More

    ತಲಾ ಜಿಡಿಪಿ ಲೆಕ್ಕಾಚಾರದಲ್ಲಿ ಭಾರತವನ್ನು ಹಿಂದಿಕ್ಕಲಿದೆಯಂತೆ ಬಾಂಗ್ಲಾ: ಇದು ಐಎಂಎಫ್ ಲೆಕ್ಕಾಚಾರ

    ನವದೆಹಲಿ: ಕರೋನಾ ವೈರಸ್ ಸೋಂಕಿನ ಕಾರಣದಿಂದ ಜಾಗತಿಕ ಅರ್ಥವ್ಯವಸ್ಥೆಯೇ ಕುಸಿದು ಕುಳಿತಿರುವಾಗ ತಲಾ ಜಿಡಿಪಿಯ ಡಾಲರ್ ಲೆಕ್ಕಾಚಾರದಲ್ಲಿ ಭಾರತವನ್ನು ನೆರೆಯ ಬಾಂಗ್ಲಾದೇಶ ಹಿಂದಿಕ್ಕಲಿದೆಯಂತೆ! ಬಾಂಗ್ಲಾದೇಶದ ತಲಾ ಜಿಡಿಪಿಯು 2020ರಲ್ಲಿ ಶೇಕಡ 4 ವಿಸ್ತರಣೆಯಾಗಲಿದ್ದು, 1,888 ಡಾಲರ್ ಆಗಲಿದೆ. ಇದೇ ವೇಳೆ ಭಾರತದ ತಲಾ ಜಿಡಿಪಿಯು ಶೇಕಡ 10.5ಕ್ಕೆ ಕುಸಿಯಲಿದ್ದು, 1,877 ಡಾಲರ್​ ಗೆ ಇಳಿಯಲಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಇದು ಕನಿಷ್ಠ ಮಟ್ಟವಾಗಿದೆ.

    ಇಂಟರ್​ ನ್ಯಾಷನಲ್​ ಮಾನಿಟರಿ ಫಂಡ್ (ಐಎಂಎಫ್​) ತನ್ನ ವರ್ಲ್ಡ್ ಎಕನಾಮಿಕ್ ಔಟ್​ಲುಕ್​ನಲ್ಲಿ ಈ ಅಂಶವಿದೆ ಎಂಬುದನ್ನು ಬಿಜಿನೆಸ್ ಟುಡೇ ಉಲ್ಲೇಖಿಸಿದೆ. ಎರಡೂ ದೇಶಗಳ ಜಿಡಿಪಿಯನ್ನು ಪ್ರಸ್ತುತ ಬೆಲೆಗಳನ್ನಾಧರಿಸಿ ನಿರ್ಧರಿಸಲಾಗುತ್ತಿದೆ. ಈ ಅಂದಾಜಿನ ಪ್ರಕಾರ ದಕ್ಷಿಣ ಏಷ್ಯಾದಲ್ಲಿ ಪಾಕಿಸ್ತಾನ, ನೇಪಾಳಗಳ ನಂತರದಲ್ಲಿ ಭಾರತ ಮೂರನೇ ಅತ್ಯಂತ ಬಡರಾಷ್ಟ್ರವೆನಿಸಿಕೊಳ್ಳಲಿದೆ. ಭೂತಾನ್​, ಬಾಂಗ್ಲಾದೇಶ, ಮಾಲ್ಡೀವ್ಸ್, ಶ್ರೀಲಂಕಾಗಳ ತಲಾ ಜಿಡಿಪಿಯು ಭಾರತಕ್ಕಿಂತ ಹೆಚ್ಚಾಗಿದೆ.

    ಇದನ್ನೂ ಓದಿ: ವಿದ್ಯಾರ್ಥಿಗಳನ್ನು ಉಗ್ರರ ತಂಡಕ್ಕೆ ಸೇರಿಸುತ್ತಿದ್ದ ಮೂವರು ಶಿಕ್ಷಕರು ಅರೆಸ್ಟ್​!

    ದಕ್ಷಿಣ ಏಷ್ಯಾದಲ್ಲಿ ಕರೊನಾ ಕಾರಣಕ್ಕೆ ಶ್ರೀಲಂಕಾದ ಆರ್ಥಿಕತೆಯ ನಂತರದಲ್ಲಿ ಅತಿಹೆಚ್ಚಿನ ನಷ್ಟ ಭಾರತಕ್ಕೆ ಆಗಲಿದೆ. ನೇಪಾಳ ಮತ್ತು ಭೂತಾನ್​ಗಳ ಆರ್ಥಿಕತೆ ಬೆಳವಣಿಗೆಯ ಹಾದಿಯಲ್ಲಿದೆ. ಆದರೆ, ಪಾಕಿಸ್ತಾನದ ಡೇಟಾವನ್ನು ಐಎಂಎಫ್​ನ ಈ ವರದಿ ಬಹಿರಂಗಪಡಿಸಿಲ್ಲ. ಆದಾಗ್ಯೂ, ಭಾರತದ ತಲಾ ಜಿಡಿಪಿಯು ಡಾಲರ್​ಗಳ ಲೆಕ್ಕಾಚಾರದಲ್ಲಿ 2021ರಲ್ಲಿ ಶೇಕಡ 8.2ಕ್ಕೆ ಏರಿಕೆಯಾಗಲಿದೆ. ಅಂದರೆ, ಮುಂದಿನ ವರ್ಷ 2030 ಡಾಲರ್ ಮತ್ತು ಬಾಂಗ್ಲಾದೇಶದ ತಲಾ ಜಿಡಿಪಿ 1,990 ಡಾಲರ್ ಆಗಿರಲಿದೆ ಎಂಬುದನ್ನೂ ವರದಿ ಉಲ್ಲೇಖಿಸಿದೆ. (ಏಜೆನ್ಸೀಸ್)

    ಕಬ್ಬನ್​ಪಾರ್ಕ್​ನಲ್ಲಿ ವಾಹನ ಸಂಚಾರ ನಿರ್ಬಂಧ ಕೋರಿದ ಪಿಐಎಲ್: ಸರ್ಕಾರಕ್ಕೆ ನೋಟಿಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts