More

    ಎಲ್ಲರ ಬಾಯಲ್ಲೂ ಇಡ್ಲಿ!; ಯಾಕೆ ಯಾಕೆ ಅನ್ನೋದೇ ಹಲವರ ಪ್ರಶ್ನೆ!

    ಬೆಂಗಳೂರು: ಸದ್ಯ ಬಹುತೇಕ ಎಲ್ಲರ ಬಾಯಲ್ಲೂ ಇಡ್ಲಿಯೇ.. ಅರ್ಥಾತ್, ಈಗ ಎಲ್ಲರೂ ಇಡ್ಲಿಯ ಕುರಿತೇ ಮಾತನಾಡುತ್ತಿದ್ದಾರೆ. ಎಷ್ಟರಮಟ್ಟಿಗೆ ಎಂದರೆ ಟ್ವಿಟರ್​ನಲ್ಲಿ ಇಡ್ಲಿ ಇಂಡಿಯಾ ಟ್ರೆಂಡಿಂಗ್ ಆಗಿಬಿಟ್ಟಿದೆ. ಮಾತ್ರವಲ್ಲ, ಇಡ್ಲಿ ಯಾಕೆ ಟ್ರೆಂಡಿಂಗ್ ಆಗುತ್ತಿದೆ ಎಂಬ ಕುತೂಹಲದಿಂದ ಮತ್ತಷ್ಟು ಮಂದಿ ಅದರ ಬಗ್ಗೆಯೇ ಮಾತನಾಡುತ್ತಿದ್ದಾರೆ.

    ಸೋಷಿಯಲ್ ಮೀಡಿಯಾದಲ್ಲಿ ತಿನಿಸುಗಳ ವಿಚಾರವಾಗಿ ನಡೆಯುವ ಚರ್ಚೆ-ಮೇಲಾಟಗಳು ಬಹಳಷ್ಟು ಮಜಾವಾಗಿ ಇರುತ್ತವೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ, ಚಹಾ ಮತ್ತು ಕಾಫಿ. ಚಹಾ ಹಾಗೂ ಕಾಫಿಯ ಪರವಾಗಿ ಅದನ್ನು ಇಷ್ಟಪಡುವವರು, ‘ಯಾಕೆ ನಾನು ಇಷ್ಟಪಡುವ ಚಹಾವೇ ಬೆಸ್ಟ್​ ಅಥವಾ ಕಾಫಿಯೇ ಬೆಸ್ಟ್’ ಎಂದು ಹಲವಾರು ಬಾರಿ ಪ್ರತಿಪಾದಿಸಿದ್ದು ನಡೆದಿದೆ. ಅದು ಬಹಳಷ್ಟು ಜನರನ್ನು ಯಾವುದಾದರೂ ಒಂದರ ಬಗ್ಗೆ ಮಾತನಾಡುವಂತೆ ಪ್ರೇರೇಪಿಸಿ ಒಂದೊಳ್ಳೆಯ ಸೌಹಾರ್ದಯುತ ಚರ್ಚೆಯನ್ನು ಹುಟ್ಟುಹಾಕಿಬಿಡುತ್ತದೆ.

    ಇದೀಗ ಅಂಥದ್ದೇ ಒಂದು ಬೆಳವಣಿಗೆ ಇಡ್ಲಿಯ ವಿಚಾರದಲ್ಲಾಗಿದೆ. ಇಡ್ಲಿಯ ಕುರಿತಾದ ಮಾತು ಚಟ್ನಿ-ಸಾಂಬಾರ್​ನತ್ತ ಸಾಗುವುದು ಸಹಜವಾದರೂ, ಇನ್ನು ಕೆಲವರು ಅದನ್ನು ದೋಸೆಯ ಪ್ರತಿಸ್ಪರ್ಧಿ ಎಂಬಂತೆ ಮಾತನಾಡುತ್ತಿರುವುದೂ ಕಂಡುಬಂದಿದೆ. ವಿಶೇಷವೆಂದರೆ ಸದ್ಯ ಇಡ್ಲಿಯ ಕುರಿತು ಭಾರತೀಯರಷ್ಟೇ ಅಲ್ಲದೆ, ವಿದೇಶಿಗರೂ ಕುತೂಹಲಗೊಂಡಿದ್ದು, ಅದ್ಯಾಕೆ ಇಡ್ಲಿ ಟ್ರೆಂಡಿಂಗ್ ಆಗುತ್ತಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಒಂದು ಮಾಹಿತಿ ಪ್ರಕಾರ ಇಡ್ಲಿಯ ಬಗ್ಗೆ ಮಾತು ಬೆಳೆಯಲು ಈ ಒಂದು ಟ್ವೀಟ್ ಕಾರಣ ಎಂದು ಹೇಳಲಾಗುತ್ತಿದೆ. @heydambis ಎಂಬ ಹ್ಯಾಂಡಲ್​ನಿಂದ ಮಾಡಲಾಗಿರುವ ಒಂದು ಟ್ವೀಟ್​ ಇಡ್ಲಿಯ ಕುರಿತ ಮಾತುಕತೆಯನ್ನು ಹುಟ್ಟುಹಾಕಿದೆ ಎನ್ನಲಾಗುತ್ತಿದೆ. ‘ನೀವು ಯಾವತ್ತಾದರೂ ಇಡ್ಲಿ-ಚಟ್ನಿಯನ್ನು ವೇಗವಾಗಿ ತಿಂದು ಅದು ಎದೆಯಲ್ಲಿ ಸಿಕ್ಕಿಹಾಕಿಕೊಂಡಂತಾಗಿ ಸತ್ತು ಹೋಗುತ್ತೇನೇನೋ ಅಂತ ಅನಿಸಿ ನೀರು ಕುಡಿದಿದ್ದು ಇದೆಯಾ…’ ಎಂದು ಮಾಡಲಾದ ಈ ಟ್ವೀಟ್​ಗೆ ಒಂದೇ ದಿನದೊಳಗೆ ಐದು ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಇದಕ್ಕೆ ರಿ-ಟ್ವೀಟ್​, ಕೋಟ್​ ಟ್ವೀಟ್​ ಮಾಡಿ ಚರ್ಚೆಗಳು ಉಂಟಾಗಿದ್ದು, ಅದೇ ಇಡ್ಲಿ ಟ್ರೆಂಡಿಂಗ್ ಆಗಲು ಕಾರಣ ಎನ್ನಲಾಗುತ್ತಿದೆ. ಅಂದಹಾಗೆ ಇಡ್ಲಿ ಟ್ರೆಂಡಿಂಗ್ ಆಗುತ್ತಿರುವುದು ಇದೇ ಮೊದಲೇನಲ್ಲ. (ಏಜೆನ್ಸೀಸ್)

    ಎಲ್ಲರ ಬಾಯಲ್ಲೂ ಇಡ್ಲಿ!; ಯಾಕೆ ಯಾಕೆ ಅನ್ನೋದೇ ಹಲವರ ಪ್ರಶ್ನೆ!ಎಲ್ಲರ ಬಾಯಲ್ಲೂ ಇಡ್ಲಿ!; ಯಾಕೆ ಯಾಕೆ ಅನ್ನೋದೇ ಹಲವರ ಪ್ರಶ್ನೆ!

    ಎಲ್ಲರ ಬಾಯಲ್ಲೂ ಇಡ್ಲಿ!; ಯಾಕೆ ಯಾಕೆ ಅನ್ನೋದೇ ಹಲವರ ಪ್ರಶ್ನೆ!

    ಎಲ್ಲರ ಬಾಯಲ್ಲೂ ಇಡ್ಲಿ!; ಯಾಕೆ ಯಾಕೆ ಅನ್ನೋದೇ ಹಲವರ ಪ್ರಶ್ನೆ!

    ಎಲ್ಲರ ಬಾಯಲ್ಲೂ ಇಡ್ಲಿ!; ಯಾಕೆ ಯಾಕೆ ಅನ್ನೋದೇ ಹಲವರ ಪ್ರಶ್ನೆ!

    ಎಲ್ಲರ ಬಾಯಲ್ಲೂ ಇಡ್ಲಿ!; ಯಾಕೆ ಯಾಕೆ ಅನ್ನೋದೇ ಹಲವರ ಪ್ರಶ್ನೆ!

    30 ಸಾವಿರ ಸಸಿಗಳನ್ನು ನೆಟ್ಟ ಮಹಾನ್​ ಪ್ರಕೃತಿಪ್ರೇಮಿ, ಅಂತರ್ಯಾಮಿ!

    ವಧುವಿಗೆ ಹತ್ತನೇ ಕ್ಲಾಸು, ವರನಿಗೆ 30 ವರ್ಷ; ಬಾಲ್ಯವಿವಾಹ ಮಾಡಿಸಿದವರೆಲ್ಲರ ಬಂಧನ..

    ಪ್ರಾಣಿಗಳ ಥರ ಕಾಡಿದ್ರು, ಒಬ್ರೂ ನೆರವಿಗೆ ಬರಲಿಲ್ಲ; ಇದು ಕೋಟ್ಯಧಿಪತಿ ಉದ್ಯಮಿಯ ಸಂಕಟದ ಕಥೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts