ಕೂಡ ವೈರಲ್​ ಸುದ್ದಿಯಾಗಿದೆ.

    ನಿಮ್ಮೆಲ್ಲರ ಹಾರೈಕೆ, ಪ್ರಾರ್ಥನೆಯ ಫಲವಾಗಿ ಕರೊನಾದಿಂದ ಗುಣಮುಖನಾಗಿ, ಇನ್ನಷ್ಟು ಶಕ್ತಿಯುತನಾಗಿದ್ದೇನೆ. ನಿಮ್ಮೆಲ್ಲರ ಬೆಂಬಲಕ್ಕೆ ನನ್ನ ಧನ್ಯವಾದಗಳು. ಇದೀಗ ಇಲ್ಲಿ ನೆರೆದಿರುವ ಎಲ್ಲ ವೀಕ್ಷಕರನ್ನೂ ಚುಂಬಿಸಬೇಕು ಎನ್ನಿಸುತ್ತಿದೆ ಎಂದು ಒರ್ಲ್ಯಾಂಡೊ ಸ್ಯಾನ್ಫೋರ್ಡ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಹೇಳಿದರು. ಇದನ್ನೂ ಓದಿ: ಎದೆ ಸೀಳು ಕಾಣುವಂತೆ ಬಟ್ಟೆ ಧರಿಸಿದಕ್ಕೆ ಟ್ರೋಲ್​; ನೆಟ್ಟಿಗರ ಚಳಿ ಬಿಡಿಸಿದ ಕಣ್ಸನ್ನೇ ಸುಂದರಿ!

    ನಾವು ಮತ್ತೆ ಗೆಲ್ಲಲು ಇನ್ನೂ 22 ದಿನಗಳು ಬಾಕಿ ಇದೆ. ಇನ್ನೂ ಹಲವು ವರ್ಷಗಳ ಕಾಲ ವೈಟ್​ ಹೈಸ್​ನಲ್ಲಿ ನಾವು ಅಧಿಕಾರ ನಡೆಸುತ್ತೇವೆ ಎಂದು ಟ್ರಂಪ್​ ಹೇಳುತ್ತಿದ್ದಂತೆ, ನೆರೆದಿದ್ದ ವೀಕ್ಷಕರು ಒಮ್ಮೆಲೇ ವಿ ಲವ್​ ಯೂ ಎಂದು ಕೂಗಿದರು.  ಅದರಿಂದ ತುಂಬ ಖುಷಿಯಾದ ಟ್ರಂಪ್​, ನನ್ನಲ್ಲೀಗ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ. ಈಗ ನಾನು ನೀವೆಲ್ಲ ಇರುವೆಡೆಗೆ ನಡೆದು ಬರಬಲ್ಲೆ..ಇಲ್ಲಿ ನೆರೆದಿರುವ ತರುಣರು, ಸುಂದರ ಮಹಿಳೆಯರಿಗೆ ನಾನು ಚುಂಬಿಸಬೇಕು ಎನ್ನಿಸುತ್ತಿದೆ ಎಂದು ಹೇಳಿದರು.

    ಡೊನಾಲ್ಡ್​ ಟ್ರಂಪ್​ ಅವರಲ್ಲಿ ಕರೊನಾ ನೆಗೆಟಿವ್​ ವರದಿ ಬರುತ್ತಿದ್ದಂತೆ ಅವರು ತಮ್ಮ ರಾಜಕೀಯ ಕೆಲಸಗಳಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ. (ಏಜೆನ್ಸೀಸ್)

    ತಲಾ ಜಿಡಿಪಿ ಲೆಕ್ಕಾಚಾರದಲ್ಲಿ ಭಾರತವನ್ನು ಹಿಂದಿಕ್ಕಲಿದೆಯಂತೆ ಬಾಂಗ್ಲಾ: ಇದು ಐಎಂಎಫ್ ಲೆಕ್ಕಾಚಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts