More

    ಮಹಿಳೆಯರ ಏಕದಿನ ವಿಶ್ವಕಪ್ 2022ಕ್ಕೆ ಮುಂದೂಡಿಕೆ

    ದುಬೈ: ಮುಂದಿನ ವರ್ಷ ೆಬ್ರವರಿಯಲ್ಲಿ ನ್ಯೂಜಿಲೆಂಡ್‌ನಲ್ಲಿ ನಿಗದಿಯಾಗಿದ್ದ ಮಹಿಳೆಯರ ಏಕದಿನ ವಿಶ್ವಕಪ್ ಟೂರ್ನಿಯನ್ನು 2022ಕ್ಕೆ ಮುಂದೂಡಲು ಐಸಿಸಿ ನಿರ್ಧರಿಸಿದೆ. ಈ ಟೂರ್ನಿಯು 2022ರ ೆಬ್ರವರಿ 6ರಿಂದ ಮಾರ್ಚ್ 7ರವರೆಗೆ ಮರುನಿಗದಿಯಾಗಿದೆ.

    ಇದು ಕರೊನಾ ಹಾವಳಿಯಿಂದಾಗಿ ಮುಂದೂಡಿಕೆಯಾಗಿರುವ ಐಸಿಸಿಯ 2ನೇ ಪ್ರಮುಖ ಟೂರ್ನಿ ಎನಿಸಿದೆ. ಇದಕ್ಕೆ ಮುನ್ನ ಈ ವರ್ಷದ ಪುರುಷರ ಟಿ20 ವಿಶ್ವಕಪ್ ಟೂರ್ನಿಯನ್ನೂ ಐಸಿಸಿ ಕರೊನಾ ಹಾವಳಿಯಿಂದಾಗಿ ಮುಂದೂಡಿತ್ತು.

    ನ್ಯೂಜಿಲೆಂಡ್‌ನಲ್ಲಿ ಕರೊನಾ ಪ್ರಕರಣಗಳು ನಿಯಂತ್ರಣದಲ್ಲಿರುವ ನಡುವೆಯೂ ಐಸಿಸಿ, ಮುಂದಿನ ವರ್ಷ ಅಲ್ಲಿ ವಿಶ್ವಕಪ್ ಆಯೋಜಿಸದಿರಲು ನಿರ್ಧರಿಸಲಾಗಿದೆ. ‘ಕಳೆದ ಕೆಲ ತಿಂಗಳಿನಿಂದ ನಾವು ಜಾಗತಿಕ ಕ್ರಿಕೆಟ್ ಟೂರ್ನಿಗಳ ಆಯೋಜನೆಯ ಬಗ್ಗೆ ಪರಿಶೀಲನೆ ನಡೆಸುತ್ತಲೇ ಇದ್ದೇವೆ. ಆದರೆ ಆಟಗಾರರು ಮತ್ತು ಎಲ್ಲರ ಆರೋಗ್ಯ ಮತ್ತು ಸುರಕ್ಷತೆಗೆ ನಮ್ಮ ಮೊದಲ ಆದ್ಯತೆಯಾಗಿದೆ’ ಎಂದು ಐಸಿಸಿಯ ಹಂಗಾಮಿ ಚೇರ್ಮನ್ ಇಮ್ರಾನ್ ಖ್ವಾಜಾ ತಿಳಿಸಿದ್ದಾರೆ.

    ಇದನ್ನೂ ಓದಿ: ಚೆನ್ನೈ ಸೂಪರ್‌ಕಿಂಗ್ಸ್ ತಂಡದಿಂದ ಕುಟುಂಬ ಸದಸ್ಯರಿಗೆ ನಿರ್ಬಂಧ

    ‘ಆಟಗಾರ್ತಿಯರು ಮತ್ತು ಪಾಲ್ಗೊಳ್ಳುವ ದೇಶಗಳಿಗೆ ಟೂರ್ನಿಗೆ ಸಿದ್ಧತೆ ನಡೆಸಲು ಸಾಕಷ್ಟು ಸಮಯ ಒದಗಿಸುವ ದೃಷ್ಟಿಯಿಂದ ನಾವು ಮಹಿಳೆಯರ ಏಕದಿನ ವಿಶ್ವಕಪ್ ಟೂರ್ನಿ ಮುಂದೂಡಿದ್ದೇವೆ. ಟೂರ್ನಿಗೆ ಪ್ರವೇಶ ಪಡೆಯಬೇಕಿರುವ 3 ತಂಡಗಳ ಅರ್ಹತಾ ಟೂರ್ನಿ ಇನ್ನೂ ಬಾಕಿ ಇದೆ’ ಎಂದು ಐಸಿಸಿ ಸಿಇಒ ಮನು ಸಾವ್ನೆ ತಿಳಿಸಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿ ಮುಕ್ತಾಯಗೊಂಡ ಬಳಿಕ ಮಹಿಳೆಯರ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆದಿಲ್ಲ.

    ಐಪಿಎಲ್‌ಗೆ ಕೇಂದ್ರ ಸರ್ಕಾರದಿಂದ ಪ್ರಾಥಮಿಕ ಸಮ್ಮತಿ, ಯುಎಇ ಸ್ಥಳಾಂತರಕ್ಕೆ ಶೀಘ್ರ ಲಿಖಿತ ಅನುಮತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts