More

    ಇಂದು ಐಸಿಸಿ ಸಭೆ, ಟಿ20 ವಿಶ್ವಕಪ್ ಆತಿಥ್ಯ ಅದಲು-ಬದಲು ನಿರೀಕ್ಷೆ

    ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಐಸಿಸಿ) ಪ್ರಭಾವಶಾಲಿ ಮಂಡಳಿಯ ಮಹತ್ವದ ಸಭೆ ಶುಕ್ರವಾರ ನಡೆಯಲಿದ್ದು, ಮುಂದಿನ ಎರಡು ಟಿ20 ವಿಶ್ವಕಪ್ ಟೂರ್ನಿಗಳ ಆತಿಥೇಯ ದೇಶದ ಬಗ್ಗೆ ಸ್ಪಷ್ಟವಾದ ನಿರ್ಧಾರ ಹೊರಬೀಳುವ ನಿರೀಕ್ಷೆ ಇದೆ.

    ಈ ವರ್ಷ ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿದ್ದ ಟಿ20 ವಿಶ್ವಕಪ್ ಈಗಾಗಲೆ ಮುಂದೂಡಿಕೆಯಾಗಿದ್ದರೆ, 2021ರ ಟಿ20 ವಿಶ್ವಕಪ್ ಭಾರತದಲ್ಲಿ ನಿಗದಿಯಾಗಿದೆ. ಐಸಿಸಿ ಕಳೆದ ತಿಂಗಳು ಟಿ20 ವಿಶ್ವಕಪ್ ಮುಂದೂಡುವ ವೇಳೆ, 2021 ಮತ್ತು 2022ರಲ್ಲಿ ಸತತ 2 ವರ್ಷ ಟಿ20 ವಿಶ್ವಕಪ್ ನಡೆಯಲಿದೆ ಎಂದು ತಿಳಿಸಿತ್ತು. ಆದರೆ ಮುಂದಿನ ವರ್ಷದ ಟಿ20 ವಿಶ್ವಕಪ್ ಭಾರತದಲ್ಲಿ ನಿಗದಿಯಂತೆಯೇ ನಡೆಯುವುದೇ ಅಥವಾ ಆಸ್ಟ್ರೇಲಿಯಾ 2022ರಲ್ಲಿ ವಿಶ್ವಕಪ್‌ಗೆ ಆತಿಥ್ಯ ವಹಿಸುವುದೇ ಎಂಬ ಬಗ್ಗೆ ಸ್ಪಷ್ಟಪಡಿಸಿರಲಿಲ್ಲ. ಇದೀಗ ಸಭೆಯಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಧಾರದ ನಿರೀಕ್ಷೆ ಇದ್ದು, 2021ರ ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ಮತ್ತು 2022ರ ವಿಶ್ವಕಪ್ ಭಾರತದಲ್ಲಿ ನಿಗದಿಯಾಗುವ ಸಾಧ್ಯತೆ ಇದೆ.

    ಟಿ20 ವಿಶ್ವಕಪ್ ಟೂರ್ನಿಯ ಆತಿಥೇಯ ದೇಶಗಳ ನಿರ್ಧಾರವು ಐಸಿಸಿ ಚೇರ್ಮನ್ ಆಯ್ಕೆಯ ಸಂಬಂಧ ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಇದೆ.

    ಇದನ್ನೂ ಓದಿ: ಕರೊನಾ ವೈರಸ್​ ಪಾಸಿಟಿವ್​ ವರದಿ ತಳ್ಳಿಹಾಕಿದ ಲಾರಾ

    ಮುಂದಿನ ವರ್ಷಾರಂಭದಲ್ಲಿ ನ್ಯೂಜಿಲೆಂಡ್‌ನಲ್ಲಿ ನಿಗದಿಯಾಗಿರುವ ಮಹಿಳೆಯರ ಏಕದಿನ ವಿಶ್ವಕಪ್ ಟೂರ್ನಿಯ ಭವಿಷ್ಯವೂ ಸಭೆಯಲ್ಲಿ ನಿರ್ಧಾರವಾಗುವ ನಿರೀಕ್ಷೆ ಇದೆ. ನ್ಯೂಜಿಲೆಂಡ್‌ನಲ್ಲಿ ಕರೊನಾ ನಿಯಂತ್ರಣದಲ್ಲಿರುವ ಕಾರಣದಿಂದಾಗಿ ಟೂರ್ನಿ ನಿಗದಿಯಂತೆಯೇ ನಡೆಯುವ ಬಗ್ಗೆ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಹೆಚ್ಚಿದೆ.

    ಮುಂದಿನ ಅಕ್ಟೋಬರ್ 18ರಿಂದ ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿದ್ದ ಟಿ20 ವಿಶ್ವಕಪ್ ಮುಂದೂಡಿಕೆಯಿಂದ ಐಪಿಎಲ್ ಟೂರ್ನಿ ಆಯೋಜನೆಗೆ ಅನುಕೂಲವಾಗಿದೆ. ಆದರೆ, ಈ ವರ್ಷದ ಟೂರ್ನಿಗೆ ಬಹುತೇಕ ಸಿದ್ಧತೆ ಪೂರ್ಣಗೊಳಿಸಿದ್ದ ಆಸ್ಟ್ರೇಲಿಯಾ, ಮತ್ತೆ ಟೂರ್ನಿ ಆಯೋಜನೆಗೆ 2022ರವರೆಗೆ ಕಾಯಲು ಬಯಸುತ್ತಿಲ್ಲ. ಮತ್ತೊಂದೆಡೆ ಬಿಸಿಸಿಐ ಕೂಡ 2021ರಲ್ಲಿ ನಿಗದಿಯಂತೆಯೇ ಟೂರ್ನಿ ಆಯೋಜಿಸುವ ಒಲವು ಹೊಂದಿದೆ. 2023ರಲ್ಲಿ ಮತ್ತೆ ಏಕದಿನ ವಿಶ್ವಕಪ್ ಆತಿಥ್ಯ ವಹಿಸಬೇಕಿರುವ ಕಾರಣ ಬಿಸಿಸಿಐ ಕೂಡ ಸತತ 2 ವರ್ಷ ವಿಶ್ವಕಪ್ ಆಯೋಜನೆ ಬಯಸುತ್ತಿಲ್ಲ ಎನ್ನಲಾಗಿದೆ. ಆದರೆ ಈ ವರ್ಷದ ಟೂರ್ನಿಯ ಟಿಕೆಟ್‌ಗಳನ್ನು ಈಗಾಗಲೆ ಮಾರಾಟ ಮಾಡಿರುವುದರಿಂದ ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ 2021ರಲ್ಲೇ ಟೂರ್ನಿ ಆತಿಥ್ಯ ಒಲಿಯುವ ನಿರೀಕ್ಷೆ ಹೆಚ್ಚಿದೆ.

    ರಾಮಮಂದಿರ ಶಿಲಾನ್ಯಾಸ ಹಿಂದುಗಳಿಗೆ ಐತಿಹಾಸಿಕ ದಿನ ಎಂದ ಪಾಕ್ ಮಾಜಿ ಕ್ರಿಕೆಟಿಗ ಕನೇರಿಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts