More

    ಐಕಾನಿಕ್​ ಚತುಷ್ಟಯರು… ಆಡುವ ದಿನಗಳ ಅತ್ಯಂತ ಶ್ರೇಷ್ಠವಾದ ಸಮಯ… ಎಂದು ಸೌರವ್​ ಗಂಗೂಲಿ ಟ್ವೀಟ್​ ಮಾಡಿದ್ದು ಏಕೆ?

    ನವದೆಹಲಿ: ಅದೊಂದು ಕಾಲವಿತ್ತು. ಕ್ಯಾಪ್ಟನ್​ ಎಂದರೆ ಸೌರವ್ ಗಂಗೂಲಿ. ಬ್ಯಾಟ್ಸ್​ಮನ್​ಗಳೆಂದರೆ ಸಚಿನ್​ ತೆಂಡುಲ್ಕರ್​, ರಾಹುಲ್​ ದ್ರಾವಿಡ್​ ಮತ್ತು ವಿವಿಎಸ್​ ಲಕ್ಷ್ಮಣ್​. ಈ ನಾಲ್ವರನ್ನು ಟೀಂ ಇಂಡಿಯಾದ ಐಕಾನಿಕ್​ ಚತುಷ್ಟಯರು ಎಂದೇ ಕರೆಯಲಾಗುತ್ತಿತ್ತು.

    ಈ ನಾಲ್ವರು ಇರುವ ತಂಡವನ್ನು ಎದುರಿಸಲು ಬಲಿಷ್ಠ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನದಂಥ ತಂಡಗಳು ಕೂಡ ನಡಗುತ್ತಿದ್ದವು. ಈ ಸಂದರ್ಭದಲ್ಲೇ ಟೀಂ ಇಂಡಿಯಾ ವಿದೇಶಗಳಲ್ಲೂ ಟೆಸ್ಟ್​ ಮತ್ತು ಏಕದಿನ ಸರಣಿಗಳನ್ನು ಗೆದ್ದು, ಸರ್ವಶ್ರೇಷ್ಠ ತಂಡವೆನಿಸಿಕೊಂಡಿತ್ತು.

    ಇದೀಗ ಈ ನಾಲ್ವರು ದಿಗ್ಗಜ ಆಟಗಾರರು ಬ್ಯಾಟ್​ಗಳಿಗೆ ವಿಶ್ರಾಂತಿ ನೀಡಿದ್ದಾರೆ. ಇವರ ಪೈಕಿ ಈಗ ಸೌರವ್​ ಗಂಗೂಲಿ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಯ ನಾಯಕತ್ವ ವಹಿಸಿಕೊಂಡಿದ್ದಾರೆ. ಇನ್ನು ಮೂವರು ಆಟಗಾರರು ಒಂದಲ್ಲ ಒಂದು ರೀತಿಯಲ್ಲಿ ಇನ್ನೂ ಭಾರತ ಕ್ರಿಕೆಟ್​ ರಂಗದೊಂದಿಗೆ ನಂಟು ಉಳಿಸಿಕೊಂಡಿದ್ದಾರೆ.

    ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್​ ಗಂಗೂಲಿ ತಾವು ನಾಲ್ವರು ಇರುವ ಚಿತ್ರವನ್ನು ಟ್ವೀಟ್​ ಮಾಡಿ, ಆಡುವ ದಿನಗಳ ಅವಿಸ್ಮರಣೀಯ ಸಮಯ, ಈ ಐಕಾನಿಕ್​ ಚತುಷ್ಟಯರ ನಂತರದಲ್ಲಿ ಯಾರಾದರೂ ಐಕಾನಿಕ್​ ಆಟಗಾರರಿದ್ದರೆ ಹೆಸರಿಸಿ… ನಾವು ಕಾಯುತ್ತೇವೆ ಎಂದು ಸವಾಲು ಹಾಕಿದ್ದಾರೆ.

    ಈ ನಾಲ್ವರನ್ನು ಐಕಾನಿಕ್​ ಚತುಷ್ಟಯರು ಎಂದು ಏಕೆ ಕರೆಯಲಾಗುತ್ತದೆ ಗೊತ್ತೇ? ಈ ನಾಲ್ವರು ಒಟ್ಟಾಗಿ ಒಟ್ಟು 2,151 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇವರ ಬ್ಯಾಟ್​ಗಳಿಂದ 1 ಲಕ್ಷಕ್ಕೂ ಹೆಚ್ಚು ರನ್​ ಹರಿದಿದೆ. ಇವರೆಲ್ಲರೂ ಸೇರಿ ಒಟ್ಟು 247 ಶತಕಗಳನ್ನು ಗಳಿಸಿದ್ದಾರೆ. ಇವರ ಬ್ಯಾಟಿಂಗ್​ ಶ್ರೇಷ್ಠತೆ ಸಾರಲು ಈ ಅಂಕಿಅಂಶಗಳು ಸಾಕೆನಿಸುತ್ತದೆ.

    ಪುತ್ರಿಯ ಹುಟ್ಟುಹಬ್ಬದ ಸಂಭ್ರಮಕ್ಕೆ ಸುಂದರವಾದ ಫೋಟೋ ಪ್ರಕಟಿಸಿ ಶುಭಕೋರಿದ ಅಜಯ್​ ದೇವಗನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts